Advertisement

ಸೆಂಟ್ರಲ್‌ ವಾರ್ಡ್‌ಗಳ ಚಿತ್ರಣ|ಅಭಿವೃದ್ಧಿ ಚಿತ್ರಣದೋಳ್‌ ಸಮಸ್ಯೆಗಳ ಸರಮಾಲೆ

01:49 PM Aug 29, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಸುಮಾರು 25 ವಾರ್ಡ್‌ಗಳನ್ನು ಒಳಗೊಂಡಿರುವ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಲಭ್ಯ, ಅಭಿವೃದ್ಧಿ ಚಿತ್ರಣ ಗರಿಗೆದರುತ್ತಿದೆಯಾದರೂ, ಸಮಸ್ಯೆಗಳ ಸರಮಾಲೆಗೆ ಕೊರತೆ ಇಲ್ಲ.

ರಸ್ತೆ, 24×7 ಕುಡಿಯುವ ನೀರು, ಉದ್ಯಾನ, ಮನೆ ಮನೆಗೆ ಪೈಪ್‌ ಮೂಲಕ ಅಡುಗೆ ಅನಿಲ ಪೂರೈಕೆ, ಒಳಚರಂಡಿ ಕಾಮಗಾರಿಗಳು ನಡೆಯುತ್ತಿದ್ದರೂ ನಿರೀಕ್ಷೆಯಷ್ಟು ಸವಲತ್ತು ದೊರೆಯುತ್ತಿಲ್ಲ ಎಂಬ ನೋವು ಅನೇಕರದ್ದಾಗಿದೆ. ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿರುವ, ಹಾಲಿ ಮುಖ್ಯಮಂತ್ರಿ, ಕೇಂದ್ರ ಸಚಿವ, ವಿಧಾನಪರಿಷತ್ತು ಸಭಾಪತಿ ನಿವಾಸಗಳು, ರಾಷ್ಟ್ರಧ್ವಜ ನಿರ್ಮಾಣ ಕೇಂದ್ರ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಕಿಮ್ಸ್‌ ಸೇರಿದಂತೆ ಪ್ರಮುಖ ಆಸ್ಪತ್ರೆಗಳು ಇರುವುದು ಇದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ.

2011ರಜನಗಣತಿಪ್ರಕಾರ ಸುಮಾರು2,85,934ಜನಸಂಖ್ಯೆಹೊಂದಿರುವಈ ಕ್ಷೇತ್ರ,ಕೆಲ ವರ್ಷಗಳಿಂದ ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆ ಹಾಕುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಮುಖ ಪ್ರಯೋಜನ ಪಡೆದುಕೊಳ್ಳುತ್ತಿದೆ. ಇದೇ ಕ್ಷೇತ್ರ ವ್ಯಾಪ್ತಿಯಲ್ಲಿ ಬೈರಿದೇವರಕೊಪ್ಪ, ಉಣಕಲ್ಲ, ಬೆಂಗೇರಿ, ಗೋಪನಕೊಪ್ಪದಂತಹ ಹಲವು ಹಳ್ಳಿಗಳು ಬರುತ್ತವೆ. ಮಹಾನಗರ ಪಾಲಿಕೆ ಪ್ರಧಾನ ಕಚೇರಿ, ನೈಋತ್ಯ ರೈಲ್ವೆ ವಲಯ ಇರುವುದು ಇದೇ ಕ್ಷೇತ್ರ ವ್ಯಾಪ್ತಿಯಲ್ಲಿ. ಪಾಲಿಕೆ 67 ವಾರ್ಡ್‌ ಹೊಂದಿದ್ದಾಗ 19 ವಾರ್ಡ್‌ಗಳು ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದವು. ಇದೀಗ 35-60ನೇ ವಾರ್ಡ್‌ವರೆಗೂ 25 ವಾರ್ಡ್‌ಗಳಿವೆ. ಪಾಲಿಕೆಯಲ್ಲಿ ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿ ಯತ್ನಿಸುತ್ತಿದೆ.  ಅಧಿಕಾರ ಕಸಿಯುವ ತವಕದಲ್ಲಿ ಕಾಂಗ್ರೆಸ್‌ ಇದೆ. ಇದು ಸಾಧ್ಯವಾಗಬೇಕಾದರೆ ಇಲ್ಲಿನ 25 ವಾರ್ಡ್‌ಗಳಲ್ಲಿ ಮೇಲುಗೈ ಪಡೆಯಬೇಕಾಗಿದೆ.

