Advertisement

ಪಾದ್ರೆ ಪಿಯೋ ಮಹಾನ್‌ ಸಂತ: ಬಿಷಪ್‌ ಪೀಟರ್‌ ಪಾವ್ಲ್ ಸಲ್ದಾನ್ಹಾ 

12:27 PM Sep 24, 2018 | |

ಮಹಾನಗರ: ಕೆಥೋಲಿಕ್‌ ಕ್ರೈಸ್ತ ಸಂತ (ಕಪುಚಿನ್‌ ಸಂಸ್ಥೆ) ಪಾದ್ರೆ ಪಿಯೊ ಅವರು ಯೇಸು ಕ್ರಿಸ್ತರ ಪಂಚ ಗಾಯಗಳನ್ನು (ಕ್ಷತಿ ಚಿಹ್ನೆ) ಪಡೆದುದರ ಶತಮಾನೋತ್ಸವ ಹಾಗೂ ಅವರ ಪುಣ್ಯ ಸ್ಮರಣೆಯ 50ನೇ ವರ್ಷಾಚರಣೆ ನಗರದ ಜೈಲ್‌ ರಸ್ತೆಯಲ್ಲಿರುವ ಬಿಜೈ ಸಂತ ಪಿಯೊ ಪುಣ್ಯ ಕ್ಷೇತ್ರದಲ್ಲಿ ರವಿವಾರ ನಡೆಯಿತು. ಸಂಜೆ ನಡೆದ ಸಂಭ್ರಮದ ಬಲಿಪೂಜೆಯಲ್ಲಿ ಮಂಗಳೂರಿನ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್  ಸಲ್ಡಾನ್ಹಾ ಅವರು ಪ್ರಧಾನ ಗುರುಗಳಾಗಿದ್ದರು. ಹಲವಾರು ಮಂದಿ ಧರ್ಮ ಗುರುಗಳು ಮತ್ತು ಭಕ್ತರು ಭಾಗವಹಿಸಿದ್ದರು.

Advertisement

ಬಲಿಪೂಜೆಗೆ ಮುಂಚಿತವಾಗಿ ಪಾದ್ರೆ ಪಿಯೊ ಅವರ ಸ್ಮರಣಿಕೆಯನ್ನು ಬಿಷಪರು ಆಶೀರ್ವದಿಸಿದರು. ಪುಣ್ಯ ಕ್ಷೇತ್ರದ ಗುರುಗಳಾದ ಫಾ| ಡೆರಿಕ್‌ ಡಿ’ಸೋಜಾ, ಫಾ| ಮ್ಯಾಕ್ಸಿಂ ಡಿ’ಸಿಲ್ವಾ ಮತ್ತಿತರರು ಉಪಸ್ಥಿತರಿದ್ದರು.

ಕ್ರಿಸ್ತರ ಗಾಯಗಳಿಂದ ಅಲಂಕೃತಗೊಂಡ ಹಾಗೂ ಕ್ರಿಸ್ತರ ಪ್ರೀತಿಯಿಂದ ಬೆಳಗಿದ ಮಹಾನ್‌ ಸಂತ ಪಾದ್ರೆ ಪಿಯೊ ಅವರು ಯೇಸು ಕ್ರಿಸ್ತರ ಗಾಯಗಳಿಂದ ಅಲಂಕೃತಗೊಂಡ ಹಾಗೂ ಯೇಸು ಕ್ರಿಸ್ತರ ಪ್ರೀತಿಯಿಂದ ಬೆಳಗಿದ ಮಹಾನ್‌ ಸಂತರಾಗಿದ್ದಾರೆ ಎಂದು ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ತಮ್ಮ ಸಂದೇಶದಲ್ಲಿ ಹೇಳಿದರು.

ಸಂಪತ್ತು ಸದ್ಬಳಕೆ ಮಾಡಿ
ತಮ್ಮ ದೇಹದಲ್ಲಿ ಏಕಾ ಏಕಿ ಕಂಡು ಬಂದ ಐದು ಗಾಯಗಳು ಹಾಗೂ ಅದರಿಂದಾಗಿ 50 ವರ್ಷಗಳ ಕಾಲ ಪಾದ್ರೆ ಪಿಯೊ ಅವರು ಅನೇಕ ಕಷ್ಟ ಸಂಕಷ್ಟಗಳನ್ನು ಅನುಭವಿಸಬೇಕಾಗಿ ಬಂದಿತ್ತು. ಈ ಸಂದರ್ಭ ಅವರು ಆಸ್ಪತ್ರೆಯೊಂದನ್ನು ಸ್ಥಾಪಿಸಿ ಜನರಿಗೆ ಕೊಡುಗೆಯಾಗಿ ನೀಡಿದ್ದರು ಎಂದರು.

