ಕೊಡಗನ್ನಾಳಿದ ಹಾಲೆೇರಿ ರಾಜ ವಂಶಸ್ಥರ ಆಡಳಿತಾವಧಿಯಲ್ಲಿ ಪುತ್ತರಿ ಹಬ್ಬದ ಬಳಿಕ ಕೋಟೆ ಆವರಣದಲ್ಲಿ ಪುತ್ತರಿ ಕೋಲಾಟ್ ಪಾಂಡೀರ ಕುಟುಂಬಸ್ಥರ ಉಸ್ತುವಾರಿಯಲ್ಲಿ ನಡೆಯುತ್ತಿತ್ತು. ಬ್ರಿಟಿಷರ ಆಳ್ವಿಕೆಯ ಆರಂಭದೊಂದಿಗೆ ಪುತ್ತರಿ ಕೋಲಾಟ್ ಕೋಟೆ ಆವರಣದಿಂದ ಗದ್ದುಗೆಗೆ ಸ್ಥಳಾಂತರಗೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಪುತ್ತರಿ ಕೋಲಾಟ್‌ಗೆ ಪುನಶ್ಚೇತನ ನೀಡಿ, ಹಿಂದಿನಂತೆಯೆ ನಡೆಸುವ ಪರಿಪಾಠವನ್ನು ಆರಂಭಿಸಲಾಗಿದ್ದು, ಅದರಂತೆ ಇಂದು ಕೋಟೆ ಆವರಣದಲ್ಲಿ 7ನೇ ವರ್ಷದ ಪುತ್ತರಿ ಕೋಲಾಟ್ ಸಂಭ್ರಮ ಪಸರಿಸಿತು.
Advertisement
ಜಿಲ್ಲಾಡಳಿತ, ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಆಡಳಿತ ಮಂಡಳಿಯ ಸಹಕಾರದೊಂದಿಗೆ ಪಾಂಡೀರ ಕುಟುಂಬಸ್ಥರ ವತಿಯಿಂದ ಆಯೋಜಿತ ಅರಮನೆ ಕೋಲಾಟ್‌ಗೆ ಜ್ಯೋತಿ ಬೆಳಗುವ ಮೂಲಕ ಶಾಸಕ ರಾದ ಕೆ.ಜಿ. ಬೋಪಯ್ಯ, ಎಂಎಲ್‌ಸಿಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿಗಳಾದ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜ, ಎಡಿಸಿ ಸತೀಶ್ ಕುಮಾರ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್. ದೇವಯ್ಯ ಮೊದಲಾದ ಗಣ್ಯರು ಚಾಲನೆ ನೀಡುವುದರೊಂದಿಗೆ ದುಡಿಯ ನಾದಕ್ಕೆ ತಕ್ಕಂತೆ ಕೋಲಾಟ್ ಪ್ರದರ್ಶನ ಆಕರ್ಷಕವಾಗಿ ಅನಾವರಣಗೊಂಡಿತು.
Related Articles
Advertisement
ಕೋಲಾಟ್‌ನ ಅಂತ್ಯದಲ್ಲಿ ಪಾಂಡೀರ ಕುಟುಂಬದ ಪ್ರಮುಖರನ್ನು ಜಿಲ್ಲಾಧಿಕಾರಿ ಗಳಾದ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜ ಗೌರವಿಸಿದರು.
ಪುತ್ತರಿ ಕೋಲಾಟ್ ಆರಂಭಕ್ಕೂ ಮುನ್ನ ಪಾಂಡೀರ ಕುಟುಂಬಸ್ಥರ ಪರವಾಗಿ ಚೆಟ್ಟಿàರ ಕುಟುಂಬಸ್ಥರು ಶ್ರೀ ಕೋಟೆ ಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಂಡೀರ ಕುಟುಂಬದ ಪಟ್ಟೆದಾರ ಪಾಂಡೀರ ಮೇದಪ್ಪ, ತಕ್ಕ ಮುಖ್ಯಸ್ಥ ಪಾಂಡೀರ ಮೊಣ್ಣಪ್ಪ, ಪಾಂಡೀರ ಕುಟುಂಬದ ಅಧ್ಯಕ್ಷ ಪಾಂಡೀರ ಕರುಂಬಯ್ಯ, ದಿನದ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಚೆಟ್ಟಿàರ ಕುಟುಂಬದ ಚೆೆಟ್ಟಿàರ ನಂಜಪ್ಪ, ಚೆಟ್ಟಿàರ ಮಾದಪ್ಪ, ಚೆಟ್ಟಿàರ ಕಾರ್ಯಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ, ಶ್ರೀ ಓಂಕಾರೇಶ್ವರ ದೇವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ರಮೇಶ್ ಹೊಳ್ಳ, ಸಮಿತಿಯ ಆಡಳಿತಾಧಿಕಾರಿ ಸಂಪತ್ ಕುಮಾರ್ ಸೇರಿದಂತೆ ಹಲ ಗಣ್ಯರು ಪಾಲ್ಗೊಂಡಿದ್ದರು.
