Advertisement
ಬೆಂಗಳೂರು-ಮೈಸೂರು ಮಾರ್ಗವನ್ನು ಷಟ್ಪಥವನ್ನಾಗಿ ಮಾಡಲು ಈಗಾಗಲೇ ಮೊದಲ ಹಂತದ ಕಾಮಗಾರಿಗೆ ಹಣ ಬಿಡುಗಡೆಯೂ ಆಗಿದ್ದು, ಟೆಂಡರ್ ಕರೆಯಲಾಗಿದೆ. ಇದೀಗ ಮದ್ದೂರಿನ ನಿಡಘಟ್ಟದಿಂದ ಮೈಸೂರುವರೆಗಿನ 61 ಕಿ.ಮೀ ದೂರದ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ಅನುದಾನ ನೀಡಲು ಒಪ್ಪಿಗೆ ನೀಡಿದೆ.
Related Articles
ಭೂ ಸ್ವಾದೀನ ಮತ್ತು ಪೂರ್ವ ನಿರ್ಮಾಣವೂ ಸೇರಿ ಈ 61 ಕಿ.ಮೀ ಹೆದ್ದಾರಿ ಷಟ್ಪಥ ಯೋಜನೆಯ ಅಂದಾಜು ವೆಚ್ಚ 2,919.81 ಕೋಟಿ ರೂ. ಆಗಿದೆ. ಉಳಿದ ಸಿವಿಲ್ ಕಾಮಗಾರಿಗಳ ವೆಚ್ಚ 2,028.93 ಕೋಟಿ ರೂ. ಈ ಪ್ರಮುಖ ಯೋಜನೆಯಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖೀಸಲಾಗಿದೆ.
Advertisement
ಸರ್ವೀಸ್ ರೋಡ್:ಹೆದ್ದಾರಿ ಹಾದುಹೋಗುವ ಪ್ರಮುರ್ಖ ಪ್ರದೇಶಗಳಾದ ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣಗಳ ಜನತೆಗೆ ಅನುಕೂಲವಾಗುವಂತೆ ಹೆದ್ದಾರಿಯ ಇಕ್ಕೆಲಗಳಲ್ಲಿ 7 ಮೀಟರ್ ಅಗಲದ ಸರ್ವೀಸ್ ಮಾರ್ಗ ಅಭಿವೃದ್ಧಿಪಡಿಸುವುದೂ ಯೋಜನೆಯಲ್ಲಿ ಒಳಗೊಂಡಿದೆ. ಇದರಿಂದ ಟ್ರಾಫಿಕ್ ನಿಯಂತ್ರಣ ಕೂಡ ಸಾಧ್ಯ ಎಂದು ಯೋಜನೆಯಲ್ಲಿ ಉಲ್ಲೇಖೀಸಲಾಗಿದೆ. ಯಾರ್ಯಾರಿಗೆ ಅನುಕೂಲ?:
ಬೆಂಗಳೂರು – ಮೈಸೂರು ಹೊರತುಪಡಿಸಿ ಮಂಗಳೂರು, ಕೊಡಗು, ಕೇರಳದಿಂದ ಬೆಂಗಳೂರು ಸಂಪರ್ಕಕ್ಕೆ ಮಹತ್ವದ ಮಾರ್ಗ ಇದಾಗಿರುವ ಕಾರಣ ಷಟ್ಪಥ ನಿರ್ಮಾಣದಿಂದ ಪ್ರಯಾಣವೂ ಇನ್ನಷ್ಟು ಅನುಕೂಲಕರವಾಗಲಿದೆ. ಷಟ್ಪಥ ಕಾಮಾರಿ ಶೀಘ್ರ ಆರಂಭ
ವಿಧಾನ ಪರಿಷತ್ತು: ಬೆಂಗಳೂರು- ಮೈಸೂರು ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು 7,000 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಕಾಮಗಾರಿಯನ್ನು ಎರಡು ಹಂತವಾಗಿ ವಿಂಗಡಿಸಲಾಗಿದೆ. ಅನುಮೋದನೆ ದೊರೆಯುತ್ತಿದ್ದಂತೆ ಕಾಮಗಾರಿ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಬಿಜೆಪಿಯ ತಾರಾ ಅನುರಾಧಾ ಕೇಳಿದ ಪ್ರಶ್ನೆಗೆ ಉತ್ತರಿಸಿ, ಬೆಂಗಳೂರು- ಮೈಸೂರು ನಡುವೆ 117 ಕಿ.ಮೀ. ಉದ್ದದ ಷಟ್ಪಥ ನಿರ್ಮಾಣ ಯೋಜನೆಯ ಅಂದಾಜು ವೆಚ್ಚ 7,000 ಕೋಟಿ ರೂ.ಗಳಾಗಿವೆ. ಕಾಮಗಾರಿಯನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. 2,000 ಕೋಟಿ ರೂ. ಮೊತ್ತದ ಕಾಮಗಾರಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಬೇಕಿದ್ದು, 1,900 ಕೋಟಿ ರೂ. ಮೊತ್ತದ ಕಾಮಗಾರಿಗೆ ಕೇಂದ್ರ ಸಚಿವರೇ ಅನುಮೋದನೆ ನೀಡಬಹುದು. ಅದರಂತೆ ಡಿಪಿಆರ್ ಸಿದ್ಧವಾಗಿದೆ. ಯೋಜನೆಯ ಕಾಮಗಾರಿ ವೆಚ್ಚ 3,900 ಕೋಟಿ ರೂ. ಆದರೆ ಭೂಸ್ವಾಧೀನಕ್ಕೆ 7,000 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು. ಈ ಹಿಂದೆ ಬೆಂಗಳೂರು- ಮೈಸೂರು ರಸ್ತೆಯು ಜಿಲ್ಲಾ ಪ್ರಮುಖ ರಸ್ತೆಯಾಗಿತ್ತು. ಹಾಗಾಗಿ ಈ ಹಿಂದೆ ಕೆಆರ್‌ಡಿಸಿಎಲ್‌ನಿಂದ ರಸ್ತೆ ದುರಸ್ತಿಪಡಿಸಲಾಗಿತ್ತು. 2013ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಆಸ್ಕರ್ ಫರ್ನಾಂಡಿಸ್ ಅವರು ಕೇಂದ್ರ ರಸ್ತೆ ಮತ್ತು ಭೂ ಸಾರಿಗೆ ಸಚಿವರಾಗಿದ್ದಾಗ ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ದೊರೆಯಿತು ಎಂದು ತಿಳಿಸಿದರು.