Advertisement
ಗೋವಾ ಎಂದರೆ “ಗೋ-ಆ” ಹೋಗಿ ಬನ್ನಿ ಎಂದರ್ಥ. ಸಿನೆಮಾ ಕ್ಷೇತ್ರದಲ್ಲಿಯೂ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡೋಣ. ಇದಕ್ಕಾಗಿ ನಮ್ಮ ಮೇಲೆ ನಮಗೆ ವಿಶ್ವಾಸ ಬಹಳ ಮುಖ್ಯ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಅನುರಾಗ ಠಾಕೂರ್ ನುಡಿದರು.
Related Articles
Advertisement
ಇದನ್ನೂ ಓದಿ :ವಿಟ್ಲ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು
ಬಾಲಿವುಡ್ ಖ್ಯಾತಿಯ ಅಜಯ್ ದೇವಗನ್, ಸುನೀಲ್ ಶೆಟ್ಟಿ, ಮನೋಜ್ ವಾಜಪೇಯಿ, ಪರೇಶ್ ರಾವಲ್ ರವರನ್ನು ಸನ್ಮಾನಿಸಲಾಯಿತು.
ಸ್ಪ್ಯಾನಿಷ್ ಚಲನಚಿತ್ರ ನಿರ್ಮಾಪಕ ಕಾರ್ಲೋಸ್ ಸೌರಾ ಅವರನ್ನು ಸತ್ಯಜಿತ್ ‘ರೇ ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರು. ದೇಶ ವಿದೇಶಿಯ ಚಲನಚಿತ್ರ ಕ್ಷೇತ್ರದ ಕಲಾವಿದರು. ಪಾಲ್ಗೊಂಡಿದ್ದರು.
ಪ್ರಪಂಚದಾದ್ಯಂತ ಬೆಳ್ಳಿ ಪ್ರಪಂಚದ ಶಿಖರವಾದ ಭಾರತದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉಧ್ಘಾಟನೆಗೊಂಡಿದ್ದು, ಈ ವರ್ಷ, 72 ಕ್ಕೂ ಹೆಚ್ಚು ದೇಶಗಳ 280 ಚಿತ್ರಗಳು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಭಾರತದ 45 ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಮರಾಠಿ, ಕೊಂಕಣಿ ಮತ್ತಿತರ ಭಾಷೆಗಳ ಚಿತ್ರಗಳನ್ನು ಚಲನಚಿತ್ರ ಪ್ರೇಮಿಗಳು ವೀಕ್ಷಿಸಬಹುದಾಗಿದೆ. ಪ್ರಸಕ್ತ ವರ್ಷ ಫ್ರಾನ್ಸ್ ಫೋಕಸ್ ಕಂಟ್ರಿ ದೇಶವಾಗಿದೆ, ಇದರಿಂದಾಗಿ ಫ್ರಾನ್ಸ ದೇಶದ ಹಲವು ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಭಾರತದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್ 28 ರವರೆಗೆ ನಡೆಯಲಿದೆ.