Advertisement
ಸಂಭ್ರಮಾಚರಣೆ ನಡೆದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತಾದರೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಕಾಶ್‌ದೀಪ್‌ಗೆ ವಿಷಯವನ್ನು ತಿಳಿಸಿದಾಗ ಪೊಲೀಸರು ಚುರುಕಾದರು ಎನ್ನಲಾಗಿದೆ. ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಹಸಿರು ಧ್ವಜಗಳನ್ನು ತೆಗೆದುಹಾಕಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಠಾಣೆ ಉಸ್ತುವಾರಿ ಪ್ರದೀಪ್ ಶುಕ್ಲಾ ಹೇಳಿದ್ದಾರೆ. ಈ ಮಧ್ಯೆ ಯುವಕರು ಸಂಭ್ರಮಿಸಿರುವ ಮತ್ತು “ಹಫೀಜ್ ಸಯೀದ್ ಜಿಂದಾಬಾದ್’ ಹಾಗೂ “ಪಾಕಿಸ್ತಾನ್ ಜಿಂದಾಬಾದ್’ ಎಂದಿರುವುದಕ್ಕೆ ಸಾಕ್ಷ್ಯವಾಗಿ ವೀಡಿಯೋ ಇದೆ ಎಂದು ಬಲಪಂಥೀಯ ಮುಖಂಡರು ಹೇಳಿದ್ದಾರೆ.
Advertisement
ಉಗ್ರ ಹಫೀಜ್ ಬಿಡುಗಡೆಗೆ ಉ.ಪ್ರದೇಶದಲ್ಲಿ ಸಂಭ್ರಮ!
06:05 AM Nov 26, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.