Advertisement

ಮೂರು ದಿನಗಳ ಹವ್ಯಕ ಸಮ್ಮೇಳನಕ್ಕೆ ಸಂಭ್ರಮದ ತೆರೆ

12:30 AM Dec 31, 2018 | Team Udayavani |

ಬೆಂಗಳೂರು: ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ನಡೆದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ
ಭಾನುವಾರ ಅದೂಟಛಿರಿ ತೆರೆಬಿದ್ದಿತು. ಕೊನೆಯ ದಿನ ಸಮ್ಮೇಳನಕ್ಕೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಸಮುದಾಯ
ಬಾಂಧವರು ಸಮಾಗಮಗೊಂಡರು. ಇದರಿಂದ ಹವ್ಯಕರ ವಿರಾಟ ರೂಪ ಅನಾವರಣಗೊಂಡಿತು.

Advertisement

ವಿವಿಧ ಉದ್ದೇಶಗಳಿಗೆ ಹರಿದುಹಂಚಿಹೋಗಿದ್ದ ಹವ್ಯಕರು ಸಮ್ಮೇಳನದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದರು. ಆ ಸಂಘಟನೆಯ ಶಕ್ತಿ ಪ್ರದರ್ಶಿಸಿದ ಸಹಸ್ರಾರು ಹವ್ಯಕರು, ಯಾವುದೇ ಕಾರಣಕ್ಕೂ ಮಠ-ಮಾನ್ಯಗಳು, ದೇವಸ್ಥಾನಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ ಎಂಬ ಒಕ್ಕೊರಲ ಸಂದೇಶ ರವಾನಿಸಿದರು.

ವಿರೋಧಗಳು ಸ್ವಾಭಾವಿಕ-ಬಿಎಸ್‌ವೈ: ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಮಾಜದಲ್ಲಿ ವಿರೋಧಗಳು ಮತ್ತು ಸಂಘರ್ಷಗಳು ಸ್ವಾಭಾವಿಕ. ಕಾಲೆಳೆಯುವವರು ಎಲ್ಲ ಕಾಲದಲ್ಲೂ ಇದ್ದಾರೆ. ಅದನ್ನು ಮೀರಿದ ನೈತಿಕ ಶಕ್ತಿ ಮತ್ತು ಸಂಘಟನಾತ್ಮಕ ಹೋರಾಟ ಇರಬೇಕು. ಈ ನಿಟ್ಟಿನಲ್ಲಿ ಹವ್ಯಕ ಸಮಾಜ ಸಂಘಟನೆಗೊಳ್ಳಲಿ ಎಂದು ಹೇಳಿದರು.

ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಮಾತನಾಡಿ, ಕೇವಲ ವ್ಯಕ್ತಿ ಅಥವಾ ವಿಷಯ ಆರಾಧನೆ ಬ್ರಾಹ್ಮಣ್ಯ ಅಲ್ಲ; ಇಡೀ ಸಮಷ್ಠಿಯ ಆರಾಧನೆಯೇ ಬ್ರಾಹ್ಮಣ್ಯ. ಇದನ್ನು ಜಗತ್ತಿಗೆ ತೋರಿಸಬೇಕಿದೆ ಎಂದು ಸಲಹೆ ಮಾಡಿದರು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇ ಸಂದರ್ಭದಲ್ಲಿ ಮಾತನಾಡಿದರು.

ನ್ಯಾಯಾಂಗಕ್ಕೂ ಬೇಕಿದೆ ಹೊಣೆಗಾರಿಕೆ: “ಉಳಿದೆರಡು ಅಂಗಗಳಿಗೆ ಇದ್ದಂತೆ ನ್ಯಾಯಾಂಗದಲ್ಲೂ ಹೊಣೆಗಾರಿಕೆ
(ಅಕೌಂಟಬಿಲಿಟಿ)ಬರಬೇಕು’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶೈಲೇಂದ್ರಕುಮಾರ್‌ ತಿಳಿಸಿದರು. ನ್ಯಾಯಾಂಗ ಅಥವಾ ನ್ಯಾಯಾಧೀಶರಿಗೆ ಹೊಣೆಗಾರಿಕೆ ಎಂಬುದು ಇಲ್ಲವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಇರಬೇಕಾಗುತ್ತದೆ ಎಂದು ತಿಳಿಸಿದರು.

Advertisement

ಇದೇ ವೇಳೆ ಅಖೀಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವದ ಅಂಗವಾಗಿ 75 ಹವ್ಯಕ ಕುಟುಂಬಗಳಿಗೆ ಗೋದಾನ ಮಾಡಲಾಯಿತು. ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ, ಕೂಡಲಿ ಶೃಂಗೇರಿ
ಮಹಾಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ,ಶಾಸಕರಾದ ನಳೀನ್‌ ಕುಮಾರ್‌ ಕಟೀಲು, ರವಿ ಸುಬ್ರಹ್ಮಣ್ಯ,ಡಾ.ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

ನಿರ್ಣಯಗಳು
ದೇಶದ ಸಂಸ್ಕೃತಿ, ಸಂಸ್ಕಾರಗಳ ಸಂರಕ್ಷಣೆ ಹಾಗೂ ಸಂವರ್ಧನೆಯಲ್ಲಿ ತ್ರಿಕರಣಪೂರ್ವಕವಾಗಿ ಕಂಕಣ ಬದ್ಧ.
– ಸನಾತನಧರ್ಮದ ಪ್ರಾವಿತ್ರ್ಯತೆ, ಶ್ರೇಷ್ಠತೆ ಹಾಗೂ ಸರ್ವಮಾನ್ಯತೆ ಕಾಪಾಡುವಲ್ಲಿ ಸದಾ ಸಿದ್ಧ.
– ರಾಮಚಂದ್ರಾಪುರ ಮಠ ಅಥವಾ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾಡಿದ ಎಲ್ಲಾ ಮಿಥ್ಯಾರೋಪಗಳನ್ನು ಹಾಗೂ ಅವಹೇಳನಕಾರಿ ಕೃತ್ಯಗಳು ಖಂಡನೀಯ. ಇನ್ಮುಂದೆ ಯಾವತ್ತೂ ಅಂತಹ ಮಿಥ್ಯಾರೋಪಗಳಿಗೆ ಯಾವುದೇ ವ್ಯಕ್ತಿ, ಸಂಘಟನೆ, ಮಠಗಳು ನೀಡಿದಲ್ಲಿ ಅವುಗಳ ವಿರುದ್ಧ ಸಂಘಟಿತರಾಗಿ ಹೋರಾಟ
– ಯಾವುದೇ ಕಾರಣಕ್ಕೂ ಮಠಮಾನ್ಯ, ದೇವಸ್ಥಾನಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದು ಖಂಡನೀಯ. ಅವುಗಳಿಗೆ ಮೊದಲಿನಂತೆ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಮುಂದುವರಿಸಲು ಸರ್ಕಾರಕ್ಕೆ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next