Advertisement

ಆವಾಸ ಯೋಜನೆ ಮನೆ ವಿಸ್ತೀರ್ಣ ಹೆಚ್ಚಳ

07:35 AM Nov 17, 2017 | |

ನವದೆಹಲಿ: ಪ್ರಧಾನ ಮಂತ್ರಿ ಆವಾಸ ಯೋಜನೆಯ ಮಧ್ಯಮ ಆದಾಯ ವಿಭಾಗದಡಿಯಲ್ಲಿ (ಎಂಐಜಿ) ಮನೆ ಗಳ ವಿಸ್ತೀರ್ಣ(ಕಾಪೆìಟ್‌ ಏರಿಯಾ) ಹೆಚ್ಚಳಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

Advertisement

ಎಂಐಜಿ-1ರಲ್ಲಿ  ಮನೆ ವಿಸ್ತೀರ್ಣ ಕೇವಲ 90 ಚದರ ಮೀಟರ್‌ ನಿಗದಿಸಲಾಗಿತ್ತು. ಈಗ ಇದನ್ನು 120 ಚ.ಮೀ.ಗೆ ವಿಸ್ತರಿಸಲಾಗಿದೆ. ಎಂಐಜಿ-2 ನಲ್ಲಿ 110 ಚ.ಮೀ. ನಿಂದ 150 ಚ.ಮೀ.ಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಹೇಳಿದ್ದಾರೆ. 6 ಲಕ್ಷ ರೂ.ನಿಂದ 12 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ಕುಟುಂಬಗಳಿಗೆ ಎಂಐಜಿ-1 ವಿಭಾಗದಲ್ಲಿ, 9 ಲಕ್ಷದವರೆಗೆ ಶೇ.4ರ ಬಡ್ಡಿ ದರದಲ್ಲಿ, 12ರಿಂದ 18 ಲಕ್ಷ ರೂ. ಆದಾಯ ಹೊಂದಿರುವ ಕುಟುಂಬಗಳಿಗೆ 12 ಲಕ್ಷದವರೆಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next