Advertisement

ಕೇಂದ್ರ ಘೋಷಣೆ ಚುನಾವಣಾ ಗಿಮಿಕ್‌

12:30 AM Jan 11, 2019 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಹಾಗೂ ಹಿಂದಿ ಭಾಷೆ ಕಡ್ಡಾಯ ಮಾಡುತ್ತಿರುವ ಆದೇಶಗಳು ಚುನಾವಣಾ ಗಿಮಿಕ್‌ ಆಗಿದ್ದು, ಇದಕ್ಕೆ ಹೆಚ್ಚಿನ ಮಹತ್ವದ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ನಿಮ್ಹಾನ್ಸ್‌ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನ್ಯಾಯ ವಿಜ್ಞಾನದಲ್ಲಿ ಉದಯೋನ್ಮುಖ ಬೆಳವಣಿಗಳು’ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಸಭೆ ಚುನಾವಣೆ ಹತ್ತಿ¤ರವಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮತದಾರರ ಲಾಭಕ್ಕಾಗಿ ಹಲವು ಆದೇಶ, ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಹೀಗಾಗಿ ಕೇಂದ್ರದ ಹೊಸ ಶಿಕ್ಷಣ ನೀತಿಯಾಗಲಿ ಅಥವಾ ಹಿಂದಿ ಭಾಷೆ ಕಡ್ಡಾಯ ಆದೇಶಕ್ಕಾಗಲಿ ಮಹತ್ವ ನೀಡುವ ಅಗತ್ಯ ಇಲ್ಲ ಎಂದರು.

ಯಾದಗಿರಿ ಜಿಲ್ಲೆಯ ಸುರಪುರದ ಮದನೂರು ಗ್ರಾಮದಲ್ಲಿ  ನೀರಿನ ಟ್ಯಾಂಕರ್‌ಗೆ ಕೀಟನಾಶಕ ಸಿಂಪಡಿಸಿರುವ ಸಂಬಂಧ  ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ವಾಸ್ತವಾಂಶದ ವರದಿ ನೀಡಲು ಸೂಚಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಅಸಮಾಧಾನ ಇಲ್ಲ: ಜೆಡಿಎಸ್‌ ಶಾಸಕಾಂಗ ಪಕ್ಷದ  ಸಭೆಯಲ್ಲಿ ನಡೆದಿರುವ ಚರ್ಚೆಯೇ ಬೇರೆ, ಮಾಧ್ಯಮದಲ್ಲಿ ಬಂದಿರುವ ಸುದ್ದಿಯೇ ಬೇರೆ. ನಮ್ಮಲ್ಲಿ ಯಾವುದೇ ಗೊಂದಲ, ಅಸಮಾಧಾನ ಇಲ್ಲ. ಆದರೂ, ಕೆಲ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ. ಇದರಿಂದ ಜನರಲ್ಲಿ ಗೊಂದಲು ಹುಟ್ಟುಹಾಕುತ್ತಿದ್ದಾರೆ. ನಾವು ಐದು ವರ್ಷ ಪೂರ್ಣಗೊಳಿಸಲಿದ್ದೇವೆ ಮತ್ತು ಜನರ ಅವಶ್ಯಕತೆಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಜೆಡಿಎಸ್‌ ನಾಯಕರ ಮೇಲೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ಯತ್ನಾಳ್‌ ಏನು ಹೇಳಿದ್ದಾರೆ ಎಂಬುದು ಗೊತ್ತಿದೆ. ಹಿಂದೆ ಅವರು ಬಿಜೆಪಿ ಬಿಟ್ಟು ಜೆಡಿಎಸ್‌ಗೆ ಸೇರಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕರ ಬಗ್ಗೆ ಆಡಿದ ಮಾತುಗಳ ಬಗ್ಗೆಯೂ ಅವರಿವಿದೆ. ಇಂತವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯ ಇದೆಯೇ ಎಂದರು.

Advertisement

ಅಪರಾಧಿಗಳ ಸವಾಲು ಎದುರಿಸಲು ಸಾಮರ್ಥ್ಯ ಹೆಚ್ಚಿಸಿಕೊಳ್ಳಿ: ಇದಕ್ಕೂ ಮೊದಲು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಪರಾಧಿಗಳು ಹೊಸ ತಂತ್ರಜ್ಞಾನವನ್ನು ಅತಿ ವೇಗವಾಗಿ ಅಳವಡಿಸಿಕೊಳ್ಳುತ್ತಿರುವುದರಿಂದ ಅಪರಾಧಗಳ ಪ್ರಮಾಣವೂ ಏರಿಕೆಯಾಗುತ್ತಿದೆ. ಹೀಗಾಗಿ, ನ್ಯಾಯ ವಿಜ್ಞಾನ ಪ್ರಯೋಗಾಲಯದ ವಿಜ್ಞಾನಿಗಳು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಂಡು ಸವಾಲನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.

