Advertisement

Chocolate company: ಶತಮಾನದ ಚಾಕೋಲೆಟ್‌ ಕಂಪನಿ ಕಾರ್ಯಾಚರಣೆ ಸ್ಥಗಿತ!

09:55 PM Jun 21, 2023 | Team Udayavani |

ಸಿಡ್ನಿ: ಶತಮಾನದಷ್ಟು ಹಳೆಯದಾದ ಆಸ್ಟ್ರೇಲಿಯದ ಚಾಕೋಲೆಟ್‌ ತಯಾರಿಕಾ ಕಂಪನಿ ಆರ್ಥಿಕ ದುಸ್ಥಿತಿಯನ್ನು ಅನುಭವಿಸುತ್ತಿದ್ದು, ಇದರಿಂದ ನೂರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. “ಅರ್ನೆಸ್ಟ್‌ ಹಿಲಿಯರ್‌ ಚಾಕೋಲೆಟ್ಸ್‌’ ಅತ್ಯಧಿಕ ಕಾರ್ಯನಿರ್ವಹಣಾ ವೆಚ್ಚದ ಕಾರಣ ಚಾಕೋಲೆಟ್‌ಗಳ ತಯಾರಿಕೆಯನ್ನು ನಿಲ್ಲಿಸುತ್ತಿರುವುದಾಗಿ ಬುಧವಾರ ಘೋಷಿಸಿದೆ. 1914ರಲ್ಲಿ ಆರಂಭವಾದ ಈ ಕಂಪನಿಯು, 600ಕ್ಕೂ ಹೆಚ್ಚು ಬಗೆಯ ಚಾಕೋಲೆಟ್‌ಗಳನ್ನು ತಯಾರಿಸುತ್ತಿತ್ತು.

Advertisement

ಆಸ್ಟ್ರೇಲಿಯ, ನ್ಯೂಜಿಲೆಂಡ್‌ ಸೇರಿದಂತೆ ವಿವಿಧ ದೇಶಗಳಿಗೆ ಚಾಕೋಲೆಟ್‌ಗಳನ್ನು ಸರಬರಾಜು ಮಾಡುತಿತ್ತು. “ಅತ್ಯಧಿಕ ಕಾರ್ಯನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ ತಯಾರಿಕೆ ನಿಲ್ಲಿಸಿದ್ದೇವೆ. ಖರೀದಿದಾರರಿಗಾಗಿ ಎದುರು ನೋಡುತ್ತಿದ್ದೇವೆ. ಒಮ್ಮೆ ಖರೀದಿದಾರರು ಮುಂದೆ ಬಂದರೆ, ಉದ್ಯೋಗಿಗಳನ್ನು ಕಂಪನಿಯಲ್ಲಿ ಮುಂದುವರಿಸಬಹುದಾಗಿದೆ’ ಎಂದು ಅರ್ನೆಸ್ಟ್‌ ಹಿಲಿಯರ್‌ ಚಾಕೊಲೆಟ್ಸ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next