ರಾಮನಗರ: ದಹೆಲಿಯಲ್ಲಿ ಜ.26ರಂದು ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆದಿದೆ. ದೆಹಲಿ ದುಷ್ಕೃತ್ಯಕ್ಕೆ ಕೇಂದ್ರವೇ ಕಾರಣ. ಇದೀಗ ರೈತ ನಾಯಕರ ವಿರುದ್ಧ ಕೇಂದ್ರ ಸರ್ಕಾರ ದ್ವೇಷ ಸಾಧಿಸುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು. ನಗರದ ಐಜೂರು ವೃತ್ತದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯ ನಡು ರಸ್ತೆಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರ ಇರಿಸಿ ಪುಷ್ಪ ನಮನ ಸಲ್ಲಿಸಿದ ನಂತರ ಅವರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ತಾವು ಕೇಂದ್ರದ ವಿರುದ್ಧ ಕರಾಳ ದಿನವನ್ನು ಆಚರಿಸುತ್ತಿರುವುದಾಗಿ ಹೇಳಿದರು. ಕಳೆದ ಎರಡು ಬಾರಿ ಚುನಾವಣೆಯಲ್ಲೂ ಬಿಜೆಪಿ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಜಾರಿ ಮಾಡಲಿಲ್ಲ. ಇದೀಗ ಮತ್ತೆ ಬಜೆಟ್‌ಗೆ ಸಿದ್ಧರಾಗುತ್ತಿದ್ದಾರೆ. ಈ ಬಾರಿ ಡಾ.ಸ್ವಾಮಿನಾಥನ್ ವರದಿಯನ್ನು ಕಡ್ಡಾಯವಾಗಿ ಜಾರಿ ಮಾಡಬೇಕು ಎಂದು ಆಗ್ರ ಹಿಸಿದರು.
ಮೀರ್ ಸಾಧಕ್ ಕೆಲಸ: ಗಣರಾಜ್ಯೋತ್ಸವ ದಂದು ರೈತರ ಪರೇಡ್ ಶಾಂತಿಯುತವಾಗಿಸಾಗುತ್ತಿತ್ತು. ಕೆಂಪು ಕೋಟೆಯ ಬಳಿ ಪೊಲೀಸರ ಭಾರೀ ಭದ್ರತೆ ಇತ್ತು. ಆದರೂ ಅಷ್ಟು ಜನ ಕೋಟೆಯೊಳಗೆ ನುಗ್ಗಲು ಅವಕಾಶವಾಗಿದ್ದು ಹೇಗೆ ಎಂದು ರಾಜ್ಯ ರೈತ ಸಂಘದಉಪಾಧ್ಯಕ್ಷರಾದ ಅನಸೂಯಮ್ಮ ಪ್ರಶ್ನಿಸಿದರು.
ಈ ವಿಚಾರ ದಲ್ಲಿ ಕೇಂದ್ರ ಸರ್ಕಾರ ಮೀರ್ ಸಾಧಕ್ ಕೆಲಸ ಮಾಡಿದೆ. ಕೆಂಪುಕೋಟೆ ನುಗ್ಗುವಂತೆ ತಮ್ಮದೇಬೆಂಬಲಿಗರನ್ನು ಪ್ರಚೋದಿಸಿದೆ ಎಂದು ಆರೋ ಪಿಸಿದರು. ರೈತರು, ಕೃಷಿಕರನ್ನು ತಡೆದರೆ ದೇಶ ದುರ್ಭಿಕ್ಷೆಯ ಕಡೆ ಸಾಗುತ್ತದೆ ಎಂದು ಎಚ್ಚರಿಸಿ ದರು. ಕೇಂದ್ರ ಸರ್ಕಾರ ಕಾಫೋìರೆಟ್ ಸಂಸ್ಕೃತಿ ಯನ್ನು ಕೈಬಿಡಬೇಕು, ಕಾರ್ಪೋರೆಟ್ ಕೃಷಿ ಕೇವಲ ಶ್ರೀಮಂತರಿಗೆ ಮಾತ್ರ ಅನುಕೂಲವಾಗುತ್ತದೆ ಎಂದು ಜರಿದರು.
ಇದನ್ನೂ ಓದಿ:ಯುಗಾದಿ ಬಳಿಕ ಹೊಸ ಮುಖ್ಯಮಂತ್ರಿ
ದೇಶದಲ್ಲಿ ಅಪೌಷ್ಟಿಕತೆ, ಬಡತನ ತಾಂಡವವಾಡುತ್ತಿದೆ. ಆದರೆ, ಪ್ರಧಾನಿ ಮೋದಿ ಖಾಸಗಿ ಜಪ ಮಾಡ್ತಿದ್ದಾರೆ. ಮುಂದೊಂದು ದಿನ ಇದೇ ಪ್ರಧಾನಿ ದೇಶವನ್ನು ಖಾಸಗಿಯವರಿಗೆ ಮಾರಿ ಬಿಡ್ತಾರೆ ಎಂದರು. ಪ್ರತಿಭಟನೆಯಲ್ಲಿದ್ದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಗಳನ್ನು ತಳೆದಿವೆ ಎಂದು ದೂರಿ, ಘೋಷಣೆ ಕೂಗಿದರು.