Advertisement

ರೈಲ್ವೆ ಮಂಡಳಿಯ ಮೊದಲ ಮಹಿಳಾ ಸಿಇಒ ಮತ್ತು ಅಧ್ಯಕ್ಷೆಯಾಗಿ ಜಯಾ ವರ್ಮಾ ಸಿನ್ಹಾ

07:07 PM Aug 31, 2023 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಜಯಾ ವರ್ಮಾ ಸಿನ್ಹಾ ಅವರನ್ನು ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ರೈಲ್ವೆ ಸಚಿವಾಲಯದ 105 ವರ್ಷಗಳ ಇತಿಹಾಸದಲ್ಲಿ ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಅಲಹಾಬಾದ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾದ ಜಯಾ ವರ್ಮಾ ಸಿನ್ಹಾ ಅವರು 1988 ರಲ್ಲಿ ಭಾರತೀಯ ರೈಲ್ವೆ ಸಂಚಾರ ಸೇವೆ (IRTS) ಗೆ ಸೇರಿದ್ದರು. ಉತ್ತರ ರೈಲ್ವೆ, ಆಗ್ನೇಯ ರೈಲ್ವೆ ಮತ್ತು ಪೂರ್ವ ರೈಲ್ವೆ ಹೀಗೆ ಮೂರು ರೈಲ್ವೆ ವಲಯಗಳಲ್ಲಿ ಕೆಲಸ ಮಾಡಿದರು.

“ಭಾರತೀಯ ರೈಲ್ವೆ ನಿರ್ವಹಣಾ ಸೇವೆಗಳು (IRMS), ಸದಸ್ಯ (ಕಾರ್ಯಾಚರಣೆ ಮತ್ತು ವ್ಯಾಪಾರ ಅಭಿವೃದ್ಧಿ), ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹುದ್ದೆಗೆ ಜಯ ವರ್ಮಾ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ (ACC) ಅನುಮೋದನೆ ನೀಡಿದೆ” ಎಂದು ವರದಿ ಹೇಳಿದೆ.

ಜಯ ವರ್ಮಾ ಸಿನ್ಹಾ ಅವರು ಅನಿಲ್ ಕುಮಾರ್ ಲಹೋಟಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಸೆಪ್ಟೆಂಬರ್ 1 ರಂದು ಸಿನ್ಹಾ ಅಧಿಕಾರ ವಹಿಸಿಕೊಳ್ಳುತ್ತಾರೆ. ಅನಿಲ್ ಕುಮಾರ್ ಅವರ ಅಧಿಕಾರಾವಧಿಯು ಆಗಸ್ಟ್ 31, 2024 ರಂದು ಕೊನೆಗೊಳ್ಳುತ್ತದೆ. ಸಿನ್ಹಾ ಅವರು ಅಕ್ಟೋಬರ್ 1 ರಂದು ನಿವೃತ್ತರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next