Advertisement
ಬಾಲಿವುಡ್ ನಟ ಅಕ್ಷಯ ಕುಮಾರ್ ಟ್ವೀಟ್ ಮಾಡಿ “ಮಾಲ್ದೀವ್ಸ್‌ನ ಪ್ರಮುಖರು ಭಾರತದ ವಿರುದ್ಧ ದ್ವೇಷಮಯ ಮತ್ತು ಜನಾಂಗೀಯ ನಿಂದನೆಯ ಅಂಶಗಳನ್ನು ವ್ಯಕ್ತಪಡಿಸಿದ್ದಾರೆ. ಆ ದೇಶಕ್ಕೆ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಕಳುಹಿಸುವ ಭಾರತದ ವಿರುದ್ಧವೇ ಇಂಥ ಕೀಳು ಅಭಿಪ್ರಾಯ ವ್ಯಕ್ತಪಡಿಸಿದ್ದು ಎಷ್ಟು ಸರಿ? ಮಾಲ್ದೀವ್ಸ್ ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಇಂಥ ಅಪ್ರಚೋದನಾಕಾರಿ ಇರುವ ದ್ವೇಷವನ್ನು ನಾವೇಕೆ ಪ್ರೋತ್ಸಾಹಿಸಬೇಕು ಎಂದು ಪ್ರಶ್ನಿಸಿದ್ದಾರೆ. ನಾವೆಲ್ಲರೂ ನಮ್ಮ ದೇಶದ ಸುಂದರ ಸ್ಥಳಗಳಿಗೆ ಭೇಟಿ ನೀಡೋಣ ಎಂದು ಬರೆದುಕೊಂಡಿದ್ದಾರೆ.
Related Articles
Advertisement
ಜನಾಂಗೀಯ ನಿಂದನೆ
ಮಾಲ್ದೀವ್ಸ್‌ನ ಸಚಿವರ ಹೇಳಿಕೆಯನ್ನು ಜನಾಂಗೀಯ ನಿಂದನೆ ಎಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ಟೀಕಿಸಿ ದ್ದಾರೆ. “ಮಾಲ್ದೀವ್ಸ್‌ನಲ್ಲಿ ಇರುವವರೆಲ್ಲರೂ ಮುಸ್ಲಿಂ ಫೋಬಿಯಾದಿಂದ ಬಳಲುತ್ತಿದ್ದಾರೆ. ಲಕ್ಷದ್ವೀಪದಲ್ಲಿ ಮುಸ್ಲಿಂ ಸಮುದಾಯದವರು ಶೇ.98 ಮಂದಿ ಇದ್ದರೂ ಮಾಲ್ದೀವ್ಸ್‌ನಂಥವರಂತೆ ವರ್ತಿಸುತ್ತಿಲ್ಲ. ಹೀಗಾಗಿ ಇದೊಂದು ಜನಾಂಗೀಯ ನಿಂದನೆಯ ಹೇಳಿಕೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ.ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬೀಚ್‌ನಲ್ಲಿ ಕ್ರಿಕೆಟ್ ಆಡುವ ಫೋಟೋ ಟ್ವೀಟ್ ಮಾಡಿ “ನಮ್ಮ ದೇಶದಲ್ಲಿ ಅತ್ಯಂತ ಸುಂದರ ವಾಗಿರುವ ಸಮುದ್ರ ಕಿನಾರೆಗಳು ಮತ್ತು ಉತ್ತಮ ದ್ವೀಪಗಳು ಇವೆ. ಅತಿಥಿ ದೇವೋಭವ ಎನ್ನುವ ತಣ್ತೀದಂತೆ ನಾವು ಪ್ರವಾಸಿಗರನ್ನು ಸ್ವಾಗತಿಸುತ್ತೇವೆ. ನಮ್ಮ ದೇಶದಲ್ಲಿ ಶೋಧಿಸಿ ತೆಗೆಯಬೇಕಾದ ಇನ್ನೂ ಅನೇಕ ಸುಂದರ ಸ್ಥಳಗಳು ಇವೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಮಹಾರಾಷ್ಟ್ರದ ಸಿಂಧೂದುರ್ಗಕ್ಕೆ ಭೇಟಿ ನೀಡಿದ್ದನ್ನೂ ಅದರಲ್ಲಿ ನೆನಪಿಸಿಕೊಂಡಿದ್ದಾರೆ. ಮೋದಿ ವಿರುದ್ಧ ಪದ ಬಳಕೆ ಖಂಡನಾರ್ಹ ಮೊಹಮ್ಮದ್ ನಶೀದ್: ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ದೇಶದ ಮೂವರು ಸಚಿವರು ಬಳಕೆ ಮಾಡಿದ ಭಾಷೆಯ ವಿರುದ್ಧ ಮಾಲ್ದೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರಕಾರದಲ್ಲಿ ಸಚಿವೆಯಾಗಿದ್ದುಕೊಂಡು ಪ್ರಮುಖ ಮಿತ್ರ ರಾಷ್ಟ್ರದ ಪ್ರಧಾನಿಯೊಬ್ಬರ ವಿರುದ್ಧ ತುತ್ಛ ಭಾಷೆ ಪ್ರಯೋಗ ಮಾಡಿದ್ದು ಖಂಡನೀಯ. ಭಾರತ ಯಾವತ್ತೂ ಮಾಲ್ದೀವ್ಸ್‌ನ ಭದ್ರತೆ, ಆರ್ಥಿಕಾಭಿವೃದ್ಧಿ ಕ್ಷೇತ್ರದಲ್ಲಿ ಪ್ರಧಾನ ಪಾಲುದಾರ ರಾಷ್ಟ್ರ. ನಮ್ಮ ದೇಶದ ಸರಕಾರ ಅವಹೇಳನಕಾರಿ ಹೇಳಿಕೆಯಿಂದ ದೂರ ಸರಿಯಬೇಕು ಎಂದು ಆಗ್ರಹಿಸಿದ್ದರು. ಲಕ್ಷದ್ವೀಪ ಯಾವತ್ತೂ ಹೋಗುವ ಸ್ಥಳವಾಗಿದೆ. ನಮ್ಮ ದೇಶ ಇತರ ರಾಷ್ಟ್ರಗಳ ಪ್ರವಾಸಿಗರನ್ನು ಅತಿಥಿ ದೇವೋಭವ ಎಂದು ಗೌರವದಿಂದ ಸ್ವಾಗತಿಸುವ ಸಂಪ್ರದಾಯ ಹೊಂದಿದೆ.
ಜಾನ್ ಅಬ್ರಹಾಂ, ಬಾಲಿವುಡ್ ನಟ ಲಕ್ಷದ್ವೀಪದ ಬೀಚ್‌ಗಳು ಯಾವತ್ತಿದ್ದರೂ ಸುಂದರ. ಅವುಗಳು ಸ್ಥಳೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ನಾನು ಲಕ್ಷದ್ವೀಪದ ಬೀಚ್‌ಗೆ ತೆರಳಲು ಶೀಘ್ರವೇ ಬುಕ್ ಮಾಡಲಿದ್ದೇನೆ.
ಶ್ರದ್ಧಾ ಕಪೂರ್, ಬಾಲಿವುಡ್ ನಟಿ ನಮ್ಮ ದೇಶದಲ್ಲಿ ಅತ್ಯಂತ ಸುಂದರವಾಗಿರುವ ಸಮುದ್ರ ಕಿನಾರೆಗಳು ಮತ್ತು ಉತ್ತಮ ದ್ವೀಪಗಳು ಇವೆ. ಅತಿಥಿ ದೇವೋಭವ ಎನ್ನುವ ತಣ್ತೀದಂತೆ ನಾವು ಪ್ರವಾಸಿಗರನ್ನು ಸ್ವಾಗತಿಸುತ್ತೇವೆ. ನಮ್ಮ ದೇಶದಲ್ಲಿ ಶೋಧಿಸಿ ತೆಗೆಯಬೇಕಾದ ಇನ್ನೂ ಅನೇಕ ಸುಂದರ ಸ್ಥಳಗಳು ಇವೆ.
ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ ಮಾಲ್ದೀವ್ಸ್‌ಗೆ ಭೇಟಿ ನೀಡುವ ಪ್ರವಾಸಿಗರು
ಪ್ರವಾಸಿಗರ ಸಂಖ್ಯೆ ದೇಶ
2. 9 ಲಕ್ಷ ಭಾರತ
2 ಲಕ್ಷ ರಷ್ಯಾ
1.87 ಲಕ್ಷ ಚೀನ ಪ್ರವಾಸೋದ್ಯಮದಿಂದ ಮಾಲ್ದೀವ್ಸ್‌ಗೆ ಆದಾಯ
7,349.10 ಕೋ.ರೂ.
2023 ಸೆಪ್ಟಂಬರ್ ಅಂತ್ಯಕ್ಕೆ 6,951.50 ಕೋ.ರೂ. 2022ರ 2ನೇ ತ್ತೈಮಾಸಿಕದಲ್ಲಿ ದೇಶದಲ್ಲೇ ಹೊಸ ಪ್ರವಾಸಿ ತಾಣಕ್ಕಾಗಿ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಲ್ದೀವ್ಸ್‌ನ ಮೂವರು ಸಚಿವರು ಹೊಣೆ ಗೇಡಿನದ ಹೇಳಿಕೆ ನೀಡುತ್ತಿದ್ದಂತೆಯೇ ಜಾಲ ತಾಲತಾಣಗಳಲ್ಲಿ ಭಾರತದ ನೆರೆಯ ದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ದೇಶದಲ್ಲಿ ಇರುವ ಅತ್ಯುತ್ತಮ ಸಮುದ್ರ ಕಿನಾರೆಗಳನ್ನು ಶೋಧಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವರು ಜಾಲತಾಣ ಗಳಲ್ಲಿ ಹೊಸ ಪ್ರಯತ್ನ ನಡೆಸಿ ದ್ದಾರೆ. ಇದರ ಜತೆಗೆ ಪ್ರಮುಖ ಕ್ರಿಕೆಟಿಗರೂ ಕೂಡ ದೇಶದ ಪ್ರವಾಸೋದ್ಯಮಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ದೇಶವಾಸಿಗಳಿಗೆ ಬೆಂಬಲ ನೀಡಿದ್ದಾರೆ. ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಸುರೇಶ್ ರೈನಾ ಅವರು ದೇಶದ ಸಮುದ್ರ ಕಿನಾರೆಗಳು ಮತ್ತು ಪ್ರವಾಸೋದ್ಯಮ ಸ್ಥಳಗಳನ್ನು ಹೆಚ್ಚಿನ ರೀತಿಯಲ್ಲಿ ಗುರುತಿಸುವಂತೆ ಮಾಡಬೇಕು ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ದೇಶದಲ್ಲಿ ಇದುವರೆಗೆ ಪ್ರವಾಸಿಗಾಗಿ ತೆರೆದುಕೊಳ್ಳದ ಸಮುದ್ರ ಕಿನಾರೆಗಳನ್ನು ಶೋಧಿಸಬೇಕು. ನಮ್ಮ ದೇಶದ ಪ್ರವಾಸಿಗ ರಿಂದಲೇ ಆದಾಯ ಪಡೆದು ಕೊಳ್ಳುವ ಮಾಲ್ದೀವ್ಸ್ ನಾಯ ಕರ ನಿಲುವು ಖಂಡನೀಯ ಎಂದಿದ್ದಾರೆ. ವೆಂಕಟೇಶ್ ಪ್ರಸಾದ್ ಕೂಡ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ, “ಮಾಲ್ದೀವ್ಸ್‌ನಂಥ ಬಡ ದೇಶ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಶೇ.15 ಮಂದಿ ಭಾರತೀಯರೇ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂಬುದನ್ನು ಆ ದೇಶದ ಸರಕಾರ ಮರೆಯಬಾರದು’ ಎಂದಿದ್ದಾರೆ. ಎಕ್ಸ್‌ಪ್ಲೋರ್ ಇಂಡಿಯನ್ ಐಲ್ಯಾಂಡ್ಸ್ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಈ ಅಂಶ ಟ್ರೆಂಡಿಂಗ್ ಆಗಿದೆ.