ಹೊಸದಿಲ್ಲಿ: ಭಾರತ- ಚೀನ ಗಡಿ ಬಿಕ್ಕಟ್ಟು ಕೊಂಚ ತಣ್ಣ ಗಾಗುತ್ತಿರುವ ನಡುವೆಯೇ ಇತ್ತ ಕೇಂದ್ರ ಸರಕಾರ ಚೀನೀ ಕಂಪೆನಿಗಳ ಹೂಡಿಕೆ ಮೇಲಿದ್ದ ನಿರ್ಬಂಧವನ್ನೂ ಸಡಿಲಗೊ ಳಿಸುತ್ತಿದೆ.
ಬೀಜಿಂಗ್‌ನ ಆಟೋ ದೈತ್ಯಗಳಾದ ಗ್ರೇಟ್ ವಾಲ್ ಮೋಟಾರ್ಸ್, ಎಸ್ ಎಐಸಿ ಮೋಟಾರ್ ಕಾರ್ಪ್ ಸೇರಿ ದಂತೆ 45 ಚೀನೀ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಲು ಮುಂದಾ ಗಿದೆ ಎಂದು ಹೇಳಲಾಗಿದೆ. ಈ 45 ಕಂಪೆನಿಗಳೂ ಸೇರಿಒಟ್ಟು 150 ಚೀನೀ ಸಂಸ್ಥೆಗಳ ಹೂಡಿಕೆ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರ ಒಂದು ವರ್ಷದಿಂದ ತಡೆಹಿಡಿದಿತ್ತು.
ಪ್ರಸ್ತುತ ಸಮ್ಮತಿ ಗಿಟ್ಟಿಸಿಕೊಳ್ಳುತ್ತಿರುವ ಚೀನೀ ಕಂಪೆನಿಗಳಿಂದ ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂದು ಸರಕಾರದ ಮೂಲಗಳು ದೃಢಪಡಿಸಿವೆ. ಭಾರತದಲ್ಲಿ ಎಲೆ ಕ್ಟ್ರಿಕ್ ವಾಹನಗಳ ಉತ್ಪಾದನೆಯ ಕನಸಿನಲ್ಲಿರುವ ಗ್ರೇಟ್ ವಾಲ್, ಭಾರತದಲ್ಲಿ ಅಮೆರಿಕದ ಕಾರು ಸ್ಥಾವರ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಚೀನೀ ಕಂಪೆನಿ 250- 300 ದಶ ಲಕ್ಷ ಡಾಲರ್ ಒಪ್ಪಂದಕ್ಕೂ ಕೈಹಾಕಿದೆ.
ಭಾರತದ “ಬ್ರಿಕ್ಸ್ ಶೃಂಗ’ಕ್ಕೆ ಚೀನ ಬೆಂಬಲ
ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಮುರಿದು ಬಿದ್ದಿದ್ದ ಭಾರತ- ಚೀನ ನಡುವಿನ ಬಾಂಧವ್ಯ ಹೊಸ ಬೆಸುಗೆ ಕಾಣುತ್ತಿದ್ದು, ಭಾರತ ಆಯೋಜಿಸುತ್ತಿರುವ 13ನೇ “ಬ್ರಿಕ್ಸ್ ಶೃಂಗಸಭೆ’ಗೆ ಚೀನ ತನ್ನ ಬೇಷರತ್ ಬೆಂಬಲ ಸೂಚಿಸಿದೆ. ಪ್ರಸಕ್ತ ವರ್ಷದ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ಹೊಸದಿಲ್ಲಿಯಲ್ಲಿ ಆಯೋಜ ನೆಗೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನ ವಿದೇ ಶಾಂಗ ಸಚಿವಾಲಯ ವಕ್ತಾರ ವ್ಯಾಂಗ್ ವೆನ್ ಬಿನ್, “ಭಾರ ತ ಆಯೋಜಿಸಿರುವ ಬ್ರಿಕ್ಸ್ ಶೃಂಗಕ್ಕೆ ನಮ್ಮ ಬೆಂಬಲವಿದೆ.
ಉದಯೋನ್ಮುಖ ಆರ್ಥಿಕತೆ ಮತ್ತು ಅಭಿವೃದ್ಧಿ ಹೊಂದುತ್ತಿ ರುವ ರಾಷ್ಟ್ರಗಳ ಸಹಕಾರ ಕಾರ್ಯವಿಧಾನಕ್ಕೆ ಬ್ರಿಕ್ಸ್ ಒಕ್ಕೂಟ ಅನುಕೂಲ ಕಲ್ಪಿಸಲಿದೆ. ಇತ್ತೀಚಿಗಿನ ದಿನಗಳಲ್ಲಿ ಇದು ಉತ್ತಮ ಒಗ್ಗಟ್ಟು, ಆಳವಾದ ಪ್ರಾಯೋಗಿಕ ಸಹಕಾರ ಮತ್ತು ಹೆಚ್ಚಿನ ಪ್ರಭಾವ ಹೊಂದಿದೆ’ ಎಂದು ಮೆಚ್ಚುಗೆ ಸೂಚಿ ಸಿದ್ದಾರೆ. ಬ್ರಿಕ್ಸ್ ಕೂಟವು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನ, ದ. ಆಫ್ರಿಕಾ- ಈ 5 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. 13ನೇ ಶೃಂಗದ ದಿನಾಂಕ ಇನ್ನೂ ನಿಗದಿಯಾಗಿಲ್ಲ.