Advertisement

ಕೇಂದ್ರ ವಿ.ವಿ. ಪ್ರವೇಶಕ್ಕೆ ಇನ್ನು ಸಿಇಟಿ ?

10:10 PM Dec 26, 2020 | mahesh |

ಹೊಸದಿಲ್ಲಿ: ಕೇಂದ್ರ ವಿಶ್ವವಿದ್ಯಾನಿಲಯಗಳ ಪದವಿ ತರಗತಿಗಳ ಪ್ರವೇಶಾತಿಗೆ “ಹೈ ಕ್ವಾಲಿಟಿ ಆಪ್ಟಿಟ್ಯೂಡ್‌ ಪರೀಕ್ಷೆ’ (ಉನ್ನತ ಗುಣಮಟ್ಟದ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ) ನಡೆಸಲು ಕೇಂದ್ರ ಸರಕಾರ ಮುಂದಾಗಿದ್ದು, ಪರೀಕ್ಷಾ ವಿಧಾನಗಳ ಕುರಿತು ಶಿಫಾರಸು ಮಾಡಲೆಂದು ಏಳು ಸದಸ್ಯರ ಸಮಿತಿಯನ್ನು ರಚಿಸಿದೆ.

Advertisement

ಕಾಲೇಜು ಪ್ರವೇಶ ಪ್ರಕ್ರಿಯೆ ವೇಳೆ 12ನೇ ತರಗತಿ ಫ‌ಲಿತಾಂಶದ ಆಧಾರದ ಕಟ್‌ಆಫ್ ಮಾರ್ಕ್‌ನ ಕಿರಿಕಿರಿಯನ್ನು ತಪ್ಪಿಸುವ ಉದ್ದೇಶದಿಂದ ಸರಕಾರ ಈ ಕ್ರಮ ಕೈಗೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2021-22ರ ಶೈಕ್ಷಣಿಕ ವರ್ಷದಲ್ಲೇ ಕೇಂದ್ರ ವಿ.ವಿ.ಗಳ ಪ್ರವೇಶಾತಿಗೂ ಸಾಮಾನ್ಯ ಪ್ರವೇಶ ಪರೀಕ್ಷೆ ನಿಯಮ ಜಾರಿಯಾಗಲಿದೆ.

ಅದರಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದರಷ್ಟೇ ಕೇಂದ್ರ ವಿ.ವಿ.ಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಒಂದು ಸಾಮಾನ್ಯ ಪರೀಕ್ಷೆಯಿರಲಿದ್ದು, ಅದರ ಜತೆಗೆ ಆಯಾ ವಿಷಯ ಆಧಾರಿತ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್‌ ಖಾರೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next