Advertisement

ಇ-ಕಾಮರ್ಸ್‌ ಕಂಪನಿಗೆ ಕೇಂದ್ರ ಸರ್ಕಾರ ನಿರ್ಬಂಧ

06:05 AM Dec 27, 2018 | Team Udayavani |

ನವದೆಹಲಿ: ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ನಂತಹ ಇ- ಕಾಮರ್ಸ್‌ ಸಂಸ್ಥೆಗಳಿಗೆ ಹಲವು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ವಿಧಿಸಿದ್ದು, ತಮ್ಮದೇ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸೂಚಿಸಿದೆ. 

Advertisement

ಅಷ್ಟೇ ಅಲ್ಲ, ಉತ್ಪನ್ನಗಳ ಮಾರಾಟಕ್ಕಾಗಿ ಕಂಪನಿಗಳೊಂದಿಗೆ ವಿಶೇಷ ಒಪ್ಪಂದ ಮಾಡಿಕೊಳ್ಳುವುದಕ್ಕೂ ನಿರ್ಬಂಧ ವಿಧಿಸಿದೆ. ಇದರಿಂದಾಗಿ, ತನ್ನದೇ ಸಂಸ್ಥೆ ಅಥವಾ ತನ್ನ ಸಮೂಹ ಸಂಸ್ಥೆಯು ಉತ್ಪಾದಿಸಿದ ಸಾಮಗ್ರಿಗಳನ್ನು ಇ-ಕಾಮರ್ಸ್‌ ತಾಣದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ.

ಈಗಾಗಲೇ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ನಂತಹ ಕಂಪನಿಗಳು ಉತ್ಪಾದನಾ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿ ಕೊಂಡು ಅವರ ಉತ್ಪನ್ನಗಳನ್ನು ವಿಶೇಷ ರಿಯಾಯಿತಿ ಯಲ್ಲಿ ಮಾರಾಟ ಮಾಡುತ್ತಿವೆ. ಈ ಬಗ್ಗೆ ದೂರು ಕೇಳಿಬಂದ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಹೊಸ ನೀತಿ ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಇ- ಕಾಮರ್ಸ್‌ ಸಂಸ್ಥೆ ಗಳಲ್ಲಿ ಶೇ. 100 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡ ಲಾಗಿದೆಯಾದರೂ, ಇನ್ವೆಂಟರಿ ಆಧರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಂಸ್ಥೆಗಳಿಗೆ ನಿಷೇಧ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next