ಹೇಳುವವರು, ಕೇಳುವವರು ಇಲ್ಲ

Advertisement

ರಸ್ತೆ ಸಮಸ್ಯೆ ಪ್ರಮುಖವಾಗಿದೆ. ಮುಖ್ಯ ರಸ್ತೆಗಳೇ ಆಕಾರ ಕಳೆದುಕೊಂಡ ಸ್ಥಿತಿಯಲ್ಲಿವೆ. ಒಳರಸ್ತೆಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಿದೆ. ಅದೆಷ್ಟೋ ಪ್ರಮುಖ ರಸ್ತೆಗಳು ಮಳೆ ಬಂದರೆ ಹೊಂಡಗಳಾಗುತ್ತವೆ, ಬೇಸಿಗೆಯಲ್ಲಿ ಧೂಳಿನ ಕಾರ್ಖಾನೆಗಳಾಗುತ್ತವೆ. ರಸ್ತೆ ಅಗೆತಕ್ಕೆ ಕೊನೆ ಇಲ್ಲವಾಗಿದೆ. ಇದಕ್ಕೆ ಹೇಳುವವರು, ಕೇಳುವವರು ಯಾರು ಇಲ್ಲವೇನೋ ಎಂದೆನಿಸುತ್ತಿದೆ. ಇಲಾಖೆಗಳ ಸಂಯೋಜನೆ ಕೊರತೆಯಿಂದಾಗಿ ರಸ್ತೆ ಮಾಡಿದ ಮರು ದಿನವೇ ಜಲಮಂಡಳಿ, ಖಾಸಗಿ ಟೆಲಿಕಾಂ ಕಂಪೆನಿಗಳು, ಇನ್ನಿತರ ಇಲಾಖೆಗಳು ರಸ್ತೆ ಅಗೆಯುತ್ತಾರೆ. ಒಳಚರಂಡಿ ವ್ಯವಸ್ಥೆಗೆಂದು ಅಗೆದ ರಸ್ತೆಗಳು ಅನೇಕ ಕಡೆ ಇಂದಿಗೂ ದುರಸ್ತಿ ಭಾಗ್ಯ ಕಂಡಿಲ್ಲ.

­ಜನರಿಗೆ ಸಂಕಟ ತಂದ ತಿಕ್ಕಾಟ

ಬೀದಿ ದೀಪಗಳು ಬೆಳಗಿದಾಗಲೇ ಖರೇ ಎನ್ನುವಂತಿವೆ. ಪಾಲಿಕೆ-ವಿದ್ಯುತ್‌ ಗುತ್ತಿಗೆದಾರರ ನಡುವಿನ ತಿಕ್ಕಾಟ ಜನರಿಗೆ ಪ್ರಾಣ ಸಂಕಟ ತಂದೊಡ್ಡತೊಡಗಿದೆ. ಅನೇಕ ಬಡಾವಣೆಗಳಲ್ಲಿ ಬೀದಿ ದೀಪಗಳೇ ಇಲ್ಲ. ಬೀದಿ ದೀಪಗಳ ನಿರ್ವಹಣೆಯನ್ನು ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗುತ್ತದೆ. ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ, ನಿರ್ವಹಣೆಜವಾಬ್ದಾರಿಅವರದ್ದಾಗಿರಲಿದ್ದು,ಶೀಘ್ರದಲ್ಲಿಯೇ ಅದು ಅನುಷ್ಠಾನಗೊಳ್ಳಲಿದೆ ಎಂದು ಹೇಳಿಯೇ ವರ್ಷಗಳು ಉರುಳಿವೆ. ಫಲ ಮಾತ್ರ ಜನರಿಗೆ ಸಿಕ್ಕಿಲ್ಲ.