ಹೆಜ್ಜೆ ಹಾಕಿದ ಶಾಸಕರುಕೋಲಾಟ್ ಕಾರ್ಯಕ್ರಮದ ಸಮಾರೋಪದ ಬಳಿಕ ಕೊಡಗಿನ ಸಾಂಪ್ರದಾಯಿಕ ಓಲಗಕ್ಕೆ ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‌ಸಿ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ನಾಲ್ಕು ನಾಡಿನಲ್ಲಿ ಸಂಭ್ರಮದ ಹುತ್ತರಿ ಹುತ್ತರಿಯನ್ನು ನಾಲ್ಕುನಾಡು ನಾಪೋಕ್ಲು ವಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಾಲ್ಕುನಾಡು ವ್ಯಾಪ್ತಿಯ ಕೊಳಕೇರಿ, ಕಕ್ಕಬ್ಬೆ, ಪಾಲೂರು, ನೆಲಜಿ ಗ್ರಾಮಗಳಲ್ಲಿ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಮೂಲಕ ಗ್ರಾಮಸ್ಥರು ಅರ್ಥಪೂರ್ಣಗೊಳಿಸಿದರು. ಕೊಡಗಿನ ಜನರ ಆರಾಧ್ಯ ದೈವ ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯದಲ್ಲಿ ನಡೆದ ಹುತ್ತರಿ ಹಬ್ಬಕ್ಕೆ ಗ್ರಾಮಸ್ಥರು ಸಾಕ್ಷಿಯಾದರು. ದೇವಾಲಯದ ಸುತ್ತಮುತ್ತಲ ಗ್ರಾಮಸ್ಥರು ತಳಿಯಕ್ಕಿ ಬೊಳಕ್‌ನೊಂದಿಗೆ ದೇವಾಲಯಕ್ಕೆ ಆಗಮಿಸಿ ದುಡಿಕೊಟ್‌ಪಾಟ್ ನುಡಿಸಿ ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಗದ್ದೆಗೆ ತೆರಳಿದ ಗ್ರಾಮಸ್ಥರು ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿ ನಿಗದಿತ ಸಮಯದಲ್ಲಿ ಕುಶಾಲು ತೋಪು ಸಿಡಿಸಿ ಪೊಲಿ ಪೊಲಿಯೇ ಬಾ ಉದ್ಘೋಷದೊಂದಿಗೆ ಕದಿರನ್ನು ಕೊಯ್ಯಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತರು ಪ್ರದಕ್ಷಿಣೆ ಬಂದು ಕದಿರನ್ನು ನಮಸ್ಕಾರ ಮಂಟಪದಲ್ಲಿರಿಸಿ ಧಾನ್ಯಲಕ್ಷಿ¾ಗೆ ಪೂಜೆಯನ್ನು ಸಲ್ಲಿಸಿದರು. ನಾಪೋಕ್ಲು ಕೊಡವ ಸಮಾಜದ ವತಿಯಿಂದ ಕೂಡ ಸಾಂಪ್ರದಾಯಿಕ ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಟಕೇರಿ: ಸಂಭ್ರಮದ ಹುತ್ತರಿ ಆಚರಣೆ ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಧಾನ್ಯಲಕ್ಷಿಯನ್ನು ಮನೆಗೆ ಬರಮಾಡಿಕೊಳ್ಳುವ ಹುತ್ತರಿ ಹಬ್ಬವನ್ನು ಕಾಟಕೇರಿಯ ಪ್ರಮೀಳ ನಂದಕುಮಾರ್ ಅವರ ಗದ್ದೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮಸ್ಥರು ಧಾನ್ಯಲಕ್ಷ್ಮೀ ಕದಿರನ್ನು ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಿದರು.