Advertisement
ರಾಜ್ಯದ ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ಹಲವು ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಲು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಶುಕ್ರವಾರ ಕಾಸಿಯಾ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ಹಿಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿಬ್ಯಾರೆಲ್ಗೆ 120- 130 ಡಾಲರ್‌ಗೆ ಏರಿಕೆಯಾದರೂ ಜನರಿಗೆ ಹೊರೆಯಾಗದಂತೆ ಪೆಟ್ರೋಲ್ ಬೆಲೆ 68 ರೂ. ಆಸುಪಾಸಿನಲ್ಲಿರುವಂತೆ ನಿಭಾಯಿಸಿದ್ದರು. ಇಂದು ಕಚ್ಚಾತೈಲ ಬೆಲೆ 40ರಿಂದ 45 ಡಾಲರ್‌ಗೆ ಇಳಿಕೆಯಾದರೂ ಪೆಟ್ರೋಲ್ ದರ ಇನ್ನು 70 ರೂ. ಇರುವುದಕ್ಕೆ ಏನು ಹೇಳುವುದು ಎಂದು ಪ್ರಶ್ನಿಸಿದರು.
Related Articles
Advertisement
ನೋಟು ಅಮಾನ್ಯದಿಂದ ಕಪ್ಪು ಹಣ ಬಿಳಿಯಾಯ್ತು!: ನೋಟು ಅಮಾನ್ಯದಿಂದ ಕಪ್ಪು ಹಣ ಬಿಳಿಯಾಗಿದ್ದು ಹೊರತುಪಡಿಸಿ ಬೇರೇನೂ ಆಗಿಲ್ಲ. ಆರ್ಥಿಕ ಪ್ರಗತಿ ಕಾಣಲಿಲ್ಲ, ಕಪ್ಪುಹಣವಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ, ಷ್ಟಾಚಾರ ಕಡಿಮೆಯಾಗಲಿಲ್ಲ, ಖೋಟಾನೋಟಿನ ಹಾವಳಿ ತಪ್ಪಲಿಲ್ಲ, ಉಗ್ರವಾದ ನಿಯಂತ್ರಣಕ್ಕೆ ಬರಲಿಲ್ಲ. ಕೇಂದ್ರ ಸರ್ಕಾರ ಹೇಳಿದ್ದು ಒಂದೂ ಆಗಲಿಲ್ಲ. ನೋಟು ಅಮಾನ್ಯದಿಂದ ಉತ್ಪಾದನಾ ವಲಯದ ವಹಿವಾಟು ಕುಸಿದಿದ್ದು, ಉದ್ಯೋಗ ಸೃಷ್ಟಿ ಪ್ರಮಾಣ ಕಡಿಮೆಯಾಗಿದ್ದು, ವಸ್ತುಸ್ಥಿತಿಯನ್ನು ಉದ್ಯಮಿಗಳು ಜನತೆಗೆ ತಿಳಿಸ ಬೇಕು ಎಂದು ಹೇಳಿದರು.
ಮುಖ್ಯಮಂತ್ರಿಯಾದ ಆರಂಭದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನನ್ನ ಬಳಿಯೇ ಇದ್ದಾಗ ಕೈಗಾರಿಕೆಗೆ ಉತ್ತೇಜನ ಸಿಗುವುದಿಲ್ಲ ಎಂದು ಅಪಪ್ರಚಾರ ನಡೆದಿತ್ತು. ಆದರೆ ನಾಲ್ಕು ವರ್ಷಗಳಲ್ಲಿ ಕೈಗಾರಿಕೋದ್ಯಮಿಗಳ ಅಭಿಪ್ರಾಯ ಬದಲಾಗಿದೆ. ಉದ್ಯಮ ಸ್ನೇಹಿ ಎಂದು ಸಂಬೋಧಿಸಿ ಅಭಿನಂದಿಸಿರುವುದು ವಸ್ತುಸ್ಥಿತಿ ತಿಳಿಸುತ್ತದೆ ಎಂದು ಹೇಳಿದರು.
ಕೆಲ ರಾಜ್ಯಗಳಿಗೆ ಸಂಕಷ್ಟ ದೇಶಾದ್ಯಂತ ಜಾರಿಯಾದ ಜಿಎಸ್‌ಟಿಯು ಕೆಲ ರಾಜ್ಯಗಳ ಆರ್ಥಿಕತೆಯ ಮೇಲೆ ತೀವ್ರ ಕೆಟ್ಟಪರಿಣಾಮ ಬೀರಿದೆ. ರಾಜ್ಯದಲ್ಲಿ ಈ ಹಿಂದೆ ವ್ಯಾಟ್ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ತೆರಿಗೆ ಸಂಗ್ರಹ ವ್ಯವಸ್ಥೆ ಕಲ್ಪಿಸಿದ್ದರಿಂದ ಜಿಎಸ್‌ಟಿ ಜಾರಿ ಬಳಿಕವೂ ರಾಜ್ಯದಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ. ಗುಜರಾತ್‌ನಲ್ಲೂ ಜಿಎಸ್‌ಟಿಯಿಂದ ಭಾರಿ ಕೆಟ್ಟ ಪರಿಣಾಮ ಬೀರಿದೆ ಎಂಬ ಮಾಹಿತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.