ಪ್ರಯೋಗಾಲಯಗಳಲ್ಲಿ ತಂತ್ರಜ್ಞಾನವನ್ನು ಉನ್ನತೀಕರಿಸುವುದು ಎಷ್ಟು ಮುಖ್ಯವೋ ವಿಜ್ಞಾನಿಗಳ ಕೌಶಲ್ಯಾಭಿವೃದಿಟಛಿಯೂ ಅಷ್ಟೇ ಮುಖ್ಯವಾಗಿದೆ. ನಿರಂತರ ತರಬೇತಿ ಮೂಲಕ ವಿಜ್ಞಾನಿಗಳು ಕೌಶಲ್ಯವನ್ನು ಸುಧಾರಿಸಿಕೊಳ್ಳುತ್ತಿರಬೇಕು. ಬಹುತೇಕಸಂಸ್ಥೆಗಳು ತರಬೇತಿ ನೀಡುವುದನ್ನೇ ಮರೆತು ಬಿಟ್ಟಿವೆ. ವಿಜ್ಞಾನಿಗಳು ಸೇವೆಗೆ ಸೇರಿಕೊಂಡ ನಂತರ ತರಬೇತಿ ಪಡೆಯಲುಬೇರೆ ಕಡೆ ಹೋಗುವುದು ಕಡಿಮೆಯಾಗುತ್ತಿದೆ.

ಅಪರಾಧಿಗಳು ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದನ್ನು ಭೇದಿಸಲು ಪ್ರಯೋಗಾಲಯದ ವಿಜ್ಞಾನಿಗಳು ಸಿದ್ಧರಾಗಬೇಕು ಎಂದು ಹೇಳಿದರು.

ನ್ಯಾಯ ವಿಜ್ಞಾನವು ಅತಿ ವೇಗವಾಗಿ ಬೆಳೆಯುತ್ತಿದೆ. ಕ್ರಿಮಿನಲ್‌ ನ್ಯಾಯ ವ್ಯವಸ್ಥೆಗೆ ಇದು ಕೊಂಡಿಯಾಗಿ ಕೆಲಸ ಮಾಡುತ್ತಿದೆ. ನ್ಯಾಯ ವಿಜ್ಞಾನದ ದಾಖಲೆಗಳ ಆಧಾರದಲ್ಲಿ ನ್ಯಾಯಾಲಯವು ತೀರ್ಪು ನೀಡುತ್ತಿದೆ.

ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಈ ವಿಭಾಗ ತನ್ನದೇ ಆದ ಸಾಮರ್ಥ್ಯ ಹೊಂದಿದ್ದು, ಕಾನೂನಿನ ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಬೆರಳಚ್ಚುಗಳ ಸಹಾಯದಿಂದ ಅಪರಾಧ ಪ್ರಕರಣದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಸೈಬರ್‌ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ತಂತ್ರಜ್ಞಾನದ ಮೂಲಕ ಕಂಡು ಹಿಡಿಯಲಾಗುತ್ತಿದೆ ಎಂದರು.

ಪ್ರತಿನಿತ್ಯ ಹೊಸ ತಂತ್ರಜ್ಞಾನಗಳು ಬರುತ್ತಿವೆ.ಹೀಗಾಗಿ, ಸುಧಾರಿತ ತಂತ್ರಜ್ಞಾನದ ಅಳವಡಿಕೆಯಲ್ಲಿ ನಾವಿರಬೇಕು. ವಿಧಿ ವಿಜ್ಞಾನ ಪ್ರಯೋಗಾಲಯವು ಏಕ ವಿಜ್ಞಾನಿ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ. ನಮ್ಮಲ್ಲಿ ಸುಧಾರಿತ ತಂತ್ರಜ್ಞಾನ ಇರುವ ಪ್ರಯೋಗಾಲಯ ಮತ್ತು ಅರ್ಹ ವಿಜ್ಞಾನಿಗಳು ಇದ್ದಾರೆ. ಕರ್ನಾಟಕದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹೊಸ ತಂತ್ರಜ್ಞಾನ ಮತ್ತು ಸುಧಾರಿತ ಪರಿಕರ ಅಳವಡಿಕೆಗೆ ಸಾಕಷ್ಟು ಅನುದಾನವನ್ನು ಸರ್ಕಾರ ನೀಡಿದೆ, ಮುಂದೆಯೂ ನೀಡುತ್ತೇವೆ. ವಿಜ್ಞಾನಿಗಳ ಸಂಶೋಧನೆ ಮತ್ತು ತಂತ್ರಜ್ಞಾನದ ಸಾಧನೆಗೆ ಬೇಕಾದ ಎಲ್ಲ ಸಹಕಾರ ನೀಡಲಿದ್ದೇವೆ ಎಂದರು.

