Advertisement

ಕೇಂದ್ರ ಕೊಟ್ಟದ್ದು ಅನುದಾನ ಅಲ್ಲ, ನಮ್ಮ ಪಾಲು 

04:35 PM Nov 04, 2017 | Team Udayavani |

ಹಾಸನ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನೀಡಿದ ಅನುದಾನ  ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಬಳಕೆಮಾಡಿದೆ ಎಂದು ಆರೋಪಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ತಿರುಗೇಟು ನೀಡಿದ್ದು,’ಕೇಂದ್ರ ನಮಗೆ ನೀಡಿದ್ದು ಅನುದಾನ ಅಲ್ಲ, ನಮ್ಮ ಪಾಲು’ಎಂದಿದ್ದಾರೆ. 

Advertisement

ಶ್ರವಣಬೆಳಗೊಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ಕೇಂದ್ರ ಸರ್ಕಾರ ರಾಜ್ಯಗಳಿಗೆ 2 ರೀತಿ  ಅನುದಾನ ನೀಡುತ್ತದೆ. ಒಂದು ಗ್ರ್ಯಾಂಟ್‌, ಇನ್ನೊಂದು ತೆರಿಗೆ ಹಣದಲ್ಲಿ. ತೆರಿಗೆ ಹಣದ ನಮ್ಮ ಪಾಲು ನಮಗೆ ನೀಡಿದೆ’ಅಷ್ಟೇ ಎಂದರು   

‘ಕೇಂದ್ರ ತೆರಿಗೆ ಸಂಗ್ರಹಿಸುತ್ತದೆ. ಬೇರೆ ಬೇರೆ ರೀತಿಯಲ್ಲಿ ರಾಜ್ಯದಲ್ಲಿ ಸಂಗ್ರಹಿಸಿದ ತೆರಿಗೆಯಲ್ಲಿ ಹಣಕಾಸು ಆಯೋಗ ಮಾಡಿದ ಶಿಫಾರಸಿನಂತೆ  42 % ನಮಗೆ ಕೊಟ್ಟರೆ, 58% ಅವರೇ ಇಟ್ಟುಕೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು. 

‘ಅಮಿತ್‌ ಶಾ  ಅವರು ನಾವು ಪಡೆದ ಪಾಲನ್ನು ಭಿಕ್ಷೆ ಕೊಟ್ಟವರ ಹಾಗೆ ಹೇಳುತ್ತಿದ್ದಾರೆ’ ಎಂದು ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next