Advertisement

ಕೋವಿಡ್ ವಿರುದ್ಧದ ಸಮರಕ್ಕೆ ಕೇಂದ್ರದಿಂದ ರಾಜ್ಯಗಳಿಗೆ 11 ಸಾವಿರ ಕೋಟಿ ಬಿಡುಗಡೆ

01:42 AM Apr 04, 2020 | Hari Prasad |

ಕೋವಿಡ್ 19 ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ನಿಗಾ ಕೇಂದ್ರಗಳ ನಿರ್ಮಾಣ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಕಲ್ಪಿಸುವ ಸಲುವಾಗಿ ರಾಜ್ಯಗಳಿಗೆ 11,092 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶುಕ್ರವಾರ ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣೆ ನಿಧಿ ವ್ಯಾಪ್ತಿಯಲ್ಲಿ ಮೊತ್ತವನ್ನು ನೀಡಲು ನಿರ್ಧರಿಸಲಾಗಿದೆ.

Advertisement

ಗುರುವಾರ ಪ್ರಧಾನಿಯವರು ನೀಡಿದ ಆಶ್ವಾಸನೆಯನ್ವಯ ಮೊತ್ತ ಬಿಡುಗಡೆ ಮಾಡಲಾಗಿದೆ. ಈ ಮೊತ್ತವನ್ನು ನಿಗಾ ಕೇಂದ್ರಗಳ ಸ್ಥಾಪನೆ, ಸ್ಯಾಂಪಲ್‌ ಸಂಗ್ರಹ ಮತ್ತು ಸ್ಕ್ರೀನಿಂಗ್, ಹೆಚ್ಚುವರಿ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆ, ಆರೋಗ್ಯ ಸೇವಾ ಸಿಬ್ಬಂದಿ, ಥರ್ಮಲ್‌ ಸ್ಕ್ಯಾನರ್‌ಗಳು, ವೆಂಟಿಲೇಟರ್‌ಗಳ ಖರೀದಿಗಷ್ಟೇ ಬಳಸಬೇಕು ಎಂದೂ ಇಲಾಖೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next