Advertisement
ಮಡಿಕೇರಿಯಲ್ಲಿ ಬಿಜೆಪಿಯ ಜನಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮೂರು ಕೃಷಿ ಮಸೂದೆಗಳನ್ನು ಸರಕಾರ ವಾಪಸು ಪಡೆದಿದ್ದರೂ ರೈತರ ಹಿತ ಕಾಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ ಎಂದರು.
Related Articles
ಕೊಡಗು ಸೇರಿದಂತೆ ರಾಜ್ಯದ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಈ ಬಾರಿ ಅಕಾಲಿಕ ಮಳೆ ಹಾಗೂ ಅತಿವೃಷ್ಟಿಯಿಂದಾಗಿ ಕಾಫಿ, ಅಡಿಕೆ ಹಾಗೂ ಭತ್ತದ ಬೆಳೆಗೆ ಭಾರೀ ಹಾನಿಯಾಗಿದೆ. ನಷ್ಟದ ಮರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ವಾಣಿಜ್ಯ ಸಚಿವಾಲಯದ ಮೂಲಕ ಕಾಫಿ ಮಂಡಳಿಗೆ ಆದೇಶ ಕೊಡಿಸಲಾಗುವುದು ಎಂದು ಸಚಿವೆ ಶೋಭಾ ಕರಂದ್ಲಾಜೆ ಅವರು ಜನ ಸ್ವರಾಜ್ ಸಮಾವೇಶದಲ್ಲಿ ಭರವಸೆ ನೀಡಿದರು.
Advertisement
ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸಚಿವರ ಗಮನಸೆಳೆದು, ಕಾಫಿ ಮಂಡಳಿ ಅಧಿಕಾರಿಗಳು ಸ್ಥಳ ಸಮೀಕ್ಷೆ ಮಾಡದೆ ಬೆಳೆಗಾರರೊಂದಿಗೆ ಉಡಾಫೆಯಿಂದ ವರ್ತಿಸುತ್ತಿದ್ದು, ಕಾಫಿ ಬೆಳೆ ಹಾನಿಯಾಗಿರುವ ಕೆಲವು ಗ್ರಾಮಗಳನ್ನೇ ಕೈಬಿಟ್ಟಿದ್ದಾರೆ. ಇದರಿಂದಾಗಿ ಕೊಡಗಿನ ಬಹುತೇಕ ಕಾಫಿ ಬೆಳೆಗಾರರು ಪರಿಹಾರದಿಂದ ವಂಚಿತರಾಗುವ ಸಂಭವವಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಸಂಬಂಧ ಮರು ಸಮೀಕ್ಷೆಗೆ ಕೇಂದ್ರಸರಕಾರದಿಂದಲೇ ಆದೇಶ ಹೊರಡಿಸ ಬೇಕೆಂದು ಮನವಿ ಮಾಡಿದರು.