ಗೃಹ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ವಿಧಿ ವಿಜ್ಞಾನ ಪ್ರಯೋಗಾಲಯವು ಅಪರಾಧ ತನಿಖಾ ಸಂಸ್ಥೆಗಳ ಬೆನ್ನೆಲುಬು ಇದ್ದಂತೆ. ಅವುಗಳು ನೀಡುವ ವರದಿ ಆಧಾರಿಸಿ ಅತಿ ಶೀಘ್ರದಲ್ಲಿ ತನಿಖಾ ವರದಿ ಸಲ್ಲಿಸಲು ಸಾಧ್ಯವಿದೆ. ನಿರಪರಾಧಿಗಳಿಗೆ ಶಿಕ್ಷೆ ಆಗದಂತೆ ತಡೆಯಲುವಿಧಿವಿಜ್ಞಾನ ಪ್ರಯೋಗಾಲಯದಿಂದ ಸಾಧ್ಯವಿದೆ ಎಂದು ಹೇಳಿದರು.

ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಮಾತನಾಡಿ, ನೈಜ ಅಪರಾಧಿಗಳ ಪತ್ತೆಗೆವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮಹತ್ವದ್ದಾಗಿದೆ. ಕರ್ನಾಟಕದ ವಿಧಿ ವಿಜ್ಞಾನ ಪ್ರಯೋಗಾಲಯವು ಸಾಕಷ್ಟು ಸಾಧನೆ ಮಾಡಿರುವ ಜತೆಗೆ ತನ್ನದೇ ಆದ ಇತಿಹಾಸ ಹೊಂದಿದೆ. ಡಾ.ಎಂ.ಎಂ. ಕಲಬುರ್ಗಿ ಹತ್ಯೆ, ಗೌರಿ ಲಂಕೇಶ್‌ ಹತ್ಯೆ, ಬೆಂಗಳೂರಿನ ಸರಣಿ ಬಾಂಬ್‌ ಸ್ಫೋಟ, ಚರ್ಚ್‌ ಸ್ಟ್ರೀಟ್‌ ಬಳಿ ಬಾಂಬ್‌ ಸ್ಫೋಟ, ಮಲ್ಲೇಶ್ವರಂ ಬಾಂಬ್‌ ಸ್ಫೋಟ ಹೀಗೆ ಹಲವು ಮಹತ್ವದ ಪ್ರಕರಣದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಶ್ಲಾಘನೀಯ ಸಾಧನೆ ಮಾಡಿದೆ ಎಂದರು.

ಇದೇ ವೇಳೆ, ಕರ್ನಾಟಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯಕ್ಕೆ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅಂಚೆ ಚೀಟಿ ಹಾಗೂ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು.ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌,ಎಡಿಜಿಪಿ ಡಾ.ಎಂ.ಎ.ಸಲೀಂ, ನ್ಯಾಯವಿಜ್ಞಾನಪ್ರಯೋಗಾಲಯಗಳ ನಿರ್ದೇಶಕಿ ಇಶಾ ಪಂತ್‌, ಡಿಜಿಪಿ ಎಂ.ಎನ್‌.ರೆಡ್ಡಿ, ಬೆಂಗಳೂರು ಪ್ರಾದೇಶಿಕ ಫೋಸ್ಟ್‌ ಮಾಸ್ಟರ್‌ ಜನರಲ್‌ ಕರ್ನಲ್‌ ಅರವಿಂದ ವರ್ಮಾ ಮೊದಲಾದವರು ಉಪಸ್ಥಿತರಿದ್ದರು.

ಯಾದಗಿರಿ ಜಿಲ್ಲೆಯ ಸುರಪುರದ ಮದನೂರು ಗ್ರಾಮದಲ್ಲಿ ನೀರಿನ ಟ್ಯಾಂಕರ್‌ಗೆ ಕೀಟನಾಶಕ ಸಿಂಪಡಿಸಿರುವ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ, ವಾಸ್ತವಾಂಶದ ವರದಿ ನೀಡಲು ಸೂಚಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ.
– ಎಚ್‌.ಡಿ.ಕುಮಾರಸ್ವಾಮಿ,
ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next