Advertisement

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಕೊನೆಯ ಸಂದೇಶ ಬಿಡುಗಡೆ

01:41 PM Dec 12, 2021 | Team Udayavani |

ನವ ದೆಹಲಿ : ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿಯುವ ಒಂದು ದಿನದ ಮೊದಲು ರಕ್ಷಣಾ ಸಿಬ್ಬಂದಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಕೊನೆಯ ಸಾರ್ವಜನಿಕ ಸಂದೇಶ ಬಿಡುಗಡೆಯಾಗಿದೆ.

Advertisement

”ನಾವು ನಮ್ಮ ಸೇನೆ ಬಗ್ಗೆ ಹೆಮ್ಮೆಪಡುತ್ತೇವೆ, ಒಟ್ಟಿಗೆ ವಿಜಯವನ್ನು ಆಚರಿಸೋಣ” ಎಂದು ರಾವತ್ ಹೇಳಿರುವ 1.09 ನಿಮಿಷಗಳ ವೀಡಿಯೊ ಕ್ಲಿಪ್ ಅನ್ನು ಭಾರತೀಯ ಸೇನೆ ಭಾನುವಾರ ಬಿಡುಗಡೆ ಮಾಡಿದೆ.

1971 ರ ಯುದ್ಧದ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜನರಲ್ ರಾವತ್ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಅಭಿನಂದಿಸಿದ ಮತ್ತು ಮಡಿದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವೇಳೆ ಈ ಮಾತುಗಳನ್ನು ಆಡಿದ್ದರು.

ಡಿಸೆಂಬರ್ 7 ರ ಸಂಜೆ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಡಿಸೆಂಬರ್ 8 ರಂದು ಕೂನೂರ್ ಬಳಿ ನಡೆದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ರಾವತ್, ಅವರ ಪತ್ನಿ ಸೇರಿ 13 ಜನ ಮಡಿದಿದ್ದರು.

Advertisement

ಇದನ್ನೂ ಓದಿ :ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಆರಗ

ವೀಡಿಯೊ ಕ್ಲಿಪ್‌ನಲ್ಲಿ, ಜನರಲ್ ರಾವತ್ ಅವರು 1971 ರ ಪಾಕಿಸ್ಥಾನದೊಂದಿಗಿನ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ವಿಜಯದ 50 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದ್ದರು.

ಇಂಡಿಯನ್ ಗೇಟ್ ಕಾಂಪ್ಲೆಕ್ಸ್‌ನಲ್ಲಿ ನಡೆದ ‘ವಿಜಯ್ ಪರ್ವ್’ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಈ ವೀಡಿಯೊವನ್ನು ಪ್ಲೇ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ದೇಶದ ಉನ್ನತ ಸೇನಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next