Advertisement

ತಂಬಾಕು ಪ್ಯಾಕಲ್ಲಿ  ಸಹಾಯವಾಣಿ ಸಂಖ್ಯೆ

10:55 AM Dec 04, 2017 | Team Udayavani |

ಹೊಸದಿಲ್ಲಿ: ತಂಬಾಕು ಉತ್ಪನ್ನಗಳ ಪ್ಯಾಕ್‌ ಮೇಲೆ ಹೆಚ್ಚುವರಿ ಚಿತ್ರ ಮತ್ತು ಸಂದೇಶಗಳನ್ನು ಮುದ್ರಿಸುವುದಕ್ಕಾಗಿ ಆದೇಶ ಹೊರಡಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಧೂಮಪಾನ ತಡೆಗೆ ಸಂಬಂಧಿಸಿ ಸಹಾಯವಾಣಿ ಸಂಖ್ಯೆ ಕೂಡ ನಮೂದಿ ಸುವಂತೆ ಸೂಚಿಸಲು ನಿರ್ಧರಿಸಲಾಗಿದೆ. ಈಗಾಗಲೇ ರಾಷ್ಟ್ರೀಯ ತಂಬಾಕು ಸೇವನೆ ವಜ್ಯ ಸಹಾಯವಾಣಿ 1800 227787 ಅನ್ನು ನಿಗದಿಸಲಾಗಿದ್ದು, ಇದನ್ನು ತಂಬಾಕು ಉತ್ಪನ್ನಗಳ ಪ್ಯಾಕ್‌ ಮೇಲೆ ಮುದ್ರಿಸುವಂತೆ ಸೂಚಿಸಲಾಗುತ್ತದೆ. ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಚಟದಿಂದ ಮುಕ್ತರಾಗಲು ಉಚಿತ ಬೆಂಬಲ ಮತ್ತು ಮಾರ್ಗದರ್ಶನ ಪಡೆಯಬಹುದಾಗಿರುತ್ತದೆ. 

Advertisement

2016ರಲ್ಲಿ ಹೊಸ ನಿಯಮಾವಳಿ ರೂಪಿಸಿದ್ದ ಆರೋಗ್ಯ ಸಚಿವಾಲಯವು ಆರೋಗ್ಯದ ಅಪಾಯದ ಬಗ್ಗೆ ಎಚ್ಚರಿಕೆಯನ್ನು ಪ್ಯಾಕ್‌ನ ಮೇಲೆ ಶೇ.85ರಷ್ಟು ಭಾಗದಲ್ಲಿ ನಮೂದಿಸುವುದು ಕಡ್ಡಾಯಗೊಳಿಸಿತ್ತು. ಇದೀಗ ಸಚಿವಾಲಯವು ಮತ್ತೂಂದು ಸುತ್ತಿನ ಮರುಪರಿಶೀಲನೆ ನಡೆಸಿದ್ದು, ಹೆಚ್ಚುವರಿ ಚಿತ್ರ ಮತ್ತು ಸಂದೇಶಗಳನ್ನು ಪ್ರಕಟಿಸಬಹುದಾದ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next