ಶಿಲುಬೆಯ ಮಹತ್ವ, ಪರಮ ಪ್ರಸಾದದ ಶ್ರೀಮಂತಿಕೆ ಹಾಗೂ ಪಾಪ ನಿವೇದನೆಯ ಸಂಸ್ಕಾರದ ಪ್ರಾಮುಖ್ಯವನ್ನು ಸಂತ ಪಾದ್ರೆ ಪಿಯೋ ಲೋಕಕ್ಕೆ ತಿಳಿಯಪಡಿಸಿದ್ದಾರೆ. ದೇವರು ನೀಡಿರುವ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ಜೀವನ ಪರಿವರ್ತನೆ ಹೊಂದಿ ಉತ್ತಮ ಬದುಕು ಸಾಗಿಸಲು ಪಾದ್ರೆ ಪಿಯೊ ಅವರು ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.

Advertisement

ಪಾದ್ರೆ ಪಿಯೊ ಪುಣ್ಯಕ್ಷೇತ್ರದಲ್ಲಿ ಹಬ್ಬ ಆಚರಣೆಯ ಪ್ರಯುಕ್ತ 9 ದಿನಗಳ ನವೇನಾ ಪ್ರಾರ್ಥನೆ ಸೆ. 14 ರಂದು ಆರಂಭವಾಗಿತ್ತು.  ಹಬ್ಬದ ದಿನವಾದ ಸೆ. 23 ರಂದು ಸಂಜೆಯ ಬಲಿಪೂಜೆಯ ಹೊರತಾಗಿ ಇತರ ಮೂರು ಬಲಿ ಪೂಜೆಗಳು ಜರಗಿದವು.

ಹಿನ್ನೆಲೆ: 1887 ಮೇ 25ರಂದು ಇಟೆಲಿಯ ಪಿಯೆತ್ರೆಲ್ಜಿನಾ ಎಂಬಲ್ಲಿ ಜನಿಸಿದ ಪಾದ್ರೆ ಪಿಯೊ (ಮೂಲ ಹೆಸರು ಫ್ರಾನ್ಸಿಸ್ಕೊ) ಅವರು ಕಪುಚಿನ್‌ ಧರ್ಮಗುರುಗಳ ಸಂಸ್ಥೆಗೆ ಸೇರ್ಪಡೆಗೊಂಡು 1910ರಲ್ಲಿ ಗುರು ದೀಕ್ಷೆ ಪಡೆದಿದ್ದರು. 1918 ಸೆ. 28ರಂದು ಪಾಪ ನಿವೇದನೆ ಸಂಸ್ಕಾರದಲ್ಲಿ ನಿರತರಾಗಿದ್ದಾಗ ಅವರ ದೇಹದಲ್ಲಿ ಯೇಸು ಕ್ರಿಸ್ತರ ಪಂಚ ಗಾಯಗಳು ಕಾಣಿಸಿಕೊಂಡಿದ್ದವು. ಗಾಯಗಳಿಗೆ ವೈಜ್ಞಾನಿಕವಾಗಿ ಕಾರಣಗಳನ್ನು ಕಂಡುಕೊಳ್ಳಲು ಯಾವುದೇ ಅಂತಾರಾಷ್ಟ್ರೀಯ ವೈದ್ಯರಿಂದ ಸಾಧ್ಯವಾಗಿರಲಿಲ್ಲ. 50 ವರ್ಷಗಳ ತನಕ ಈ ಗಾಯಗಳು ಕಾಣಿಸಿಕೊಂಡಿದ್ದವು. 1968 ಸೆ. 23 ರಂದು ಅವರು ಸಾವನ್ನಪ್ಪುವಾಗ ಈ ಗಾಯ ಮಾಸಿ ಹೋಗಿದ್ದವು. 1999ರಲ್ಲಿ ಅವರನ್ನು 2002ರಲ್ಲಿ ಸಂತ ಪದವಿಗೇರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.