Advertisement

ಹಲಸಿಗೆ ಕೇಂದ್ರ ಸರಕಾರದ ನೆರವು ಲಭ್ಯ

11:52 AM May 21, 2022 | Team Udayavani |

ನಿಟ್ಟೆ: ಮೂರು ದಿನಗಳ ರಾಷ್ಟ್ರೀಯ ಹಲಸು ಮೇಳಕ್ಕೆ ಚಾಲನೆ ಕಾರ್ಕಳ, ಮೇ 20: ಕೇಂದ್ರ ಸರಕಾರ ದಿಂದ ಸ್ಥಳಿಯ ಉತ್ಪನ್ನಗಳಿಗೆ ಪ್ರೋತ್ಸಾಹ, ಸ್ಥಳಿಯ ಉತ್ಪನ್ನ ಬೆಳೆಯಲು ಉತ್ತೇಜನ ಸಿಗುತ್ತಿದೆ. ಹಲಸು ಸಂಸ್ಕರಣೆ ಘಟಕಕ್ಕೆ ಕೇಂದ್ರ ಸರಕಾರದ ಕೃಷಿ ಸಚಿವಾಲಯದಿಂದ 5.ಕೋ.ರೂ. ಪ್ರೋತ್ಸಾಹ ದೊರಕಿದೆ. ಹಲಸಿಗೆ ನೆರವು ಲಭಿಸುತ್ತಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

Advertisement

ನಿಟ್ಟೆ ಇಂಜಿನಿರಿಂಗ್‌ ಕಾಲೇಜಿನ ಆವರಣ ದಲ್ಲಿ ಮೇ 20ರಿಂದ 22ರ ತನಕ ಆಯೋಜಿಸಿದ ರಾಷ್ಟ್ರೀಯ ಹಲಸು ಮೇಳ ಮತ್ತು ನಿಟ್ಟೆ ಗ್ರಾಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪೂರ್ವಜರು ಹಲಸಿನ ಮಹತ್ವವನ್ನು ಅರಿತು ಕೊಂಡಿದ್ದರು. ಹಲಸಿನ ಪ್ರತಿಯೊಂದು ಭಾಗ ವನ್ನು ನೈಸರ್ಗಿಕವಾಗಿ ಸಂಸ್ಕರಣೆಗೊಳಿಸು ತ್ತಿದ್ದರು. ಹಲಸಿನಲ್ಲಿ ಹಲವು ಪೌಷ್ಠಿಕಾಂಶ ಗಳಿದ್ದು, ಮುಖ್ಯ ಆಹಾರವಾಗಿ ಬಳಸುತ್ತಿ ದ್ದರು. ಹಲಸಿನಲ್ಲಿ ಔಷಧಿಯ ಗುಣವಿದ್ದು, ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದು ಸಾಬೀತಾಗಿದೆ. ಧಾರ್ಮಿಕ ಆಚರಣೆಯಲ್ಲಿ ಹಲಸಿಗೆ ಮಹತ್ವವಿದೆ ಎಂದರು.

ನಿಟ್ಟೆ ಎ.ಐ.ಸಿ. ಇಂಕ್ಯುಬೇಶನ್‌ ಸೆಂಟರ್‌ ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ| ಎ.ಪಿ.ಆಚಾರ್‌ ಅವರು ದೇಶದ 14 ರಾಜ್ಯಗಳಲ್ಲಿ ಹಲಸು ಬೆಳೆಯಿದೆ. ಒರಿಸ್ಸಾ ಪ್ರಥಮ ಸ್ಥಾನ ಹೊಂದಿದ್ದರೆ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. 5 ರಾಜ್ಯಗಳಲ್ಲಿ ಹಸಲಸಿ ಸಂಸ್ಕರಣೆ ನಡೆಯುತ್ತಿದೆ. ಕೇರಳ ಮುಂಚೂಣಿಯಲ್ಲಿದ್ದರೆ, ತಮಿಳುನಾಡು, ಗೋವಾ, ತೆಲಂಗಣ, ಕರ್ನಾಟಕದ ನಿಟ್ಟೆಯಲ್ಲಿ ಈ ಸಂಸ್ಕರಣ ಘಟಕ ದೇಶದಲ್ಲೆ ಪ್ರಥವಾಗಲಿದೆ ಎಂದರು.

ನಿಟ್ಟೆ ಗ್ರಾ.ಪಂ. ಅಧ್ಯಕ್ಷ ಸತೀಶ್‌ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿದ್ಯಾ ಸಂಸ್ಥೆಯ ಅಶೋಕ್‌ ಅಡ್ಯಂತಾಯ ಹಲಸು ಮೇಳ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ನಿಟ್ಟೆ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ನಿರಂಜನ್‌ ಚಿಪ್ಲೂಣ್ಕರ್‌, ಗುರ್ಮೆ ಫೌಂಡೇಶನ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ, ಕಲ್ಲುಗಣಿ ಮಾಲಕರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್‌, ಕಾರ್ಕಳ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್‌, ಕರ್ನಾಟಕ ಬ್ಯಾಂಕ್‌ನ ಅರುಣ್‌, ಪ್ರಕಾಶ್‌ ಡಿಸೋಜಾ ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುಫ‌ಲ ಸಂಸ್ಥೆಯ ನಿರ್ದೇಶಕ ನವೀನ್‌ ನಾಯಕ್‌ ಸ್ವಾಗತಿಸಿದರು. ರೇಷ್ಮಾ ಶೆಟ್ಟಿ ವಂದಿಸಿದರು. ಹರ್ಷವರ್ಧನ ನಿಟ್ಟೆ ನಿರೂಪಿಸಿದರು.

ಗಮನ ಸೆಳೆಯುತ್ತಿದೆ ಮೇಳ

Advertisement

ಕಾರ್ಕಳದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಮೇಳದಲ್ಲಿ 70ಕ್ಕೂ ಅಧಿಕ ಮಳಿಗೆ ತೆರೆಯಲಾಗಿದೆ. ಹಲಸಿನಿಂದ ತಯಾರಿಸಿದ ಖಾದ್ಯಗಳ ಮಾರಾಟ ಮಳಿಗೆಗಳು ಗಮನ ಸೆಳೆಯುತ್ತಿವೆ. ಇನ್ನೆರಡು ದಿನಗಳ ಕಾಲ ಹಲಸಿನ ಕಾರ್ಯಾಗಾರ ನಡೆಯಲಿದ್ದು. ಹಲಸು ಪ್ರಿಯರನ್ನು ಮೇಳ ಗಮನ ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.