ನವದೆಹಲಿ: ದೇಶದ ರಫ್ತು ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ, ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಎಕ್ಸ್‌ಪೋರ್ಟ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಇಸಿಜಿಸಿ) ಅನ್ನು ಮುಂದಿನ ವರ್ಷ ಷೇರು ಮಾರುಕಟ್ಟೆಗೆ ಲಗ್ಗೆಯಿಡಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯೆಲ್ ತಿಳಿಸಿದ್ದಾರೆ.
2021ರ ಸೆ. 21ರ ಹೊತ್ತಿಗೆ ಭಾರತ, 185 ಬಿಲಿಯನ್ ಕೋಟಿ ರೂ. ಮೊತ್ತದಷ್ಟು ರಫ್ತು ವ್ಯವಹಾರ ದಾಖಲಿಸಿದೆ. ಇದು, ದೇಶದ ಈವರೆಗಿನ ಗರಿಷ್ಠ ಪ್ರಮಾಣದ ರಫ್ತು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಶೀಘ್ರವೇ ಜಗನ್ ಸಂಪುಟ ಪುನಾರಾಚನೆ?
ಇದೇ ವೇಳೆ, ದೇಶದಲ್ಲಿ ಸಾರಿಗೆ ಸೌಕರ್ಯವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸದ್ಯಕ್ಕಿರುವ ರೈಲು ಮಾರ್ಗಗಳನ್ನು ದುಪ್ಪಟ್ಟುಗೊಳಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವರು ಹೇಳಿದ್ದಾರೆ.
ಯೋಜನೆಯ ಮೊದಲ ಭಾಗವಾಗಿ, ಗುಜರಾತ್‌ನ ನಿಮಚ್- ರತ್ಲಂ ಹಾಗೂ ರಾಜ್‌ಕೋಟ್- ಕನಾಲಸ್ ರೈಲು ಮಾರ್ಗಗಳ ಜೊತೆಗೆ ಅದೇ ಮಾರ್ಗಗಳಲ್ಲಿ ಮತ್ತೆರಡು ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತದೆ ಎಂದರು.