ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ಶ್ರೀ ಗುರು ವೈಭವೋತ್ಸವಕ್ಕೆ ಮಂಗಳವಾರ ವಿಧ್ಯುಕ್ತ ವಾಗಿ ಚಾಲನೆ ನೀಡಲಾಯಿತು. ಮಂಗಳವಾರ ಶ್ರೀ ರಾಘವೇಂದ್ರ ಸ್ವಾಮಿಗಳ 399ನೇ ಪಟ್ಟಾಭಿಷೇಕ ಮಹೋ ತ್ಸವ ಅದ್ಧೂರಿಯಾಗಿ ನಡೆಯಿತು. ಜ್ಞಾನಯಜ್ಞ ಕಾರ್ಯಕ್ರಮ ನಿಮಿತ್ತ ಮಂತಾ ಲಯದ ಆನಂದಾಚಾರ್ಯ ದೀವಾನಜೀ ಅವರಿಂದ ಅಷ್ಟೋತ್ತರ ಶತಂ ಜಪ ನಡೆಯಿತು.
ಬಳಿಕ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಮೂಲರಾಮದೇವರ ಪೂಜಾ ಕಾರ್ಯಕ್ರಮ ನಡೆದವು. ಶ್ರೀಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವ ರಿಂದ ರಾಯರ ಮೂಲ ಪಾದುಕೆಗಳನ್ನು ಚಿನ್ನದ ಆಸನದಲ್ಲಿಟ್ಟು ಅಭಿಷೇಕ ಮಾಡಿ ಅರ್ಚಿಸಿದರು. ನಂತರ ಪಾದುಕೆಗಳನ್ನು ರಥದಲ್ಲಿರಿಸಿ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಂಗಳ ವಾದ್ಯಗಳೊಂದಿಗೆ ಪ್ರಾಕಾರದಲ್ಲಿ ರಥೋತ್ಸವ ಜರುಗಿತು.
ಇದೇ ವೇಳೆ ಮಂಗಳೂರಿನ ಕರ್ಣಾಟಕ ಬ್ಯಾಂಕಿನ ಮುಖ್ಯಸ್ಥ ಮಹಾಬಳೇಶ್ವರ ಭಟ್ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸ ಲಾಯಿತು. ನಂತರ ಅನುಗ್ರಹ ಸಂದೇಶ ನೀಡಿದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಮುಂದಿನ ವರ್ಷ ಶ್ರೀ ರಾಘವೇಂದ್ರ ಸ್ವಾಮಿಗಳವರ 400 ಪಟ್ಟಾಭಿ ಷೇಕ ಹಾಗೂ 350ನೇ ಆರಾಧನಾ ಮಹೋ ತ್ಸವ ಹಿನ್ನೆಲೆಯಲ್ಲಿ ಶ್ರೀಮಠದಿಂದ ಒಂದು ವರ್ಷ ಸಮಗ್ರ ಉತ್ಸವವನ್ನು ಆಯೋಜಿಸಲಾಗಿದೆ ಎಂದರು.
ದೇಶದ ವಿವಿಧ ರಾಜ್ಯ ಹಾಗೂ ವಿದೇಶ ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು. ದೇಶಾದ್ಯಂತ ರಾಯರು ಸಂಚರಿಸಿರುವ ಪ್ರದೇಶಗಳಿಗೆ ರಾಯರ ರಥಯಾತ್ರೆ ಮೂಲಕ ಶ್ರೀ ಗುರುಸಾರ್ವ ಭೌಮರ ಪಾದುಕೆ ಹಾಗೂ ಪ್ರತಿಮೆಯನ್ನು ತೆಗೆದುಕೊಂಡು ಹೋಗಿ ಅಲ್ಲಿನ ಭಕ್ತರಿಗೆ ದರ್ಶನ ಭಾಗ್ಯ ನೀಡಲಾಗುತ್ತದೆ ಎಂದರು. ಜತೆಗೆ ಶ್ರೀಮಠದಿಂದ ಬೆಂಗಳೂರಿನಲ್ಲಿ ವಿದ್ಯಾಪೀಠ ಸ್ಥಾಪಿಸಲಾಗುವುದು. ಅಲ್ಲಿ ಸಂಸ್ಕೃತ, ವೇದಶಾಸ್ತ್ರ, ಪೌರೋಹಿತ್ಯ ಬೋಧನೆ ಮಾಡಲಾಗುವುದು ಎಂದು ಹೇಳಿದರು.