Advertisement

ತಿಹಾರ್‌ ಜೈಲಲ್ಲಿದ್ದಾರೆ ಸೆಂಚುರಿ ಕೇಸಿನ ಕುಟುಂಬ!

10:15 AM Nov 03, 2017 | Team Udayavani |

ಹೊಸದಿಲ್ಲಿ: “ಮನೆಯೇ ಮೊದಲ ಪಾಠ ಶಾಲೆ.ತಾಯಿ ಮೊದಲ ಗುರು’ ಎಂಬ ಮಾತಿದೆ. ಆದರೆ, ಹೊಸದಿಲ್ಲಿಯಲ್ಲಿರುವ ಈ ಕುಟುಂಬಕ್ಕೆ ಉತ್ತಮ ಕೆಲಸದ ಬದಲು ಕೆಟ್ಟ ಕೆಲಸಕ್ಕೇ ಈ ಗಾದೆ ಕುಮ್ಮಕ್ಕು ಕೊಟ್ಟಿದೆ. ತಾಯಿ ಮತ್ತು ಆಕೆಯ ಆರು ಗಂಡು ಮಕ್ಕಳು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ತಿಹಾರ್‌ ಜೈಲಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸಮಾಧಾನಕರ ವಿಚಾರವೆಂದರೆ, ಮಹಿಳೆಯ ಪತಿ ಮತ್ತು ನಾಲ್ವರು ಪುತ್ರಿಯರು ಕರಾಳ ಇತಿಹಾಸ ಹೊಂದಿಲ್ಲ. ಇವರು ಕುರಿ ಮೇಯಿಸುತ್ತಾ ಬದುಕು ಸಾಗಿಸುತ್ತಿದ್ದಾರೆ. ಆದರೆ, ತಾಯಿ ಮತ್ತು 6 ಮಂದಿ ಪುತ್ರರು ಕಳ್ಳಬಟ್ಟಿಯಿಂದ ಕೊಲೆ ಮಾಡುವವರೆಗೆ ಯಾವ ರೀತಿಯ ಕುಕೃತ್ಯ ಗಳನ್ನು ನಡೆಸಲು ಸಾಧ್ಯವಿದೆಯೋ ಅದನ್ನೆಲ್ಲ  ಮಾಡಿ ಜೈಲು ಪಾಲಾಗಿದ್ದಾರೆ. 15-38 ವಯೋಮಿತಿಯ ಮಕ್ಕಳ ವಿರುದ್ಧ ಶಿಕ್ಷೆ ಜಾರಿಯಾಗಿದೆ. ಒಟ್ಟು 100 ಕೇಸುಗಳು ಇವರ ಮೇಲಿವೆ.

Advertisement

7 ವರ್ಷಗಳ ಹಿಂದೆ ಮಹಿಳೆ ಮತ್ತು ಆಕೆಯ ಕುಟುಂಬ ರಾಜಸ್ಥಾನದ ಧೋಲ್ಪುರದಿಂದ ಹೊಸದಿಲ್ಲಿಯ ಸಂಗಂ ವಿಹಾರಕ್ಕೆ ಬಂದು ನೆಲೆಸಿತ್ತು. ಕುಟುಂಬದ ಆದಾಯಕ್ಕಾಗಿ ಬಸಿರಾನ್‌ (62) ಕಳ್ಳಬಟ್ಟಿ ವ್ಯಾಪಾರಕ್ಕೆ ಇಳಿದರು. ಸಂಗಂ ವಿಹಾರದ ಸುತ್ತಮುತ್ತಲಿರುವ ಕುಪ್ರಸಿದ್ಧರೆಲ್ಲ ಮಹಿಳೆಯ ಕಡೆಯಿಂದ ಸಾರಾಯಿ ಖರೀದಿಸುತ್ತಿದ್ದರು. ಹೀಗಾಗಿ ಆಕೆಯ ಮಕ್ಕಳು ಅವರ ಸಹವಾಸಕ್ಕೆ ಬಿದ್ದರು. ಮಹಿಳೆಯ ಮೇಲೆ 11 ಕೇಸುಗಳಿದ್ದರೆ, ಪುತ್ರ ವಕೀಲ್‌ ಮೇಲೆ, 10, ಶಕೀಲ್‌ ಮೇಲೆ 15, ಶಮೀಮ್‌ ಅಲಿಯಾಸ್‌ ಗುಂಗಾ ವಿರುದ್ಧ 61, ಸನ್ನಿ ಮೇಲೆ 4, ಫೈಜಲ್‌ ವಿರುದ್ಧ 3, ರಾಹುಲ್‌ ಮೇಲೆ 3 ಕೇಸುಗಳಿವೆ.

ತೀರಾ ಇತ್ತೀಚೆಗೆ 15ರ ಬಾಲಕನ ವಿರುದ್ಧ ಕಾರು ಕಳವು ಕೇಸು ದಾಖಲಾಗಿದೆ. ಸದ್ಯ ಆತನನ್ನು ಮನಃ ಪರಿವರ್ತನ ಕೇಂದ್ರಕ್ಕೆ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next