ಹೊಸದಿಲ್ಲಿ: ಪ್ರತೀ ವರ್ಷದಂತೆ ಈ ಬಾರಿಯೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ. ವಿವಿಧ ರಾಜ್ಯಗಳಲ್ಲಿ ಶೇ.4ರಿಂದ ಶೇ.10ರಷ್ಟು ವೇತನ ವನ್ನು ಹೆಚ್ಚಿಸಲಾಗಿದೆ. 2024ರ ಎ.1ರಿಂದ ಪರಿಷ್ಕೃತ ವೇತನ ಜಾರಿಯಾಗಲಿದೆ.
ವೇತನ ಹೆಚ್ಚದ ಅನಂತರ ಹರಿಯಾಣದಲ್ಲಿ ಅತ್ಯಧಿಕ ದಿನಕ್ಕೆ 374 ರೂ. ಹಾಗೂ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಅತ್ಯಂತ ಕಡಿಮೆ 234 ರೂ. ಇದೆ. ಇದೇ ವೇಳೆ ಸಿಕ್ಕಿಂನ ಮೂರು ಪಂಚಾಯತ್‌ಗಳಾದ ಗ್ನಾಥಂಗ್, ಲಾಚುಂಗ್ ಮತ್ತು ಲಾಚೆನ್‌ನಲ್ಲಿ ದಿನಕ್ಕೆ 374ರೂ. ವೇತನ ಇದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿರು ವುದರಿಂದ ಕೇಂದ್ರ ಚುನಾವಣ ಆಯೋಗ ದಿಂದ ಅನುಮತಿ ಪಡೆದು ಅನಂತರ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಅಧಿ ಸೂಚನೆ ಹೊರಡಿಸಿದೆ. ಪರಿಷ್ಕೃತ ದಿನಕೂಲಿಯ ಪ್ರಕಾರ, ಪಶ್ಚಿಮ ಬಂಗಾಲದಲ್ಲಿ 250 ರೂ., ತಮಿಳುನಾಡಿನಲ್ಲಿ 319 ರೂ. ಆಗುತ್ತದೆ.
ರಾಜ್ಯದಲ್ಲಿ ಶೇ.10ರಷ್ಟು ಏರಿಕೆ
ಕರ್ನಾಟಕದಲ್ಲಿ ಕಳೆದ ವರ್ಷ ಕಾರ್ಮಿಕರ ದಿನಗೂಲಿ 316 ರೂ. ಇತ್ತು. ಇದೀಗ ಶೇ.10ರಷ್ಟು ಏರಿಕೆಯಾಗಿ ದ್ದು, ದಿನಕ್ಕೆ 347ರೂ. ನೀಡಲಾಗುತ್ತದೆ.
ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ. ಕಾಂಗ್ರೆಸ್ ದಿನಕ್ಕೆ 400ರೂ. ಕೂಲಿ ನೀಡುವ ಭರವಸೆ ನೀಡಿದೆ.
ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