Advertisement

Recruitment: ಪಾರದರ್ಶಕ ನೇಮಕ ಪ್ರಕ್ರಿಯೆಗೆ ಕೇಂದ್ರ ಒತ್ತು: ಮೋದಿ

08:55 PM Oct 28, 2023 | Team Udayavani |

ನವದೆಹಲಿ: ಸಾಂಪ್ರದಾಯಿಕ ಹಾಗೂ ಉದಯೋನ್ಮುಖ ವಲಯಗಳಾದ ನವೀಕರಿಸಬಹುದಾದ ಇಂಧನ, ರಕ್ಷಣಾ ರಫ್ತು, ಆಟೋಮೇಶನ್‌ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ವರ್ಚುವಲ್‌ ಮೂಲಕ 51,000 ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗದ ನೇಮಕ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, “ಯುವಕರಿಗೆ ಉದ್ಯೋಗ ನೀಡುವುದರ ಜತೆಗೆ ಪಾರದರ್ಶಕ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿದೆ. ಅಲ್ಲದೇ ಪರೀಕ್ಷಾ ವಿಧಾನವನ್ನು ಪುನರ್‌ರಚಿಸಲು ಹಾಗೂ ಸುಗಮಗೊಳಿಸಲು ಶ್ರಮಿಸುತ್ತಿದೆ’ ಎಂದರು.

“ಇಂದು ಭಾರತವು ಉದಯೋನ್ಮುಖ ಅವಕಾಶಗಳನ್ನು ಬಳಸಿಕೊಳ್ಳಲು ತನ್ನ ಯುವಕರನ್ನು ಕೌಶಲ್ಯ ಮತ್ತು ಶಿಕ್ಷಣದೊಂದಿಗೆ ಸಜ್ಜುಗೊಳಿಸುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
“ಸ್ಟಾಫ್ ಸೆಲೆಕ್ಷನ್‌ ಕಮಿಷನ್‌(ಎಸ್‌ಎಸ್‌ಸಿ)ನಿಂದ ನೇಮಕ ಪ್ರಕ್ರಿಯೆಗೆ ತೆಗೆದುಕೊಳ್ಳುವ ಸಮಯ ಅರ್ಧದಷ್ಟು ತಗ್ಗಿದೆ. ಭಾಷಾ ಸಮಸ್ಯೆ ನಿವಾರಣೆಗಾಗಿ ಇಂಗ್ಲೀಷ್‌, ಹಿಂದಿ ಹೊರತುಪಡಿಸಿ ದೇಶದ 13 ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಎಸ್‌ಎಸ್‌ಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next