­ಮತ್ತದೇ ರಸ್ತೆಯಲ್ಲಿ ಸಂತೆ ಶುರು

ಸ್ಮಾರ್ಟ್‌ಸಿಟಿ ಯೋಜನೆಗಳ ಆಮೆವೇಗ ಜನರು ರೋಸಿ ಹೋಗುವಂತೆ ಮಾಡಿದೆ. ಸ್ಮಾರ್ಟ್‌ಸಿಟಿ ಯೋಜನೆ ಫಲವಿದು ಎಂದು ಜನರಿಗೆ ಗೋಚರಿಸುವಂತಹ ಯಾವುದೇ ಕಾಮಗಾರಿ ಕಾಣುತ್ತಿಲ್ಲ. ಇದೇ ಯೋಜನೆಯ ಬಹುಪಯೋಗಿ ಕಾರುಗಳ ನಿಲುಗಡೆ ಕಟ್ಟಡ ನಿರ್ಮಾಣ ಆಳವಾದ ದೊಡ್ಡ ಗುಂಡಿ ಬಿಟ್ಟರೆ ಬೇರೇನೂ ಇಲ್ಲದ

ಸ್ಥಿತಿಯಲ್ಲಿದೆ. ರಸ್ತೆಯಲ್ಲಿನ ಸಂತೆ ಬೇಡ ಸಂಚಾರಕ್ಕೆ ತೊಂದರೆ ಎಂದುಕೇಶ್ವಾಪುರದ ಸಂತೆಯನ್ನು ಬೆಂಗೇರಿಗೆವರ್ಗಾಯಿಸಿ ಮಾರುಕಟ್ಟೆ ನಿರ್ಮಾಣ ಕಾರ್ಯ ಕೈಗೊಂಡಿದ್ದರೂ, ಮತ್ತದೇ ರಸ್ತೆಯಲ್ಲಿ ಸಂತೆ ಶುರುವಾಗಿದೆ. ಅದರ ತಡೆಗೆ ಕ್ರಮ ಇಲ್ಲವಾಗಿದೆ.

­ಈಡೇರದ ಯೋಜನೆಗಳ ‌ ಉದೇಶ ‌

ವಿದ್ಯಾನಗರದಿಂದ ತೋಳನಕರೆಯ ರಸ್ತೆ ತನ್ನ ಉದ್ದೇಶಕ್ಕೆ ನ್ಯಾಯ ಕೊಡುವಲ್ಲಿ ವಿಫಲವಾಗಿದೆ. ಸೈಕಲ್‌ ಮಾರ್ಗ ನಿರ್ಮಾಣವಾದರೂ ಅದರ ಬಳಕೆಗೆ ಸಾಧ್ಯವಾಗದ ಸ್ಥಿತಿ ಇದೆ. ನಾಲೆ-ರಾಜ ಕಾಲುವೆಗಳ ಸ್ವತ್ಛತೆಗೆ ಇನ್ನಷ್ಟು ಕ್ರಮ‌

ಅವಶ್ಯಕತೆಯಿದೆ. ಅನೇಕ ಬಡಾಣೆಗ‌ಳಿಗೆ ಸೌಲಭ್ಯಗಳ ಹಂಚಿಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲವಾಗಿದೆ. ಕ್ಷೇತ್ರ ವ್ಯಾಪ್ತಿಯ ಐಟಿ ಪಾರ್ಕ್‌ ಕಟ್ಟಡ ಮೂಲ ಉದ್ದೇಶಕ್ಕಿಂತ ಅನ್ಯ ಬಳಕೆಗೆ ಲಭ್ಯ ಎನ್ನುವಂತಾಗಿದೆ.

