Advertisement

ಮಠಮಾನ್ಯಗಳು ಸಂಸ್ಕಾರ ನೀಡುವ ಕೇಂದ್ರಗಳು: ಕಡಾಡಿ

04:39 PM Feb 06, 2024 | Team Udayavani |

ಉದಯವಾಣಿ ಸಮಾಚಾರ
ಮುನವಳ್ಳಿ: ಪಟ್ಟಣದ ಶ್ರೀ ಸೋಮಶೇಖರ ಮಠದ ಲಿಂ. ಶ್ರೀ ಬಸವಲಿಂಗ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ
ಮುರುಘಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನರಗುಂದದ ಶ್ರೀ ಸಿದ್ದವೀರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿತು.

Advertisement

ಶ್ರೀ ಮುರುಘೇಂದ್ರ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಯಕೃತ್ತು ಕಸಿತಜ್ಞ, ಸುಮಾರು ಎರಡು ಸಾವಿರ ಜನರಿಗೆ ಜೀವದಾನ ಮಾಡಿದ ಡಾ| ಮಹೇಶ ಶ್ರೀಶೈಲ ಗೋಪಶೆಟ್ಟಿ ಅವರಿಗೆ ಮುರುಘಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಮೊದಲು ಶಿಕ್ಷಣ ಕಡಿಮೆ ಇತ್ತು, ಸಂಸ್ಕಾರ ಜಾಸ್ತಿ ಇತ್ತು. ಈಗ ಶಿಕ್ಷಣ ಹೆಚ್ಚಿಗಿದೆ, ಸಂಸ್ಕಾರ ಕಡಿಮೆಯಾಗಿದೆ. ಮಠಮಾನ್ಯಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿವೆ. ದಾರಿತಪ್ಪಿದ ಜನರನ್ನು ಸರಿದಾರಿಗೆ ತರುವಲ್ಲಿ ಮಠಾಧೀಶರ ಪಾತ್ರ ಮಹತ್ವದ್ದಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮಹೇಶ ಗೋಪಶೆಟ್ಟಿ, ಉತ್ತಮ, ಆರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಯಕೃತ್ತು ರಕ್ಷಣೆ ಮಾಡಬಹುದು. ಆಲ್ಕೋಹಾಲ್‌ ಸೇವನೆಯಿಂದ ಯಕೃತ್‌ ಮೇಲೆ
ದುಷ್ಪರಿಣಾಮ ಬೀರುತ್ತದೆ. ಕೆಲವರು ಸ್ವಲ್ಪ ಸ್ವಲ್ಪ ಆಲ್ಕೋಹಾಲ್‌ ಸೇವನೆ ಮಾಡಬಹುದೇ ಅಂತಾ ಕೇಳುತ್ತಾರೆ. ಆಲ್ಕೋಹಾಲ್‌
ಸ್ವಲ್ಪವೇ ಸೇವನೆ ಮಾಡಿದರೂ ಅದು ತನ್ನ ಪ್ರಭಾವವನ್ನು ಬೀರಿಯೇ ಬೀರುತ್ತದೆ. ಆದ್ದರಿಂದ ಮದ್ಯವ್ಯಸನಿಗಳಾಗಬೇಡಿ, ನೀರಿನ ವೈರಸ್‌ ಸೋಂಕಿನಿಂದಲೂ ಯಕೃತ್‌ ಹಾಳಾಗುವ ಸಂದರ್ಭ ಇರುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದರು.

ಡಾ. ಮಹಾಂತೇಶ ರಾಮಣ್ಣವರ ಮಾತನಾಡಿ, ಮಠಮಾನ್ಯಗಳಲ್ಲಿ ರಕ್ತದಾನ ನಡೆದರೆ ಅದು ರಕ್ತದಾನ ಅಲ್ಲ, ರಕ್ತ ದಾಸೋಹ, ದೇಹದಾನ ನಡೆದರೆ ಅದು ದೇಹ ದಾಸೋಹ, ಅಂಗಾಂಗ ದಾನ ನಡೆದರೆ ಅದು ಅಂಗಾಂಗ ದಾಸೋಹ. ಮಠ ಮಾನ್ಯಗಳು ಕೂಡ ದೇಹದಾನ, ಅಂಗಾಂಗ ದಾನ ಮಾಡಲು ಪ್ರೇರೇಪಿಸುತ್ತಿರುವುದು ಸಂತಸದ ಸಂಗತಿ ಎಂದರು.

ಪಂಚನಗೌಡ ದ್ಯಾಮನಗೌಡರ, ಶ್ರೀಕಾಂತ ಮಿರಜಕರ ಮಾತನಾಡಿದರು. ವೇದಿಕೆ ಮೇಲೆ ತಾರಿಹಾಳದ ಶ್ರೀ ಅಡವೀಶ ಸ್ವಾಮಿಗಳು, ಶ್ರೀ ಮಡಿವಾಳಯ್ಯ ಹಿರೇಮಠ, ವಿರೂಪಾಕ್ಷ ಮಾಮನಿ, ಎಂ.ಆರ್‌.ಗೋಪಶೆಟ್ಟಿ, ರವೀಂದ್ರ ಯಲಿಗಾರ, ಅರುಣಗೌಡ ಪಾಟೀಲ, ಶಂಕರ ಗಯ್ನಾಳಿ, ಬಿ.ಬಿ.ಹುಲಿಗೊಪ್ಪ, ಗಂಗಾಧರ ಗೊರಾಬಾಳ, ಮಂಜುನಾಥ ಭಂಡಾರಿ, ವಿರಾಜ ಕೊಳಕಿ, ಗುರಮ್ಮ ಗೋಪಶೆಟ್ಟಿ, ಗಂಗಮ್ಮ ಸಂಕಣ್ಣವರ, ರುದ್ರಮ್ಮ ಶಿರಸಂಗಿ, ಮನೋಹರ ನಾಯ್ಕ, ಶೇಖರ ಮುಪ್ಪೈನವರಮಠ ಸೇರಿದಂತ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next