Advertisement
ಈ ಮೊದಲು ಎಚ್‌ಎಎಲ್ ನವರತ್ನ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿತ್ತು. ಇದೀಗ ಮಹಾರತ್ನಕ್ಕೆ ಭಡ್ತಿ ಪಡೆದುಕೊಂಡಿರುವುದರಿಂದ ನವರತ್ನ ಕಂಪನಿಗಳ ಸಂಖ್ಯೆ 24ಕ್ಕೆ ಕುಸಿದಿದೆ. ಮಹಾರತ್ನ ಕಂಪನಿ ಆಗಿರುವುದರಿಂದ ಎಚ್‌ಎಎಲ್ ಈಗ ಅಂತಾರಾಷ್ಟ್ರೀಯ ಉದ್ಯಮಗಳಲ್ಲಿ 5,000 ಕೋಟಿ ರೂ.ವರೆಗೆ ಹೂಡಿಕೆ ಮಾಡಲು ಅವಕಾಶ ಪಡೆದುಕೊಂಡಿದೆ. ಅಲ್ಲದೇ ತನ್ನ ನಿವ್ವಳ ಮೌಲ್ಯದಲ್ಲಿ ಶೇ.15ರಷ್ಟನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ, ಹೂಡಿಕೆ ಮಾಡುವ ಅವಕಾಶ ಪಡೆದುಕೊಂಡಿದೆ.
ಮಹಾರತ್ನ ಎಂದು ಗುರುತಿಸಿಕೊಳ್ಳಲು ಕಂಪನಿಗಳ ಸರಾಸರಿ ವಾರ್ಷಿಕ ವಹಿವಾಟು 25,000 ಕೋಟಿ ರೂ. ಇದ್ದು, ನಿವ್ವಳ ಮೌಲ್ಯ 15,000 ಕೋಟಿ ರೂ.ಗಿಂತ ಹೆಚ್ಚಿರಬೇಕು. ಇದನ್ನು ಸಾಧಿ ಸಿದ ಕಂಪನಿಗಳನ್ನು ಮಹಾರತ್ನ ಎಂದು ಗುರುತಿಸಲಾಗುತ್ತದೆ.