­ಒಳಚರಂಡಿ ವ್ಯವಸ್ಥೆ :

ಒಟ್ಟಾರೆ ಹುಬ್ಬಳ್ಳಿಯ ಚಿತ್ರಣ ನೋಡಿದರೆ ಶೇ. 35-40 ಮಾತ್ರ ಒಳಚರಂಡಿ ವ್ಯವಸ್ಥೆ ಹೊಂದಿತ್ತು. ಅದಕ್ಕೆ ಹು-ಧಾ ಕೇಂದ್ರ ವಿಧಾನಸಭೆ ಕ್ಷೇತ್ರವೂ ಹೊರತಾಗಿರಲಿಲ್ಲ. 2008ರ ನಂತರದಲ್ಲಿ ಗಣನೀಯವಾಗಿ ಹು-ಧಾ ಕೇಂದ್ರ ವಿಧಾನಸಭೆ ಕ್ಷೇತ್ರ ಸೇರಿದಂತೆ ವಿವಿಧೆಡೆ ಒಳಚರಂಡಿ ವ್ಯವಸ್ಥೆ ಕಾಮಗಾರಿ ಚುರುಕುಗೊಂಡಿತು.

­24×7 ನೀರಿನ ಯೋಜನೆ

ದೇಶಕ್ಕೆ ಮಾದರಿಯಾಗಿರುವ 24×7 ನೀರು ಪೂರೈಕೆ ಯೋಜನೆಯನ್ನು ಈ ಹಿಂದೆ ಎಸ್‌.ಎಂ. ಕೃಷ್ಣ ನೇತೃತ್ವದ ಸರಕಾರ ಹುಬ್ಬಳ್ಳಿ-ಧಾರವಾಡದಲ್ಲಿ ಕೈಗೊಂಡಿತ್ತು. ಪ್ರಾಯೋಗಿಕವಾಗಿ ಅವಳಿನಗರದ ತಲಾ ನಾಲ್ಕು ವಾರ್ಡ್‌ಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಹುಬ್ಬಳ್ಳಿಯ ನಾಲ್ಕು ವಾರ್ಡ್‌ ಗಳ ಪ್ರಾಯೋಗಿಕ ಅನುಷ್ಠಾನ ಆಗಿದ್ದು ಇದೇ ಕ್ಷೇತ್ರದಲ್ಲಿ. ಮುಂದೆ ಇದು ಇತರೆ ವಾರ್ಡ್‌ಗಳಿಗೂ ವಿಸ್ತರಣೆಗೊಂಡಿತು. ದೇಶದ ವಿವಿಧ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಇದು

ಮಾದರಿಯಾಗಿತ್ತು.

­ರಸ್ತೆಗಳ ನಿರ್ಮಾಣ: ವಿದ್ಯಾನಗರದ ಶಿರೂರು ಪಾರ್ಕ್‌ ರಸ್ತೆಯಿಂದ ತೋಳನಕರೆವರೆಗೂ ಟೆಂಡರ್‌ಶ್ಯೂರ್‌ ರಸ್ತೆ ವಿವಿಧ ವಿಶೇಷತೆಗಳೊಂದಿಗೆ ನಿರ್ಮಾಣಗೊಂಡಿದೆ. ಈ ಭಾಗದ ಮೊದಲ ಟೆಂಡರ್‌ಶ್ಯೂರ್‌ ರಸ್ತೆ ಹೆಗ್ಗಳಿಕೆ ಇದಕ್ಕಿದೆ. ಸಿಆರ್‌ಎಫ್‌ ನಿಧಿಯಡಿ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಸಿಮೆಂಟ್‌ ರಸ್ತೆಗಳು ನಿರ್ಮಾಣಗೊಂಡಿವೆ, ನಿರ್ಮಾಣ ಹಂತದಲ್ಲಿವೆ.

