Advertisement

ಲಿಂಗಾಯತಕ್ಕೆ ಕೇಂದ್ರ ಮಾನ್ಯತೆ: ಮಾತೆ ವಿಶ್ವಾಸ

07:05 AM Aug 18, 2018 | |

 ಕೂಡಲಸಂಗಮ: ಲಿಂಗಾಯತ ಧರ್ಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ವತಂತ್ರ ಧರ್ಮದ ಮಾನ್ಯತೆ ಕೊಡುವರು ಎಂಬ ಭರವಸೆ ಇದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.  

Advertisement

ಲೋಕಸಭಾ ಚುಣಾವಣೆಯಲ್ಲಿ ಪಕ್ಷ ಬೆಂಬಲಿಸುವ ವಿಚಾರದಲ್ಲಿ ಸದ್ಯ ತಟಸ್ಥ ಧೋರಣೆ ಅನುಸರಿಸುತ್ತೇವೆ. ಅದಕ್ಕೆ ಇನ್ನೂ  ಸಮಯಾವಕಾಶವಿದೆ. ಕೇಂದ್ರ ಸರಕಾರ ಲಿಂಗಾಯತ ಧರ್ಮದ ವಿಚಾರದಲ್ಲಿ ಏನು ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ನೋಡಿ ನಮ್ಮ ನಿಲುವು ಪ್ರಕಟಿಸುತ್ತೇವೆ ಎಂದರು.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡುವ ಕುರಿತು ಈಗಾಗಲೇ ರಾಜ್ಯ ಅಂಗೀಕರಿಸಿರುವ ನಾಗಮೋಹನದಾಸ್‌ ವರದಿಯನ್ನು ಕೇಂದ್ರ ತಿರಸ್ಕರಿಸಿದರೆ ಮಾತ್ರ ನಾವು ಸುಪ್ರೀಂ ಕೋರ್ಟ್‌ಗೆ ಮೊರೆ ಹೊಗಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next