Advertisement

ಯಾಸಿನ್‌ ಮಲಿಕ್ ನ ಜಮ್ಮು-ಕಾಶ್ಮೀರ್‌ ಲಿಬರೇಷನ್‌ ಫ್ರಂಟ್‌ ಬ್ಯಾನ್‌ 

01:40 PM Mar 22, 2019 | Team Udayavani |

ಹೊಸದಿಲ್ಲಿ: ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಭೀಕರ  ದಾಳಿಯ ಬಳಿಕ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಪ್ರತ್ಯೇಕತವಾದಿ ಉಗ್ರ ಯಾಸಿನ್‌ ಮಲಿಕ್ ನೇತೃತ್ವದ ಜಮ್ಮು-ಕಾಶ್ಮೀರ್‌ ಲಿಬರೇಷನ್‌ ಫ್ರಂಟ್‌ ಸಂಸ್ಥೆಯನ್ನು ಬ್ಯಾನ್‌ ಮಾಡಿದೆ. 

Advertisement

ಪಾಕ್‌ ಸಂಕಲ್ಪ ದಿನವಾಗಿರುವ ಮಾರ್ಚ್‌ 22 ರಂದೇ ಕೇಂದ್ರ ಸರ್ಕಾರ ಜೆಕೆಎಲ್‌ಎಫ್ ಸಂಘಟನೆಯನ್ನು ನಿಷೇಧಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ  ಭದ್ರತಾ ಸಂಪುಟ ಸಮಿತಿಯ ಸಭೆಯಲ್ಲಿ ಈ ದಿಟ್ಟ ನಿರ್ಧಾರವನ್ನು ಕೈಗೊಳ್ಳಲಾಗಿದೆ. 

ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗುಬ್ಟಾ ಅವರು ಜೆಕೆಎಲ್‌ಎಫ್ ಸಂಘಟನೆಯನ್ನು ಬ್ಯಾನ್‌ ಮಾಡಿರುವುದಾಗಿ ಘೋಷಿಸಿದ್ದಾರೆ. 1988ರಿಂದ ಸಕ್ರೀಯವಾಗಿರುವ ಉಗ್ರ ಸಂಘಟನೆಯಾಗಿದ್ದು, ಕಾಶ್ಮೀರಿ ಪಂಡಿತರು ಮತ್ತು ಸರ್ಕಾರಿ ಎಜೆನ್ಸಿ, ಸೇರಿದಂತೆ ಭದ್ರತಾ ಪಡೆಗಳ ಮೇಲೆ ಹಲವು ದಾಳಿಗಳಲ್ಲಿ ಭಾಗಿಯಾಗಿದೆ. 37 ಎಫ್ಐಆರ್‌ಗಳು ಸಂಘಟನೆಯ ಮೇಲೆ ಇದ್ದು, ಹಲವು ಬಾರಿ ವಿಚಾರಣೆಗೊಳಪಟ್ಟಿದೆ, ಹೀಗಾಗಿ ಸಂಘಟನೆಯನ್ನು ಬ್ಯಾನ್‌ ಮಾಡಿರುವುದಾಗಿ ತಿಳಿಸಿದ್ದಾರೆ. 

ಉಗ್ರ ಯಾಸೀನ್‌ ಮಲಿಕ್ನನ್ನು ಫೆಬ್ರವರಿ 22 ರಂದು ಬಂಧಿಸಿ ಕೋಟ್‌ ಬಲ್ವಾಲ್‌ ಜೈಲಿನಲ್ಲಿ ಇರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next