Advertisement
ಮೆಟ್ರೋ ರೈಲ್ವೇಯನ್ನು ತುಲನೆ ಮಾಡಿದರೆ ಸ್ಕೈಬಸ್ ಯೋಜನೆ ವೆಚ್ಚ ಬಹಳಷ್ಟು ಕಡಿಮೆ. ಅಲ್ಲದೆ ಮೆಟ್ರೋಕ್ಕಿಂತ ಉತ್ತಮ ನಿರ್ವಹಣೆಯನ್ನು ನಿರೀಕ್ಷಿಸಬಹುದು. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮೆಟ್ರೋಕ್ಕಿಂತ ಸ್ಕೈಬಸ್ ಹೆಚ್ಚು ಪ್ರಯೋಜನಕಾರಿ ಎಂಬುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ದೇಶದ 18 ನಗರ ಪ್ರದೇಶಗಳಲ್ಲಿ ಸ್ಕೈಬಸ್ ಆರಂಭಿಸಲು ಆಯಾಯ ರಾಜ್ಯ ಸರಕಾರ ಕೇಂದ್ರ ಸರಕಾರವನ್ನು ವಿನಂತಿಸಿದೆ. ಇದೇ ರೀತಿ ಕೇರಳವೂ ಸ್ಕೈಬಸ್ ಆರಂಭಿಸಲು ಮುಂದಾದರೆ ಎಲ್ಲ್ಲ ನೆರವು ನೀಡಲು ಕೇಂದ್ರ ಸರಕಾರ ಸಿದ್ಧ ಎಂದು ಗಡ್ಕರಿ ಹೇಳಿದ್ದಾರೆ.
Related Articles
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಬಳಸುವ ತಾಂತ್ರಿಕತೆಯಾಗಿದೆ ಸಸ್ಪೆಂಡೆಡ್ ರೈಲ್. ಮೋನೋ ರೈಲ್ವೇಯ ಇನ್ನೊಂದು ರೂಪವಾಗಿದೆ. ಆಗಸದಲ್ಲಿ ಹಳಿಯಲ್ಲಿ ತೂಗುವ ರೀತಿಯಲ್ಲಿ ಇದರ ಪ್ರಯಾಣ ನಡೆಯಲಿದೆ. ಟ್ರಾಫಿಕ್ ಹೆಚ್ಚಿರುವ ಸ್ಥಳಗಳಲ್ಲಿ ಇದರ ಪ್ರಯೋಜನ ಅಧಿಕವಾಗಿದೆ. ಪಿಲ್ಲರ್‌ಗಳಲ್ಲಿ ಕಾರ್ಯಾಚರಿಸುತ್ತಿರುವುದರಿಂದ ಅಧಿಕ ಸ್ಥಳದ ಅಗತ್ಯವಿಲ್ಲ ಎಂಬುದು ಇದರ ವಿಶೇಷತೆಯಾಗಿದೆ. ರಸ್ತೆಗಳ ಮೇಲ್ಭಾಗದಲ್ಲಿ ರೈಲು ಹಳಿಯನ್ನು ನಿರ್ಮಿಸಲು ಸಾಧ್ಯವಾಗುವುದು ಕೂಡ ಇದರ ಇನ್ನೊಂದು ವಿಶೇಷವಾಗಿದೆ.
ಸಕಲ ನೆರವಿಗೆ ಸಿದ್ಧ
ಕೇರಳ ಸರಕಾರ ಆಸಕ್ತಿಯಿಂದ ಮುಂದೆ ಬಂದರೆ ಕೇರಳದಲ್ಲಿ ಮೆಟ್ರೋ ರೈಲು ಬದಲಿಯಾಗಿ ಸ್ಕೈಬಸ್ ಯೋಜನೆಯನ್ನು ಸಾಕಾರಗೊಳಿಸಲಾಗುವುದು. ಇದಕ್ಕೆ ಅಗತ್ಯದ ಎಲ್ಲ ನೆರವನ್ನು ನೀಡಲಾಗುವುದು. ದೇಶದ 18 ನಗರಗಳಲ್ಲಿ ಸ್ಕೈಬಸ್ ಯೋಜನೆಯನ್ನು ಸಾಕಾರಗೊಳಿಸಲಾಗುವುದು. ಕೇರಳದಲ್ಲೂ ಸ್ಕೈಬಸ್ ಸ್ಥಾಪಿಸಿಲು ಕೇಂದ್ರ ಸರಕಾರ ಉತ್ಸುಕವಾಗಿದೆ.
– ನಿತಿನ್ ಗಡ್ಕರಿ
ಕೇಂದ್ರ ಸಾರಿಗೆ ಸಚಿವ
Advertisement