Advertisement

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ʼಗುಡ್‌ ನ್ಯೂಸ್‌ʼ: 7ನೇ ವೇತನ ಆಯೋಗದ ಬದಲಾವಣೆ

04:07 PM Oct 07, 2021 | |

ನವದೆಹಲಿ: ಕೇಂದ್ರದ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಕುರಿತಾದ ಶುಭ ಸುದ್ದಿಯೊಂದು ಬಂದಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರು ಇದೇ ಸೆಪ್ಟೆಂಬರ್‌ ತಿಂಗಳಿನಿಂದ 7ನೇ ನೀತಿ ಆಯೋಗದ ಪ್ರಕಾರ ಶೇ.28 ರಷ್ಟು ತುಟ್ಟಿಭತ್ಯೆ  ಪಡೆಯಲಿದ್ದಾರೆ. ಕೆಲ ವರದಿಗಳ ಪ್ರಕಾರ ಸರ್ಕಾರವು ಜೂನ್‌ ತಿಂಗಳಿನಿಂದಲೇ ಈ ಭತ್ಯೆಯನ್ನು ಪರಿಗಣಿಸಲಿದೆ. ಈ ರೀತಿ ಪರಿಗಣಿಸಿದರೆ ಸರ್ಕಾರದಿಂದ ಕೇಂದ್ರ ನೌಕರರಿಗೆ 28% ಬದಲಾಗಿ ಶೇ.31ರಷ್ಟು ಹೆಚ್ಚಾಗಿ ಬಂಪರ್‌ ಆಫರ್‌ ದೊರೆಯಲಿದೆ.

Advertisement

ಆದರೆ, ಸರ್ಕಾರದ ಸೂಚನೆಯಂತೆ ಜೂನ್‌ 2021ರ ತುಟ್ಟಿಭತ್ಯೆಯ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಅಖಿಲ ಭಾರತ ಗ್ರಾಹಕ ವೇದಿಕೆಯ ಸೂಚ್ಯಂಕದ ಪ್ರಕಾರ(ಎಐಸಿಪಿಐ)   ಜನವರಿಯಿಂದ ಮೇ 2021ರ ವರೆಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಾಗಿದೆ. ಆದರೆ, ಸರ್ಕಾರದ ನಿರ್ಧಾರಗಲ್ಲಿ ಗೊಂದಲಗಳಿವೆ ಮತ್ತು ಈ ಎಲ್ಲಾ ಹೆಚ್ಚಳಗಳನ್ನು ಪರಿಗಣಿಸಿದಾಗ ಶೇ.31ರಷ್ಟು ಭತ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ;- ಶಾರುಖ್ ಖಾನ್ ಪಾರ್ಟಿಗಳಲ್ಲಿ ಡ್ರಗ್ಸ್ ಇರುತ್ತಿತ್ತು : ನಟಿ ಶೆರ್ಲಿನ್ ಚೋಪ್ರಾ

ಕಳೆದ ಲೆಕ್ಕಾಚಾರಗಳನ್ನು ಗಮನಿಸಿದರೆ ಜನವರಿ 2020ರಲ್ಲಿ ಶೇ4 ರಷ್ಟು ಹೆಚ್ಚಿಸಲಾಗಿತ್ತು ಮತ್ತು ಜೂನ್‌ 2020ರಲ್ಲಿ ಶೇ.3ರಷ್ಟು ಹೆಚ್ಚಿಸಲಾಗಿತ್ತು. ನಂತರ ಜನವರಿ 2021ರಲ್ಲಿ ಶೇ.4 ರಷ್ಟು ಹೆಚ್ಚಿಸಲಾಗಿತ್ತು. ಈ ಮೂರು ಹಂತಗಳಲ್ಲಿ ಒಟ್ಟಾಗಿ ಶೇ.11ರಷ್ಟು ಭತ್ಯೆ ಹೆಚ್ಚಿಸಲಾಗಿತ್ತು. ಆದರೆ, ಈಗ ಶೇ.28ರಷ್ಟು ಏರಿಕೆಯಾಗಿದೆ. ಆ ನಂತರದಲ್ಲಿ ಜೂನ್‌ ತಿಂಗಳ ಶೇ.3ರಷ್ಟು ಹೆಚ್ಚಿಸುವ ನಿರ್ಧಾರಗಳು ಜಾರಿಯಾದರೆ ಒಟ್ಟಾರೆಯಾಗಿ ಶೇ.31ರಷ್ಟು ಹೆಚ್ಚಳವಾಗುತ್ತದೆ. ಕೇಂದ್ರ ನೌಕರರ ಈ ಹೆಚ್ಚಳಗಳು ಅವರ ಸಂಬಳದ ಮತ್ತು ಗ್ರೇಡ್‌ಗಳ ಆಧಾರದಲ್ಲಿ ಲೆಕ್ಕ ಹಾಕಲಾಗುವುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next