Advertisement

ಸಾಂಪ್ರದಾಯಿಕ ದಸರಾ ಆಚರಿಸೋಣ: ಡಾ.ಮಹದೇವಪ್ಪ

11:41 AM Aug 13, 2017 | Team Udayavani |

ಮೈಸೂರು: ಸಂವಿಧಾನ-ಪ್ರಜಾಸತ್ತೆ-ಸಮಾನತೆಯ ಘೋಷ ವಾಕ್ಯದೊಂದಿಗೆ ಈ ವರ್ಷ ಸಾಂಪ್ರದಾಯಿಕ ದಸರಾ ಆಚರಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

Advertisement

ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆಯ ಬಳಿ ಗಜಪಯಣಕ್ಕೆ ಚಾಲನೆ ನೀಡಿದ ನಂತರ ಗುರುಪುರ ಟಿಬೆಟಿಯನ್‌ ನಿರಾಶ್ರಿತರ ಕೇಂದ್ರದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತಿಹಾಸದಲ್ಲಿ ಕರ್ನಾಟಕದ ಗತವೈಭವವನ್ನು ಸಾರಿದ ವಿಜಯನಗರ ಸಾಮ್ರಾಜ್ಯದ ಬಳುವಳಿಯಾದ ದಸರಾ ಮಹೋತ್ಸವವನ್ನು ಮೈಸೂರು ಅರಸು ಮುಂದುವರೆಸಿದ್ದು, ಸರ್ಕಾರ ಕೂಡ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ ಎಂದರು.

ಕಳೆದ ಎರಡು-ಮೂರು ವರ್ಷಗಳಿಂದ ಸತತ ಬರಗಾಲವಿದ್ದು, ಈ ವರ್ಷ ಕೂಡ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಕಳೆದ 41 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಿದೆ ಈ ವರ್ಷ. ಪ್ರಕೃತಿಯ ಈ ವಿಕೋಪ, ಜನರಲ್ಲಿ ಆತಂಕ ಮೂಡಿಸಿದೆ. ಮಾನವನ ಮಿತಿಮೀರಿದ ದುರಾಸೆಯಿಂದ ಅರಣ್ಯ- ಪ್ರಕೃತಿಯ ಸಮತೋಲನ ನಾಶಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ತಿಳಿಸಿದರು.

ಈ ವರ್ಷದ ಶೇ.65ರಷ್ಟು ಮಳೆ ಅವಧಿ ಮುಗಿದಿದೆ. ಆದರೂ ಈ ಭಾಗದ ಜಲಾಶಯಗಳು ಭರ್ತಿಯಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆ.14ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದಿದ್ದು, ಈ ಸಭೆಯಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಮಾಹಿತಿ ಪಡೆದು ಸಂಕಷ್ಟ ಸೂತ್ರ ಪಾಲನೆ ವಿಧಾನದಂತೆ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ, ಅರೆ ನೀರಾವರಿ ಬೆಳೆಗಳಿಗೆ ಹೋಗುವ ತೀರ್ಮಾನ ಮಾಡಲಾಗುವುದು ಎಂದರು.

ಮಳೆಯ ಅಭಾವದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡ ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಪಡೆದ 50 ಸಾವಿರ ರೂ. ಗಳವರೆಗಿನ ಕೃಷಿ ಸಾಲಮನ್ನಾ ಮಾಡಿದೆ. ಇದರಿಂದ 22 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಿರುವ ಸಂವಿಧಾನ ದುರ್ಬಲಗೊಳ್ಳುತ್ತಿದೆ. ಭಯದಲ್ಲಿಟ್ಟು ಜನರ ಹಕ್ಕು ಕಸಿದುಕೊಳ್ಳುವ ಅಪಾಯ ಎದುರಾಗಿದೆ.

Advertisement

ಇಂತಹ ಕೋಮುಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಂವಿಧಾನದ ರಕ್ಷಣೆ ಅಗತ್ಯವಿದೆ. ಕೋಮುಶಕ್ತಿಗಳ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ರಕ್ಷಣೆಯ ಮುಖಾಂತರ ಪ್ರಜಾಪ್ರಭುತ್ವವ ಕಾಪಾಡಿಕೊಳ್ಳಬೇಕು. ಈ ಬಾರಿಯ ದಸರಾವನ್ನು ಸಂವಿಧಾನ, ಪ್ರಜಾಸತ್ತೆ ಮತ್ತು ಸಮಾನತೆ ಮೂಲವಾಗಿ ಇಟ್ಟಿಕೊಂಡು ಆಚರಿಸೋಣ ಎಂದರು.

ಶಾಸಕ ಎಚ್‌.ಪಿ.ಮಂಜುನಾಥ್‌ ಮಾತನಾಡಿ, ಸತತ ಬರಗಾಲದಿಂದ ಮುಂದಿನ ದಿನಗಳಲ್ಲಿ ûಾಮದ ಕಡೆಗೆ ಹೋಗುವ ಭಯವಿದೆ. ತಾಲೂಕಿನಲ್ಲಿ ಕಳೆದ ವರ್ಷ ಶೇ.50ರಷ್ಟು ಕೆರೆಗಳು ತುಂಬಿತ್ತು. ಈ ವರ್ಷ ಶೇ.19ರಷ್ಟು ಕೆರೆಗಳೂ ತುಂಬಿಲ್ಲ. ಆದಷ್ಟು ಬೇಗ ಮಳೆಯಾಗಿ ಕೆರೆ  ಕಟ್ಟೆಗಳು ತುಂಬಿ ಜನ- ಜಾನುವಾರುಗಳಿಗೆ ಕುಡಿಯುವ ನೀರು ಸಿಗುವಂತಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ  ದಸರಾ ವೆಬ್‌ಸೈಟ್‌ ಚಾಲನೆ ನೀಡಿದ ಸಚಿವ ಮಹದೇವಪ್ಪ, ಆನೆಗಳ ಬಗ್ಗೆ ನಿರ್ಮಿಸಿರುವ ಕಿರುಚಿತ್ರ ಗಜ ಬಿಡುಗಡೆ ಮಾಡಿದರು. ಮಾವುತರು ಹಾಗೂ ಕಾವಡಿಗಳಿಗೆ ತಾಂಬೂಲ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next