ಬೆಂಗಳೂರು: ಜಗತ್ತಿನಾದ್ಯಂತ ಜೂನ್ 21ರಂದುಯೋಗ ದಿನ ಆಚರಿಸುತ್ತಿದ್ದು, ಸಾರ್ವಜನಿಕರೆಲ್ಲರೂಮನೆಯಿಂದಲೇ ಆನ್‌ಲೈನ್ ಯೋಗಾಸನ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಆರೋಗ್ಯ ಮತ್ತುವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜೂನ್ 21ರಂದು ಯೋಗ ದಿನವನ್ನು ಆನ್‌ಲೈನ್‌ನಲ್ಲೆ ಆಚರಿಸಲಾಗುತ್ತಿದೆ. ಬಿ ವಿತ್ ಯೋಗ ಬಿ ಅಟ್‌ಹೋಮ್ ಮತ್ತು ಯೋಗ ಫಾರ್ ವೆಲ್ ನೆಸ್‌ಎಂಬಘೋಷವಾಕ್ಯದಡಿ ಯೋಗ ದಿನ ಆಚರಿಸಲಾಗುತ್ತಿದೆ.ಆದರೆ ಈ ಬಾರಿ ಗುಂಪುಗೂಡಿ ಆಚರಿಸಬಾರದು.ಸಿಎಂ ಅಧಿಕೃತ ನಿವಾಸದಲ್ಲೇ ಯೋಗ ಮಾಡಲಿದ್ದು,ನಾನು ಕೂಡ ಪಾಲ್ಗೊಳ್ಳುತ್ತೇನೆ.
ಎಲ್ಲರೂ ಮುಂಜಾನೆ6 ಗಂಟೆಗೆ ಮನೆಯಲ್ಲೇ ಯೋಗ ಮಾಡಿ, ಸಾಮಾಜಿಕಜಾಲತಾಣಗಳಲ್ಲಿ ಹಂಚಿಕೊಳ್ಳಿ ಎಂದುಕೋರಿದ್ದಾರೆ.ವ್ಯಾಸ ಸಂಸ್ಥೆಯ ಗೌರವಾಧ್ಯಕ್ಷ ನಾಗೇಂದ್ರ, ಜಗ್ಗಿವಾಸುದೇವ್, ರವಿಶಂಕರ್ ಗುರೂಜಿ, ವಚನಾನಂದಸ್ವಾಮೀಜಿಗಳ ಯೋಗಾಭ್ಯಾಸದ ವಿಡಿಯೊಹಂಚಿಕೊಳ್ಳಲಾಗುವುದು. ಆಯುಷ್‌ನ ಎಲ್ಲಸಂಸ್ಥೆಗಳ ವಿದ್ಯಾರ್ಥಿಗಳು ಯೋಗ ಮಾಡಲುಕೋರಲಾಗಿದೆ ಎಂದರು.ಲಸಿಕಾ ಮೇಳಕ್ಕೆ 7 ಲಕ್ಷ ಗುರಿ: ಜೂನ್ 21ರಂದುಕೇಂದ್ರ ಸರ್ಕಾರದ ಉಚಿತಕೋವಿಡ್ ಲಸಿಕೆ ಮೇಳಕ್ಕೆಚಾಲನೆ ದೊರೆಯಲಿದೆ. 18-44 ವರ್ಷದವರಿಗೆ,45 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಸಿಬ್ಬಂದಿಗೆಲಸಿಕೆ ನೀಡಲಾಗುವುದು. 14 ಲಕ್ಷ ಕೋವಿಶೀಲ್ಡ…ಡೋಸ್ ದಾಸ್ತಾನು ಇದ್ದು, ಸೋಮವಾರ5 ರಿಂದ 7ಲಕ್ಷ ಡೋಸ್ ನೀಡುವ ಗುರಿ ಇರಿಸಲಾಗಿದೆ.ಇದಕ್ಕೆ ಜನರ ಸಹಕಾರ ಬೇಕಿದೆ. ಈವರೆಗೆ 1.80ಕೋಟಿ ಲಸಿಕೆ ನೀಡಲಾಗಿದೆ. ಕೋವಿಡ್ ಎರಡುಡೋಸ್ ಲಸಿಕೆ ಪಡೆದ ಶೇ.99.9ರಷ್ಟು ಮಂದಿಗೆಸೋಂಕು ತಗುಲಿಲ್ಲ.
ಸೋಂಕು ಬಂದರೂ ತೀವ್ರಸಮಸ್ಯೆಯಾಗಿಲ್ಲ ಎಂದು ತಿಳಿಸಿದರು.ಪರಾಮರ್ಶಿಸಿಯೇ ಅನ್‌ಲಾಕ್ ತೀರ್ಮಾನ:ಅನ್‌ಲಾಕ್ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗಿದೆ.ಪಾಸಿಟಿವಿಟಿ ದರದ ಶೇಕಡಾವಾರು ಪ್ರಮಾಣದಆಧಾರದಲ್ಲಿ ಯಾವ ಜಿÇÉೆಗಳಲ್ಲಿ ಯಾವ ಕ್ರಮವಹಿಸಬೇಕೆಂಬುದನ್ನು ಮುಖ್ಯಮಂತ್ರಿಗಳಿಗೆತಿಳಿಸಲಾಗಿದೆ. ಪಾಸಿಟಿವಿಟಿ ದರ 16 ಜಿಲ್ಲೆಗಳಲ್ಲಿಶೇ.5ಕ್ಕಿಂತ ಕಡಿಮೆ ಮತ್ತು 13 ಜಿಲ್ಲೆಗಳಲ್ಲಿ ಶೇ.5ರಿಂದ ಶೇ.10ರಷ್ಟಿದೆ. ಮೈಸೂರಿನಲ್ಲಿ ಶೇ.10ಕ್ಕಿಂತಹೆಚ್ಚಿದೆ ಎಂದು ಮಾಹಿತಿ ನೀಡಿದರು.