Advertisement

ಕೇಂದ್ರದಿಂದಲೇ ಹೊಸ ಒಟಿಟಿ?

09:09 PM Feb 16, 2023 | Team Udayavani |

ನವದೆಹಲಿ:  ದೇಶದ ಮನರಂಜನಾ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಒಟಿಟಿ ಪ್ಲಾಟ್‌ಫಾರಂನಲ್ಲೂ ಪ್ರವೇಶ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಜತೆಗೆ ಈ ವರ್ಷವೇ ಮೊಬೈಲ್‌ನಲ್ಲಿಯೇ ಟಿವಿ ಕಾರ್ಯಕ್ರಮಗಳ ಪ್ರಸಾರ – “ಡೈರೆಕ್ಟ್ ಟು ಮೊಬೈಲ್‌ ಟೆಲಿವಿಷನ್‌’ ಪ್ರಯೋಗಕ್ಕೆ ಮುಂದಾಗಿದೆ.

Advertisement

ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಎಫ್ಎಂ ರೇಡಿಯೋ ತರಂಗಾತರಗಳನ್ನು ಹರಾಜು ಹಾಕಲು ಯೋಜಿಸಿದೆ. ಈ ಕುರಿತು ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಅಪೂರ್ವ ಚಂದ್ರ, “ದೇಶದ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಕೂಡ ಎಫ್ಎಂ ರೇಡಿಯೋ ಕೇಂದ್ರಗಳ ವಿಸ್ತಾರಣೆಯ ನಿಟ್ಟಿನಲ್ಲಿ ಈ ವರ್ಷ ಎಫ್ಎಂ ರೇಡಿಯೋ ತರಂಗಾಂತರಗಳ ಹರಾಜಿಗೆ ಮುಂದಾಗಿದ್ದೇವೆ,’ ಎಂದು ತಿಳಿಸಿದರು.

ಒಟಿಟಿ ವ್ಯಾಪ್ತಿಯಲ್ಲಿ ಕೂಡ ಪ್ರಸಾರ ಭಾರತಿಯ ಕಾರ್ಯಕ್ರಮಗಳು ಪ್ರಸಾರವಾಗಬೇಕು. ಪ್ರಸಕ್ತ ವರ್ಷವೇ ಒಟಿಟಿ ಪ್ರವೇಶದ ಗುರಿ ಈಡೇರಲಿದೆ. ದೇಶದಲ್ಲಿ ಈಗಾಗಲೇ ಹಲವು ಎಫ್ಎಂ ರೇಡಿಯೋ ಕೇಂದ್ರಗಳು ಇವೆ. ಆದರೆ ದೇಶದ ಶೇ.60ರಷ್ಟು ಪ್ರದೇಶಗಳಿಗೆ ಮಾತ್ರ ಇದರ ಸೇವೆ ವ್ಯಾಪಿಸಿದೆ. ಪ್ರಸಾರ ಭಾರತಿಯ ಕೇಳುಗರ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರಸಾರ ಮೂಲಸೌಕರ್ಯ ಮತ್ತು ಜಾಲ ಅಭಿವೃದ್ಧಿ(ಬಿಐಎನ್‌ಡಿ) ಯೋಜನೆಯಡಿ ಕೇಂದ್ರ ಸರ್ಕಾರ 2,500 ಕೋಟಿ ರೂ.ಗಳನ್ನು ಮೀಸಲಿರಿಸಿದೆ,’ ಎಂದು ಅಪೂರ್ವ ಚಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next