Advertisement

ರಸ್ತೆ ಕಾಮಗಾರಿಗೆ ಕೇಂದ್ರದ ಅನುದಾನ

02:07 PM Aug 18, 2020 | Suhan S |

ಚಿಂತಾಮಣಿ: ತಾಲೂಕಿನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿಯಲ್ಲಿ 18 ಕೋಟಿ ರೂ. ವೆಚ್ಚದಲ್ಲಿ 40 ಕಿ.ಲೋ.ಮೀಟರ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದು, ಈ ವಿಚಾರವಾಗಿ ಸ್ಥಳೀಯ ಶಾಸಕರು ಶೋ ಕೊಡುವ ಅಗತ್ಯವಿಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ದೂರಿದರು.

Advertisement

ತಾಲೂಕಿನ ಬೊಮ್ಮೇಕಲ್ಲು, ಬ್ಯಾಲಹಳ್ಳಿ ಕ್ರಾಸ್ ಮತ್ತು ಸಿಕ್ಕಪುರ ಗ್ರಾಮದಲ್ಲಿ 18 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳ ಭೂಮಿಪೂಜೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಇದಕ್ಕೆ ಶಾಸಕರು ಮನೆಯಿಂದ ಅನುದಾನ ತಂದಿಲ್ಲ. ಈ ವಿಚಾರವಾಗಿ ಯಾರೊಬ್ಬರು ಪ್ರದರ್ಶನ ವ್ಯಕ್ತಪಡಿಸುವಂತಿಲ್ಲ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವಿರುದ್ಧ ದೂರಿದರು.

ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌, ಜಿ.ಪಂ, ತಾ.ಪಂ ಸದಸ್ಯರು ಹಾಗೂ ಬಿಜೆಪಿ ಮುಖಂಡರ ಬಳಿ ತಾಲೂಕಿನ ಯಾವ ಯಾವ ರಸ್ತೆಗೆ ಈ ಯೋಜನೆಯಡಿಯಲ್ಲಿ ಅನುದಾನ ನೀಡಬೇಕೆಂದು ಚರ್ಚಿಸಿ ಪಟ್ಟಿ ಸಿದ್ಧಪಡಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಕಾರದಿಂದ ಮಂಜೂರು ಮಾಡಿಕೊಂಡು ಬಂದಿದ್ದೇನೆ. ಈ ಕಾಮಗಾರಿ ನಡೆಯಲು ಡಾ.ಎಂ.ಸಿ.ಸುಧಾಕರ್‌ ರವರ ಆಸಕ್ತಿ ಇದೆ ಎಂದರು.

ಜಿಪಂ ಸದಸ್ಯ ಶಿವಣ್ಣ, ಪವಿತ್ರಾ ಚಂದ್ರಶೇಖರ್‌, ಶ್ರೀನಿವಾಸ್‌, ತಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರುಣ್‌ ಬಾಬು, ಬಿಜೆಪಿ ನಗರ ಘಟಕ ಅಧ್ಯಕ್ಷ ಮಹೇಶ್‌ ಬೈ, ಸೂರ್ಯಪ್ರಕಾಶ್‌, ಬ್ಯಾಲಹಳ್ಳಿ ಆಂಜನೇಯರೆಡ್ಡಿ, ಗ್ರಾಮೀಣ ಪ್ರಧಾನ ಕಾರ್ಯದರ್ಶಿಗಳಾದ ನಾರಾಯಣರಾಜು ಮತ್ತು ಸಿ.ಆರ್‌.ವೆಂಕಟೇಶ್‌ (ಅಪ್ಪಲ), ಗಾಜಲಶಿವ, ಕಾರ್ಯಕರ್ತರು, ಸುಧಾಕರ್‌ರ ಅಭಿಮಾನಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next