Advertisement

ಹಾಸ್ಟೆಲ್‌ ವ್ಯವಸ್ಥೆ ನೋಡಿ ಸಿಇಒ ಸಿಡಿಮಿಡಿ

12:18 PM Dec 20, 2018 | Team Udayavani |

ಭಾಲ್ಕಿ: ಪಟ್ಟಣದ ಉಪನ್ಯಾಸಕರ ಬಡಾವಣೆಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಹಾಂತೇಶ ಬೀಳಗಿ ದೀಢಿರ್‌ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಸಿಡಿಮಿಡಿಗೊಂಡರು. ವಸತಿ ನಿಲಯದಲ್ಲಿ ಪದವಿ ವ್ಯಾಸಂಗಕ್ಕಾಗಿ ವಾಸವಾಗಿದ್ದ ವಿದ್ಯಾರ್ಥಿನಿಯರನ್ನು ಭೇಟಿಯಾದ ಸಿಇಒ, ಊಟದ ಗುಣಮಟ್ಟ, ನೀರಿನ ವ್ಯವಸ್ಥೆ, ಸ್ವತ್ಛತೆ ಕುರಿತು ವಿಚಾರಿಸಿದರು. ಇಲ್ಲಿ ಊಟ, ನೀರಿನ ವ್ಯವಸ್ಥೆ ಚೆನ್ನಾಗಿದೆ. ಆದರೆ 51 ವಿದ್ಯಾರ್ಥಿನಿಯರಿಗೆ ಎರಡೇ ಶೌಚಾಲಯಗಳು ಲಭ್ಯವಿದೆ. ಆದ್ದರಿಂದ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಖಾಸಗಿ ಬಾಡಿಗೆ ಕಟ್ಟಡದ ವಸತಿ ನಿಲಯಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತವೆ. 

Advertisement

ಕಾರಣ ಸರ್ಕಾರ, ಇಲಾಖೆಯಿಂದಲೇ ವಸತಿ ನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಿ ಎಲ್ಲ ಸೌಲಭ್ಯ ಒದಗಿಸಿದರೆ ಉತ್ತಮವಾಗುತ್ತದೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು. ಹಾಸ್ಟೆಲ್‌ ಕಟ್ಟಡದ ಸುತ್ತಮುತ್ತ ಹುಲ್ಲುಕಂಟಿ ಬೆಳೆದು ಹೊಲಸು ನಾರುತ್ತಿದೆ. ವಸತಿ ನಿಲಯದ ವಾತಾವರಣ ಸ್ವತ್ಛತೆಯಿಂದ ಕೂಡಿರಬೇಕು. ಶೌಚಾಲಯ ವ್ಯವಸ್ಥೆ ಸರಿಪಡಿಸಲು ಸ್ಥಳದಲ್ಲಿದ್ದ ಬಿಸಿಎಂ ವಿಸ್ತೀರ್ಣಾಧಿಕಾರಿ ನಾಗವೇಣಿ ಅವರಿಗೆ ಸಿಇಒ ತಾಕೀತು ಮಾಡಿದರು. ತಾಪಂ ಕಾರ್ಯನಿರ್ವಣಾಧಿಕಾರಿ ಸೂರ್ಯಕಾಂತ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next