ಹೊಸದಿಲ್ಲಿ: ಅಸ್ಸಾಂ- ಮಿಜೋರಾಂ ನಡುವಿನ ಗಡಿ ಸಮಸ್ಯೆಗೆ ಇತಿಶ್ರೀ ಹಾಡಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಉಪಗ್ರಹ ಆಧಾರಿತ ಗಡಿ ಗುರುತು ತಂತ್ರಜ್ಞಾನದ ಮೂಲಕ ಎರಡೂ ರಾಜ್ಯಗಳ ಗಡಿಗಳನ್ನು ಮತ್ತೆ ಗುರುತಿಸಲು ತೀರ್ಮಾನಿಸಿದೆ. ಈ ಜವಾಬ್ದಾರಿಯನ್ನು ಈಶಾನ್ಯ ವಲಯದ ಬಾಹ್ಯಾಕಾಶ ತಂತ್ರಜ್ಞಾನ ಅನುಷ್ಠಾನ ಕೇಂದ್ರ (ಎನ್‌ಇಎಸ್‌ಎಸಿ) ಹಾಗೂ ಈಶಾನ್ಯ ವ್ಯವಹಾ ರಗಳ ಸಮಿತಿಗೆ (ಎನ್‌ಇಸಿ) ವಹಿಸಲಾಗಿದೆ.
ಜು. 26ರಂದು ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಭುಗಿಲೆದ್ದಿದ್ದ ಗಡಿ ಘರ್ಷಣೆಯಲ್ಲಿ ಅಸ್ಸಾಂನ ಎಂಟು ಪೊಲೀಸರು ಹುತಾತ್ಮರಾಗಿ, ನಾಗರಿಕ ಸಾವಿಗೀಡಾಗಿದ್ದ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ ಕಾ ರ, ಈ ಹೆಜ್ಜೆಯಿಟ್ಟಿದೆ. ಮತ್ತೂಂದೆಡೆ, ಜು.26ರ ಘಟನೆಗೆ ಸಂಬಂಧಿಸಿದಂತೆ, ಅಸ್ಸಾಂ ಮುಖ್ಯಂಮತ್ರಿ ಹಿಮಂತ ಬಿಸ್ವಾಸ್ ವಿರುದ್ಧ ಮಿಜೋರಾಂ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ಅಲ್ಲಿನ ಸರ ಕಾ ರ ಹಿಂಪಡೆದಿದೆ.
ಇನ್ನು, ಎರಡೂ ರಾಜ್ಯಗಳ ಮನವಿಯಂತೆ, ಕೇಂದ್ರೀಯ ಮೀಸಲು ಪಡೆಯನ್ನು (ಸಿಆರ್‌ಪಿಎಫ್) ಅಸ್ಸಾಂ- ಮಿಜೋರಾಂ ಗಡಿ ಭಾಗದ ಕಾವಲಿಗಾಗಿ ಕೇಂದ್ರ ಸರ ಕಾ ರ ರವಾನಿಸಿದ್ದು, ರವಿ ವಾ ರದಿಂದಲೇ ಸಿಆರ್‌ಪಿಎಫ್ ಯೋಧರು ಅಲ್ಲಿ ಶಾಂತಿ ಪಾಲನಾ ಪಡೆಯಂತೆ ಕಾರ್ಯ ನಿರ್ವಹಿಸಲಾರಂಭಿಸಿದ್ದಾರೆ.
ಅಮಿತ್ ಶಾ ಚರ್ಚೆ :
ಎರಡೂ ರಾಜ್ಯಗಳ ಗಡಿ ಸಮಸ್ಯೆಗೆ ಸಂಬಂ ಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರವಿ ವಾ ರ ಅಸ್ಸಾಂ ಸಿಎಂ ಹಿಮಂತ ಬಿಸ್ವಾಸ್ ಶರ್ಮಾ, ಮಿಜೋರಾಂ ಸಿಎಂ ಝೊರಂತಂಗಾ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎರಡೂ ರಾಜ್ಯಗಳು ಈ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳು ವಂತೆ ಶಾ, ಇಬ್ಬರೂ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದು, ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ.