ಹರಿಯಾಣ: ಹರಿಯಾಣದ ಪ್ರಾಣಿ ದಯಾ ಸಂಘ ವ್ಯಾಲೆಂಟೈನ್ಸ್ ಡೇ ಬದಲು ಹಸುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಿ ಎಂದು ಬರೆದ ಪತ್ರವೋಂದು ಭಾರೀ ವೈರಲ್ ಆಗಿದೆ.
ಪ್ರಾಣಿ ದಯಾ ಸಂಘವು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುತ್ತಿದ್ದು ಪತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ.
ಪತ್ರದಲ್ಲಿ ಹಸುಗಳ ಮಹತ್ವ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಹಸುಗಳ ಪಾತ್ರದ ಬಗ್ಗೆ ಬರೆದುಕೊಂಡಿದೆ. ಈದೀಗ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಹಸುಗಳು ದೇಶದ ಸಂಸ್ಕೃತಿ ಮತ್ತು ಆರ್ಥಿಕತೆಯ ಬೆನ್ನೆಲುಬು. ಅವುಗಳನ್ನು ʻಕಾಮಧೇನುʼ ಮತ್ತು ʻಗೌತಮʼ ಎಂದು ಕರೆಯುತ್ತಾರೆ. ಯಾಕಂದ್ರೆ ಅದು ಪ್ರಕೃತಿಯನ್ನು ತಾಯಿಯಂತೆ ನೋಡುತ್ತದೆʼ ಎಂದು ಹೇಳಿದೆ.
ಹಸುವನ್ನು ತಬ್ಬಿಕೊಳ್ಳುವುದು ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಅಲ್ಲದೆ ಅದು ನಮಗೆ ವೈಯಕ್ತಿಕ ಸಂತೋಷವನ್ನು ವೃದ್ಧಿಸುತ್ತದೆ ಎಂದು ಹೇಳಿದೆ. ಆದರೆ ಈ ಪತ್ರಕ್ಕೆ ಟಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಅದನ್ನು ಪ್ರಶಂಸಿಸಿದ್ರೆ ಇನ್ನೂ ಕೆಲವರು ಪತ್ರ ಯಾವುದೇ ಪರಿಣಾಮ ಬೀರದು ಎಂದು ಬರೆದಿದ್ದಾರೆ.