Advertisement
ತನ್ನ ವ್ಯಾಪ್ತಿಯಲ್ಲಿನ 37 ಗ್ರಂಥಾಲಯಗಳಿಗೆ ಪ್ರಧಾನವಾಗಿರುವ ಗ್ರಂಥಾಲಯವಿದು. ಸುಮಾರು 68 ಸಾವಿರ ಪುಸ್ತಕ ಸಂಗ್ರಹಗಳು, ದಿನಪತ್ರಿಕೆ, ನಿಯತಕಾಲಿಕಗಳನ್ನು ಹೊಂದಿರುವ ಉತ್ತಮ ಗ್ರಂಥಾಲಯ ಇದಾಗಿದೆ. ಇಲ್ಲಿ ಸುಮಾರು 7,000 ಓದುಗರು ಸದಸ್ಯತ್ವವನ್ನು ಪಡೆದಿದ್ದಾರೆ.
ಶೌಚಾಲಯದ ಬಾಗಿಲುಗಳು ಮುರಿದಿವೆ. ಒಳಗಡೆ ಹೋದರೆ ಸ್ವಚ್ಛತೆಯೂ ಇಲ್ಲ. ಆಗಾಗ್ಗೆ ನೀರಿನ ಕೊರತೆಯೂ ಕಾಡುತ್ತದೆ. ದಿನಂಪ್ರತಿ ನೂರಾರು ಮಂದಿ ಗ್ರಂಥಾಲಯಕ್ಕೆ ಭೇಟಿ ನೀಡುವುದರಿಂದ ವ್ಯವಸ್ಥಿತ ಶೌಚಾಲಯದ ಅಗತ್ಯ ಗ್ರಂಥಾಲಯಕ್ಕೆ ಇದೆ. ರಸ್ತೆಯ ಬದಿಯಲ್ಲೇ ಇರುವುದರಿಂದ ಗ್ರಂಥಾಲಯಕ್ಕೆ ಬರುವವರನ್ನು ಬಿಟ್ಟು ಹೊರಗಿನಿಂದ ಸಾರ್ವಜನಿಕರು ಬಂದು ಹಾಳು ಮಾಡುತ್ತಿದ್ದಾರೆ ಎನ್ನುವುದು ಗ್ರಂಥಾಲಯ ಸಿಬಂದಿಯ ಆರೋಪ. ಸೂಕ್ತವಾದ ವ್ಯವಸ್ಥೆಯನ್ನು ಮಾಡಿ ಬೀಗ ಹಾಕಿಟ್ಟಲ್ಲಿ ಬೇರೆಯವರು ದುರುಪಯೋಗಪಡಿಸುವುದನ್ನು ತಪ್ಪಿಸಬಹುದು. ಶೌಚಾಲಯವನ್ನು ಸಮರ್ಪಕಗೊಳಿಸಬೇಕು ಎಂದು ಗ್ರಂಥಾಲಯದ ಓದುಗರು ಆಗ್ರಹಿಸಿದ್ದಾರೆ. ಪ್ರಸ್ತಾವನೆ ಸಲ್ಲಿಸಲಾಗಿದೆ
ಗ್ರಂಥಾಲಯ ಕಚೇರಿಯ ಒಳಗಡೆಯೇ ಶೌಚಾಲಯ ನಿರ್ಮಿಸಬೇಕು ಎನ್ನುವ ಬೇಡಿಕೆಯ ಪ್ರಸ್ತಾವನೆಯನ್ನು ಗ್ರಂಥಾಲಯ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಇದರ ಜತೆಗೆ ಗ್ರಂಥಾಲಯಕ್ಕೆ ಬಣ್ಣ ಬಳಿ ಯುವ ಪ್ರಸ್ತಾವನೆಯನ್ನೂ ಸಲ್ಲಿಸ ಲಾಗಿದೆ. ಈ ತಿಂಗಳೊಳಗೆ ಹೊಸ ಶೌಚಾಲಯ ವ್ಯವಸ್ಥೆ ಮಂಜೂರಾಗ ಬಹುದು. ಮೇಲಧಿಕಾರಿಗಳು ಫಾಲೋಅಪ್ ಮಾಡುತ್ತಿದ್ದಾರೆ.
– ನಮಿತಾ ಬಿ,
ಸಹಾಯಕ ಗ್ರಂಥಪಾಲಕರು