Advertisement

ರೋಟರಿ ಶತಮಾನೋತ್ಸವ: ವಿವಿಧ ಕಾರ್ಯಕ್ರಮ ಆಯೋಜನೆ

12:06 PM Feb 24, 2017 | |

ಕೆ.ಆರ್‌.ನಗರ: ದೇಶಕ್ಕೆ ಶಾಪವೆಂಬಂತೆ ಇದ್ದ ಪೋಲಿಯೋವನ್ನು ತೊಡೆದುಹಾಕುವಲ್ಲಿ ಸರ್ಕಾರದೊಂದಿಗೆ ರೋಟರಿ ಸಂಸ್ಥೆ ನಡೆಸಿದ ಅವಿರತ ಪ್ರಯತ್ನದ ಫ‌ಲಿಸಿದೆ. ದೇಶ ಪೋಲಿಯೋ ಮುಕ್ತವಾಗಿದೆ. ಇದು ರೋಟರಿ ಸಂಸ್ಥೆಯ ಸಾಮಾಜಿಕ ಕಳಕಳಿಯ ಹೆಗ್ಗುರುತಾಗಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್‌ ಡಾ.ಎಸ್‌.ಆರ್‌.ನಾಗಾರ್ಜುನ್‌ ಹೇಳಿದರು.

Advertisement

ರೋಟರಿ ಸಂಸ್ಥೆ ದತ್ತಿನಿಧಿ ಎಂದು ಪ್ರಾರಂಭಿಸಿದ್ದು, ಈಗ ಶತಮಾನೋತ್ಸವದ ಅಂಚಿನಲ್ಲಿದೆ. ಆ ಪ್ರಯುಕ್ತ ಜಿಲ್ಲಾದ್ಯಂತ ಲಕ್ಷಾಂತರ ಸಸಿಗಳನ್ನು ನೆಡುವ ಹಾಗೂ ಆರೋಗ್ಯ ಶಿಬಿರ ನಡೆಸಲಾಗುತ್ತದೆ. ಸಂಸ್ಥೆಯ ತಾಲೂಕು ಘಟಕದ ವತಿಯಿಂದ ಸುಂಕನಹಳ್ಳಿ ಗ್ರಾಮವನ್ನು ದತ್ತು ಪಡೆದು ಅಲ್ಲಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿರುವುದರ ಬಗ್ಗೆ ಗವರ್ನರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ರೋಟರಿ ಸಂಸ್ಥೆ 10 ರಾಷ್ಟ್ರಗಳಲ್ಲಿ ವ್ಯಾಪಿಸಿದ್ದು, 13ನೇ ವರ್ಷಕ್ಕೆ ದಾಪು ಗಾಲಿಡುತ್ತಿದೆ. ಲಕ್ಷಕ್ಕಿಂತಲೂ ಹೆಚ್ಚು ಸದಸ್ಯರನ್ನು 3 ಸಾವಿರ ರೋಟರಿ ಕ್ಲಬ್‌ಗಳು ಹೊಂದಿವೆ ಎಂದು ತಿಳಿಸಿದರು. ಕೆ.ಆರ್‌. ನಗರ ರೋಟರಿ ಸಂಸ್ಥೆಯ ಅಧ್ಯಕ್ಷ  ಅರುಣ್‌ ಬಿ.ನರಗುಂದ್‌ ಮಾತನಾಡಿ, ರೋಟರಿ ಸಂಸ್ಥೆ ದತ್ತು ಪಡೆದಿರುವ ಸುಂಕನಹಳ್ಳಿ ಗ್ರಾಮಕ್ಕೆ ಮಾಡಿರುವ ಮೂಲ ಸೌಕರ್ಯಗಳ ಬಗ್ಗೆ ವಿವರಿಸಿದರು.

ಇದಕ್ಕಾಗಿ ಸಂಗ್ರಹಿಸಿರುವ ಹಣದಲ್ಲಿ ಉಳಿದಿರುವ ಹಣವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಸಿನೀರಿನ ಉಪಕರಣವನ್ನು ಅಳವಡಿಸಲು ಉದ್ದೇಶಿ ಸಿರುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರೋಟರಿ ಕಾರ್ಯದರ್ಶಿ ಅನಂತರಾಜ್‌, ರೋಟೇರಿಯನ್‌ಗಳಾದ ಮೋಹನ್‌ ಕುಮಾರ್‌, ಸುರೇಶ್‌, ಶಶಿಭೂಷಣ್‌, ರವಿಶಂಕರ್‌, ವೈ.ಎಸ್‌. ಕುಮಾರ್‌, ಸತೀಶ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next