ನವದೆಹಲಿ: ಸದ್ಯದಲ್ಲೇ ವಿಧಾನಸಭೆ ಚುನಾವಣೆಗೆ ಸಾಕ್ಷಿಯಾಗಲಿರುವ ಕರ್ನಾಟಕದ ವಿವಿಧ ಭಾಗಗಳಿಗೆ ಕೇಂದ್ರ ಸಾರಿಗೆ ಸಚಿವಾಲಯ ಹಲವಾರು ಹೆದ್ದಾರಿಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.
ಉತ್ತರ ಕರ್ನಾಟಕ ಮತ್ತು ಮೈಸೂರು ಭಾಗದ ಹೆದ್ದಾರಿಗಳು ಅಭಿವೃದ್ಧಿಯಾಗಲಿವೆ. ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಕನಮಾಡಿ-ಬಿಜ್ಜರಗಿ-ತಿಕೋಟಾಸಂಪರ್ಕ ಮಾಡುವ ಎನ್ ಎಚ್ 166ಇ ಹೆದ್ದಾರಿ ವಿಸ್ತರಣೆಗಾಗಿ 196.05 ಕೋಟಿ ರೂ.ಗಳ ಅನುಮೋದನೆ ನೀಡಲಾಗಿದೆ.
ಹಾಗೆಯೇ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಎನ್‌ಎಚ್ 548 ಬಿ ನಲ್ಲಿರುವ ಮುರ್ರಮ್‌ನಿಂದ ವಿಜಯಪುರದ ಐಬಿ ವೃತ್ತದವರೆಗಿನ ರಸ್ತೆ ವಿಸ್ತರಣೆಗಾಗಿ 957.09 ಕೋಟಿ ರೂ. ಅನುದಾನ ನೀಡಲಾಗುತ್ತದೆ.
ಕೊಪ್ಪಳ-ಗದಗ ಜಿಲ್ಲೆಯ ಭಾನಾಪುರ ಗದ್ದನಕೇರಿ ವಲಯದ ಎನ್ ಎಚ್ 367ರಲ್ಲಿ ಬರುವ ಕುಕುನೂರ್, ಯೆಲಬುರ್ಗಾ, ಗಜೇಂದ್ರಗಡದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ 333.96 ಕೋಟಿ ರೂ.
Related Articles
ಇದೇ ವಲ ಯದ ಸರ್ಜಾಪುರದಿಂದ ಪಟ್ಟದಕಲ್ಲಿಗೆ ತೆರಳುವ ರಸ್ತೆ ವಿಸ್ತರಣೆಗಾಗಿ 445.62 ಕೋಟಿ ರೂ. ನೀಡಲು ಹೆದ್ದಾರಿ ಸಚಿವಾಲಯ ಒಪ್ಪಿಗೆ ನೀಡಿದೆ. ಇನ್ನು ಮೈಸೂರಿನಿಂದ ಕುಶಾಲ ನಗರದ ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕಾಗಿ 1,649.25 ಕೋಟಿ ರೂ. ಅನುದಾನ ಒದಗಿಸಲು ನಿರ್ಧರಿಸಲಾಗಿದೆ. ಕುಶಾಲನಗರ ಬಳಿ ಇರುವ ಗುಡ್ಡೆ ಹೊಸೂರಿನಿಂದ ಮೈಸೂರು ಬಳಿ ಇರುವ ಇಲವಾಲ-ಕೆ.ಆರ್. ನಗರ ಜಂಕ್ಷನ್‌ಗೆ ಸಂಪರ್ಕಿಸುತ್ತದೆ.