Advertisement

Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ

12:39 PM Nov 13, 2024 | Team Udayavani |

ಇಂಫಾಲ್: ಮಣಿಪುರದಲ್ಲಿ ಹೊಸ ದಾಳಿಗಳು ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೇಂದ್ರವು ಸುಮಾರು 2,000 ಸಿಬಂದಿಗಳನ್ನು ಒಳಗೊಂಡ 20 ಹೆಚ್ಚುವರಿ ಸಿಎಪಿಎಫ್ ತುಕಡಿಗಳನ್ನು ಮಣಿಪುರಕ್ಕೆ ರವಾನಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

Advertisement

ಈ ಘಟಕಗಳ ಏರ್‌ಲಿಫ್ಟಿಂಗ್ ಮತ್ತು ತತ್ ಕ್ಷಣದ ನಿಯೋಜನೆಗಾಗಿ ಗೃಹ ಸಚಿವಾಲಯ ಮಂಗಳವಾರ ರಾತ್ರಿ ಆದೇಶ ಹೊರಡಿಸಿದೆ. ಸೋಮವಾರ ಸಿಆರ್‌ಪಿಎಫ್ ಜತೆಗಿನ ಭೀಕರ ಗುಂಡಿನ ಚಕಮಕಿಯಲ್ಲಿ ಕನಿಷ್ಠ 10 ಶಂಕಿತ ಉಗ್ರಗಾಮಿಗಳು ಹತರಾಗಿದ್ದಾರೆ. ಸೇನಾ ಸಮವಸ್ತ್ರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ಬಂಡುಕೋರರು ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಪಕ್ಕದ ಸಿಆರ್‌ಪಿಎಫ್ ಶಿಬಿರದ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರು.

ಜಿರಿಬಾಮ್‌ನಲ್ಲಿ ಮತ್ತೆ ಸುತ್ತಿನ ಹಿಂಸಾಚಾರದಿಂದಾಗಿ ಕಳೆದ ವಾರದಿಂದ ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಸೋಮವಾರದ ಘಟನೆಯ ನಂತರ, ಇಂಫಾಲ್ ಕಣಿವೆಯ ಅನೇಕ ಸ್ಥಳಗಳಿಂದ ಹಿಂಸಾಚಾರಗಳ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next