ಒಡಿಶಾ : ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ನಿನ್ನೆ(ಗುರುವಾರ, ಆಗಸ್ಟ್ 19) ರಾತ್ರಿ ರೈಲಿನಲ್ಲಿ ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ನಡೆದಾಡುತ್ತಾ ಭಾರತೀಯ ರೈಲು ಸೇವೆ ಹಾಗೂ ಕಾರ್ಯನಿರ್ವಹಿಸುವ ವಿಧಾನದ ಬಗ್ಗೆ ಪ್ರಯಾಣಿಕರಿಂದ ಅಭಿಪ್ರಾಯ ಸ್ವೀಕರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮಾಜಿ ಐಎಎಸ್ ಅಧಿಕಾರಿ ಆಗಿರುವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಸಂಪುಟವನ್ನು ಸೇರ್ಪಡೆಗೊಂಡಿದ್ದರು.
ಇದನ್ನು ಓದಿ : ದಣಿವರಿಯದ “ಅಂತರ್ಯಾಮಿ” ಪಯಣ: ನಿವೃತ್ತ ಶಿಕ್ಷಕ…ಮಹಾನ್ ಪರಿಸರ ಪ್ರೇಮಿ
ನಾಲ್ಕು ದಿನಗಳ ಒಡಿಶಾದಲ್ಲಿ ಬಿಜೆಪಿಯ ಜನ ಆಶೀರ್ವಾದ ಯಾತ್ರೆಯಲ್ಲಿರುವ ವೈಷ್ಣವ್, ಭುವನೇಶ್ವರ್ ನಿಂದ ರಾಯಗಢದ ರೈಲಿನಲ್ಲಿ ನಿನ್ನೆ(ಗುರುವಾರ, ಆಗಸ್ಟ್ 19) ಪ್ರಯಾಣಿಕರ ಜೊತೆಯಲ್ಲಿ ಸಂಚಾರ ಮಾಡಿದ್ದಾರೆ.
ಸಚಿವ ವೈಷ್ಣವ್, ರೈಲ್ವೆಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದ್ದಲ್ಲದೇ, ರೈಲಿನಲ್ಲಿ ಪ್ರಯಾಣಿಸುತ್ತಿರುವವರನ್ನು ಭಾರತೀಯ ರೈಲ್ವೇ ಸೇವೆ ಬಗ್ಗೆ ಪ್ರಯಾಣಿಕರ ಅಭಿಪ್ರಾಯಗಳನ್ನು ಕೇಳಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜನರೊಂದಿಗೆ ಮಾತನಾಡಿರುವುದನ್ನು ಹಾಗೂ ಅಧಿಕಾರಿಗಳೊಂದಿಗೆ ರೈಲ್ವೆ ಇಲಾಖೆಯ ಬಗ್ಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿರುವುದನ್ನು ವೈಷ್ಣವ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ (सबका साथ, सबका विकास, सबका विश्वास, सबका प्रयास/ ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿಗೆ, ಎಲ್ಲರ ಪ್ರಯತ್ನ ) ಎಂದು ಅವರು ಬರೆದುಕೊಂಡಿದ್ದಾರೆ.
ರೈಲು ಸ್ವಚ್ಛವಾಗಿದೆಯೇ ಎಂದು ಒಬ್ಬ ಪ್ರಯಾಣಿಕರಲ್ಲಿ ಸಚಿವ ವೈಷ್ಣವ್ ಕೇಳಿದ್ದಾರೆ. ಮಾತ್ರವಲ್ಲದೇ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳೆ, ನಿಮ್ಮನ್ನು ಭೇಟಿ ಆಗಿರುವುದು ದೊಡ್ಡ ಅವಕಾಶ. ನಾವು ನಿಮ್ಮನ್ನು ಹೀಗೆ ಭೇಟಿ ಮಾಡುತ್ತೇವೆಂದುಕೊಂಡೇ ಇರಲಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ವೈಷ್ಣವ್, ನಾವು ಕೂಡ ನಿಮ್ಮ ಹಾಗೆ ಸಾಮಾನ್ಯ ನಾಗರಿಕರೇ ಎಂದು ಹೇಳಿದ್ದಾರೆ.
ಇದನ್ನು ಓದಿ : ಮುಂದಿನ ಲೋಕಸಭೆ ಚುನಾವಣೆಗೆ ಮೋದಿ ವಿರುದ್ಧ ಸೋನಿಯಾ ನೇತೃತ್ವದ ಮೈತ್ರಿ ಸೈನ್ಯ..?!