ನವದೆಹಲಿ: ಬೆಟ್ಟಿಂಗ್ ತಾಣಗಳ ಬಗ್ಗೆ ಜಾಹೀರಾತು ಪ್ರಕಟಿಸದಂತೆ ನ್ಯೂಸ್ ವೆಬ್‌ಸೈಟ್‌ಗಳು, ಒಟಿಟಿ ಮತ್ತು ಖಾಸಗಿ ಸ್ಯಾಟಲೈಟ್ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ.
ಇದನ್ನೂ ಓದಿ : ಸಿಡಿಎಸ್ ಅನಿಲ್ ಚೌಹಾಣ್‌ಗೆ Z+ ಭದ್ರತೆ ಒದಗಿಸಿದ ದೆಹಲಿ ಪೊಲೀಸರು
ಬೆಟ್ಟಿಂಗ್ ತಾಣಗಳು ಹಾಗೂ ಬೆಟ್ಟಿಂಗ್‌ಗೆ ಪ್ರೇರಣೆ ನೀಡುವ ಯಾವುದೇ ಜಾಹೀರಾತು ಪ್ರಕಟಿಸದಂತೆ ಖಾಸಗಿ ಸ್ಯಾಟಲೈಟ್ ಚಾನೆಲ್‌ಗಳಿಗೆ ಮತ್ತು ಅದರ ನ್ಯೂಸ್ ವೆಬ್‌ಸೈಟ್‌ಗಳಿಗೆ ಖಡಕ್ಕಾಗಿ ಸೂಚನೆ ನೀಡಲಾಗಿದೆ.ಅಲ್ಲದೇ ಈ ಸೂಚನೆ ಉಲ್ಲಂಘಿಸಿದರೆ ಕಾನೂನು ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಖಾಸಗಿ ಸ್ಯಾಟಲೈಟ್ ಚಾನೆಲ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಜತೆಗೆ ಇದೇ ರೀತಿಯ ಸೂಚನೆಗಳನ್ನು ಡಿಜಿಟಲ್ ಮಾಧ್ಯಮ ಮತ್ತು ಒಟಿಟಿ ವೇದಿಕೆಗಳಿಗೆ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಕಳುಹಿಸಿದೆ.