ಬೊಯಿಸರ್: ಬೊಯಿಸರ್ ಪಶ್ಚಿಮದ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಸದ್ಗುರು ಶ್ರೀ ನಿತ್ಯಾನಂದ ಸ್ವಾಮೀಜಿಯವರ ಪುಣ್ಯತಿಥಿ ಆಚರಣೆ ಯು ಆ. 8ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾತಃಕಾಲ ದಿಂದ ಗಣಪತಿಹೋಮ ನಡೆಯಿತು. ಪದ್ಮಾ ಮತ್ತು ಸತ್ಯಾ ಕೋಟ್ಯಾನ್ ದಂಪತಿ ಗಣಪತಿ
ಹೋಮದ ನೇತೃತ್ವ ವಹಿಸಿದ್ದರು. ಬಳಿಕ ಪಂಚಾಮೃತ ಕಲಶಾಭಿಷೇಕವನ್ನು ಆಯೋಜಿಸಲಾಗಿದ್ದು, ಸತ್ಯಾ ಕೋಟ್ಯಾನ್ ಹಾಗೂ
ಭಕ್ತಮಂಡಳಿಯ ಸದಸ್ಯರು ಉಪಸ್ಥಿತರಿ ದ್ದರು. ಮಂದಿರದ ಮಹಿಳಾ ಭಜನ ಮಂಡಳಿಯ ವತಿಯಿಂದ ಭಜನ ಕಾರ್ಯಕ್ರಮ ಜರ ಗಿತು. ಹಿಮ್ಮೇಳದಲ್ಲಿ ತಬಲಾದಲ್ಲಿ ಕಲಾವಿದ ಅಶೋಕ್ ಸಾಲ್ಯಾನ್ ಸಹಕರಿಸಿದರು.
ಇದನ್ನೂ ಓದಿ:ಹೊಸ ಚಿತ್ರಕ್ಕೆ ನಿರಂಜನ್ ತಯಾರಿ
ಆಷಾಡ ಮಾಸದಲ್ಲಿ ದೊರೆಯುವ ವಿವಿಧ ಜಾತಿಗಳ ಹೂಗಳಿಂದ ಭಕ್ತವೃಂದದ ವತಿಯಿಂದ ನಿತ್ಯಾನಂದ ಬಾಬಾರ ವಿಶೇಷ ಅಲಂಕಾರ ಸೇವೆ ನಡೆಯಿತು. ಅಲಂಕಾರ ಆರತಿ ಹಾಗೂ ಪೂಜೆಯನ್ನು ನವನೀತಾ ಮತ್ತು ಶ್ರೀನಿವಾಸ್ ಕೋಟ್ಯಾನ್ ದಂಪತಿ ನೆರವೇರಿಸಿದರು. ಭಕ್ತವೃಂದದ ವತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಧಾರ್ಮಿಕ ವಿಧಿ-ವಿಧಾನಗಳನ್ನು ಹರೀಶ್ ಶಾಂತಿ ಹಾಗೂ ಮಂದಿರದ ಪುರೋಹಿತ ರಾಜೇಶ್ ಶಾಂತಿ ನೆರವೇರಿಸಿದರು.
ಮಂದಿರದ ಪುರೋಹಿತ ರಾಜೇಶ್ ಶಾಂತಿ ವಿಟ್ಲ ಇವರ ಸಾಹಿತ್ಯದ, ಜಿ. ಎಸ್. ಗುರುಪುರ ಅವರ ರಾಗಸಂಯೋಜನೆಯ, ಚೈತ್ರಾ ಕಲ್ಲಡ್ಕ ಹಾಡಿರುವ ಭಕ್ತಿ ಮದಿಪು ನಿತ್ಯಾನಂದ ಸ್ವಾಮಿ ಭಕ್ತಿಗೀತೆಯನ್ನು ಭಕ್ತ ವೃಂದದ ಸಮ್ಮುಖದಲ್ಲಿ ಶ್ರೀ ನಿತ್ಯಾನಂದ ಸ್ವಾಮೀಜಿಯವರಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಪಾಲ^ರ್ ತಾಲೂಕು ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ರೈ ಹಾಗೂ ಸ್ಥಳೀಯ ಉದ್ಯ ಮಿಗಳು, ಭಜನ ಮಂಡಳಿಯ ಸದಸ್ಯರು, ಭಕ್ತವೃಂದದ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ : ಪಿ. ಆರ್. ರವಿಶಂಕರ್