Advertisement

ಹೊಸ ಕಾರ್ಯಕ್ರಮ ರೂಪಿಸುವಲ್ಲಿ ಕೇಂದ್ರ ವಿಫ‌ಲ

02:13 PM Aug 25, 2020 | Suhan S |

ಮಾಲೂರು: ಯಾವುದೇ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದ ಕಾರ್ಯಕ್ರಮಗಳಿಗೆ ಹೊಸ ಲೇಬಲ್‌ ಹಾಕಿಕೊಂಡು ಆಡಳಿತ ನಡೆಸುತ್ತಿದೆ ಎಂದು ಕೆಪಿಸಿಸಿ ರಾಜ್ಯ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಣ ಆರೋಪಿಸಿದರು.

Advertisement

ಪಟ್ಟಣದ ಕೋಚಿಮುಲ್‌ ಶಿಬಿರ ಕಚೇರಿ ಸಭಾಂಗಣದಲ್ಲಿ ಕೆಪಿಸಿಸಿ ಆರೋಗ್ಯ ಹಸ್ತ ಘಟಕ ಏರ್ಪಡಿಸಿದ್ದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎನ್‌ಆರ್‌ ಇಜಿ, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಅನ್ಯಭಾಗ್ಯ ಯೋಜನೆಗಳನ್ನು ಮುಂದುವರಿಸಿಕೊಂಡು ಅದಕ್ಕೆ ಹೊಸ ಲೇಬಲ್‌ ಹಾಕಿಕೊಂಡು ಆಡಳಿತ ನಡೆಸಲಾಗು ತ್ತಿದೆ ಎಂದು ದೂರಿದರು. ಜಾಗೃತಿ ಕಾರ್ಯಕ್ರಮ: ದೇಶವನ್ನು ಗಂಭೀರವಾಗಿ ಕಾಡುತ್ತಿರುವ ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವೈಫ‌ಲ್ಯವನ್ನು ಮನಗಂಡು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾರ್ಗದರ್ಶನದಲ್ಲಿ ವೈದ್ಯಕೀಯ ಘಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್‌-19 ಬಗ್ಗೆ ಎಚ್ಚರಿಕೆ: ಗ್ರಾಮೀಣ ಭಾಗದ ಪ್ರತಿ ಮನೆಯಿಂದ ಅಗತ್ಯವಾಗಿರುವ ಮಾಹಿತಿ ಸಂಗ್ರ ಹಿಸುವ ಜೊತೆಗೆ ಕೋವಿಡ್‌-19 ಬಗ್ಗೆ ಎಚ್ಚರಿಕೆ ನೀಡುವ ಕಾರ್ಯಕ್ರಮವನ್ನು ರೂಪಿಸಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದಿಂದ ಆರೋಗ್ಯ ಹಸ್ತ ಕಾರ್ಯ ಪಡೆಯನ್ನು ಕಟ್ಟಿಕೊಂಡು, ಸ್ಥಳೀಯವಾಗಿರುವ ವೈದ್ಯರ ಮೂಲಕ ಅಗತ್ಯ ಮಾಹಿತಿ ಜನರಿಗೆ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಕಳೆದ 7 ವರ್ಷಗಳಿಂದಲೂ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಸರಕಾರವು ಈ ಹಿಂದೆ ಕಾಂಗ್ರೆಸ್‌ ಪಕ್ಷ ರೂಪಿಸಿದ್ದ ಜನಪರ ಕಾರ್ಯಕ್ರಮಗಳನ್ನು ಉದ್ಘಾಟಿಸಿಕೊಂಡು ಮುಂದುವರಿದಿದೆ ಎಂದರು.

ರಾಜ್ಯ ಬಿಡಿಗಾಸು ತಂದಿಲ್ಲ: ಮಾಜಿ ಸಂಸದ ಚಂದ್ರಣ್ಣ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಯಾವುದೇ ಸಂಸದ ಇದುವರೆಗೂ ಪ್ರಧಾನಿಯನ್ನು ಭೇಟಿ ಮಾಡಿಲ್ಲ, ಬಿಡಿಗಾಸಿನ ಅನುದಾನವನ್ನು ರಾಜ್ಯಕ್ಕೆ ತಂದಿಲ್ಲ ಎಂದ ಅವರು. ಪ್ರಧಾನಿ ಮೋದಿ ಅವರು, ದೇಶದ ಸ್ಥಿತಿವಂತರ ಕೈ ಗೊಂಬೆ ಆಗಿದ್ದಾರೆ ಎಂದು ದೂರಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ರಾಘವೇಂದ್ರ, ಉಪಾಧ್ಯಕ್ಷ ಡಾ.ರಾಜೇಶ್‌, ಜಿಲ್ಲಾ ಕಾರ್ಯಕ್ರಮದ ಅಧ್ಯಕ್ಷ ಚಂದ್ರಾರೆಡ್ಡಿ, ಕೋಲಾರ ಜಿಲ್ಲಾ ಉಸ್ತುವಾರಿ ವೈದ್ಯರಾದ ಡಾ. ಲೋಹಿತ್‌, ಡಾ. ಗೀತಾ ಕೆಪಿಸಿಸಿ ಕಾರ್ಯದರ್ಶಿ ಸಿ.ಲಕ್ಷ್ಮೀ  ನಾರಾಯಣ್‌, ಡಿಸಿಸಿ ಬ್ಯಾಂಕಿನ ನಿರ್ದೇಶಕ ಕೆ.ಎಚ್‌. ಚನ್ನರಾಯಪ್ಪ, ಕೋಚಿಮುಲ್ ನಿರ್ದೇಶಕಿ ಕಾಂತಮ್ಮ, ಅಶ್ವತ್‌ರೆಡ್ಡಿ, ಅಂಜನಿ ಸೋಮಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next