­ಉದ್ಯಾನಗಳಿಗೆ ಅಭಿವೃದ್ಧಿ ಸ್ಪರ್ಶ

ನೃಪತುಂಗ ಬೆಟ್ಟ ಅಭಿವೃದ್ಧಿ ಸ್ಪರ್ಶ ಪಡೆದುಕೊಂಡಿದೆ. ಬೆಟ್ಟದ ತಟದಲ್ಲಿ ಪಂಚವಟಿ ಉದ್ಯಾನ ರೂಪುಗೊಂಡಿದೆ. ಇದೀಗ ಬೆಟ್ಟದಲ್ಲಿ ಸುಮಾರು50ಲಕ್ಷರೂ.ವೆಚ್ಚದಲ್ಲಿ ಜಿಮ್‌ ಸಲಕರಣೆಗಳಅಳವಡಿಕೆಗೆ ಮುಂದಡಿ ಇರಿಸಲಾಗಿದೆ. ಬೆಟ್ಟದ ಸೆರಗಿನಲ್ಲಿ ಪಿರಾಮಿಡ್‌ ಮಾದರಿ ಧ್ಯಾನಮಂದಿರ ಇದೆ. ಇಂದಿರಾ ಗಾಜಿನಮನೆ ಆವರಣದಲ್ಲಿ ಮಹಾತ್ಮಾ ಗಾಂಧಿ ಉದ್ಯಾನ, ತೋಳನಕೆರೆ ಹಾಗೂ ಉದ್ಯಾವನ, ಕೇಶ್ವಾಪುರ ಸೇರಿದಂತೆ ವಿವಿಧ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಒಂದು ಕಾಲಕ್ಕೆ ಕುಡಿಯಲು ಬಳಸುತ್ತಿದ್ದ ಉಣಕಲ್ಲ ಕೆರೆ ನೀರಿಗೆ ಚರಂಡಿ ನೀರು ಸೇರಿ ಇಡೀಕೆರೆ ಅಸ್ತಿತ್ವಕ್ಕೆ ಧಕ್ಕೆ ತಂದಿತ್ತು. ಚರಂಡಿ ನೀರು ತಡೆಗೆಕ್ರಮ ಹಾಗೂ ಕೆರೆ ಬಳಿ ಉದ್ಯಾನ ಅಭಿವೃದ್ಧಿ ಪಡಿಸಲಾಗಿದೆ.

ಸ್ಮಾರ್ಟ್ ಸಿಟಿ ಪ್ರಯೋಜನ :

ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ  ನೆರವೇರಿಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಉಣಕಲ್ಲ, ಬೆಂಗೇರಿ ಸಂತೆ ಮಾರುಕಟ್ಟೆಗಳಿಗೆ  ಆಧುನಿಕ ರೂಪ ನೀಡಲಾಗುತ್ತಿದೆ. ನೆಹರು ಮೈದಾನ ಅಭಿವೃದ್ಧಿ ಹೊಂದುತ್ತಿದೆ. ಮನೆ ಮನೆಗಳಿಗೆ ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ಪೂರೈಕೆ ಯೋಜನೆ ಪ್ರಾಯೋಗಿಕ ಅನುಷ್ಠಾನದಡಿ ಧಾರವಾಡ ಜಿಲ್ಲೆ ಆಯ್ಕೆಯಾಗಿದ್ದು, ಅದರ ಹೆಚ್ಚಿನ ಪ್ರಯೋಜನ ಇದೇ ಕ್ಷೇತ್ರದ ಅನೇಕ ವಾರ್ಡ್‌ಗಳು ಪಡೆದುಕೊಳ್ಳತೊಡಗಿವೆ.ಹಲವುಯೋಜನೆಗಳುಪ್ರಗತಿಹಂತದಲ್ಲಿವೆ. ಇನ್ನಷ್ಟು ಯೋಜನೆಗಳ ನೀಲನಕ್ಷೆ ಸಿದ್ಧಗೊಳ್ಳತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next