ಮಧುಗಿರಿ: ತಾಲೂಕಿನ ಗ್ರಾಪಂಗಳಲ್ಲಿನ ಹಾಟ್‌ಸ್ಪಾಟ್‌ಪ್ರದೇಶಕ್ಕೆ ಹಾಗೂ ಕೋವಿಡ್ ಕೇಂದ್ರಗಳಿಗೆ ಖುದ್ದು ಭೇಟಿನೀಡಿದ ಸಿಇಒ ಡಾ.ವಿದ್ಯಾಕುಮಾರಿ ತಾಲೂಕು ಟಾಸ್ಕ್ಫೋರ್ಸ್ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ತಾಲೂಕಿನ ಬಡವನಹಳ್ಳಿ, ಚಂದ್ರಗಿರಿ, ಸಿದ್ದಾಪುರ,ಮಿಡಿಗೇಶಿ ಹಾಗೂ ಐಡಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದಅವರು, ಚಂದ್ರಗಿರಿ ಗ್ರಾಪಂನಲ್ಲಿ ಗ್ರಾಪಂಮಟ್ಟದ ಟಾಸ್ಕ್ಫೋರ್ಸ್ ಸಭೆ ನಡೆಸಿ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಗ್ರಾಪಂ ಆಡಳಿತಕ್ಕೆ ಅಧಿಕಾರವಿದ್ದು, ಜವಾಬ್ದಾರಿಯುತ ಕಾರ್ಯಗಳನ್ನು ಯಶಸ್ವಿಯಾಗಿಅನುಷ್ಠಾನಗೊಳಿಸಬೇಕು ಎಂದರು.ವಿವಿಧ ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಡಿ ಸೋಂಕಿತರಆರೋಗ್ಯ ವಿಚಾರಿಸಿ ಮಾಹಿತಿ ಪಡೆದ ಅವರು, ಕ್ವಾರಂಟೈನ್‌ಅವಧಿ ಮುಗಿಯುವವರೆಗೂ ಯಾರೂ ಹೊರಗೆ ಬರಬಾರದು.
ಇತರರು ಹೊರಗಡೆ ಅಗತ್ಯವಿದ್ದರೆ ಮಾತ್ರ ಮಾಸ್ಕ್ಧರಿಸಿ, ಸಾಮಾಜಿಕ ಅಂತರದಿಂದ ಓಡಾಡಬೇಕು. ನಿಯಮಿತವಾಗಿ ಸೋಪಿನಿಂದ ಕೈ ತೊಳೆಯುತ್ತಿರಬೇಕು ಎಂದರು.
ಮಿಡಿಗೇಶಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಐಡಿಹಳ್ಳಿಹೋಬಳಿಯ ಕೇಂದ್ರ ಗ್ರಾಪಂಗೆ ಭೇಟಿ ನೀಡಿದ ಅವರು,ಕೋವಿಡ್ ನಿರ್ವಹಣೆಗಾಗಿ ಗ್ರಾಪಂನಿಂದ ಕೈಗೊಂಡಕ್ರಮಗಳನ್ನು ಪರಿಶೀಲಿಸಿದರು.ಗ್ರಾಪಂ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ, ನರೇಗಾಕಾಮಗಾರಿ ಮಾಡಲು ಎಂಜಿನಿಯರ್ ಬರದ ಕಾರಣಕೆಲಸ ನಡೆಯುತ್ತಿಲ್ಲ ಎಂದು ಅಸಮಧಾನ ತೋಡಿಕೊಂಡರು.
ಇದಕ್ಕೆ ಸ್ಥಳದಲ್ಲೇ ಎಂಜಿನಿಯರ್‌ಗೆ ದೂರವಾಣಿಯಲ್ಲಿ ಮಾತನಾಡಿ ತರಾಟೆಗೆ ತಗೆದುಕೊಂಡು ನಾಳೆಬಂದು ಕೆಲಸ ಆರಂಭಿಸುವಂತೆ ತಾಕೀತು ಮಾಡಿದರು.ತಾಪಂ ಇಒ ದೊಡ್ಡಸಿದ್ದಯ್ಯ, ಎಡಿ ಮಧುಸೂದನ್,ಗ್ರಾಪಂ ಪಿಡಿಒ ಶಿಲ್ಪಾ, ಸಂತೋಷ್ ಸಿಂಗ್, ಪ್ರಕಾಶ್,ಜುಂಜೇಗೌಡ, ಗೌಡಪ್ಪ ಹಾಗೂ ಬಡವನಹಳ್ಳಿ ಸಿಪಿಐಹನುಮಂತರಾಯಪ್ಪ ಹಾಗೂ ಇತರರು ಇದ್ದರು.